Advertisment

ದರ್ಶನ್ ಇರೋ ಜೈಲಿಗೆ ₹100 ಕೋಟಿ ಖರ್ಚು ಮಾಡ್ತಾರಾ.. ಜೈಲು ಸುಧಾರಣೆ ಬಗ್ಗೆ DIG ಹೇಳಿದ್ದೇನು?

author-image
Bheemappa
Updated On
ದರ್ಶನ್ ಇರೋ ಜೈಲಿಗೆ ₹100 ಕೋಟಿ ಖರ್ಚು ಮಾಡ್ತಾರಾ.. ಜೈಲು ಸುಧಾರಣೆ ಬಗ್ಗೆ DIG ಹೇಳಿದ್ದೇನು?
Advertisment
  • ಬೆಂಗಳೂರಿನಿಂದ ಬಳ್ಳಾರಿಗೆ ದರ್ಶನ್​ರನ್ನ ಸ್ಥಳಾಂತರ ಮಾಡಲಾಗಿದೆ
  • ಕೈದಿಗಳಲ್ಲಿ ಸಿಗರೇಟ್, ಮೊಬೈಲ್ ಬಗ್ಗೆ ಡಿಐಜಿ ಟಿಪಿ ಶೇಷಾ ಏನಂದ್ರು?
  • ಒಂದು ಜೈಲಿಗೆ ಸರ್ಕಾರ ಎಷ್ಟು ಕೋಟಿ ರೂ.ಗಳನ್ನ ಖರ್ಚು ಮಾಡುತ್ತೆ?

ಬಳ್ಳಾರಿ: ದರ್ಶನ್ ಅವರ ಸಿಗರೇಟ್ ಪಾರ್ಟಿ ಫೋಟೋ ವೈರಲ್ ಆದ ಮೇಲೆ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತ ಮಾಡಲಾಗಿದೆ. ಆದರೆ ಈ ನಡುವೆ ಜೈಲಿನ ಒಳಗೆ ಕೈದಿಗಳಿಗೆ ಸಿಗರೇಟ್, ಮೊಬೈಲ್ ಸಿಗುತ್ತಿವೆ ಎಂದು ದೊಡ್ಡಮಟ್ಟದಲ್ಲಿ ಕೇಳಿ ಬರುತ್ತಿದೆ. ಸದ್ಯ ಈ ಸಂಬಂಧ ಡಿಐಜಿ ಟಿಪಿ ಶೇಷಾ ಮಾತನಾಡಿದ್ದಾರೆ.

Advertisment

ಇದನ್ನೂ ಓದಿ: ಬಳ್ಳಾರಿಯಲ್ಲಿ ದರ್ಶನ್ ಇರಲಿರುವ ಹೈ ಸೆಕ್ಯೂರಿಟಿ ಸೆಲ್‌ ಹೇಗಿದೆ.. 3 ದಶಕಗಳ ಹಿಂದೆ ನಿರ್ಮಿಸಿದ ಇದರ ಇತಿಹಾಸ ಗೊತ್ತಾ? 

ಮಾಧ್ಯಮದವರೊಂದಿಗೆ ಮಾತನಾಡಿದ ಡಿಐಜಿ ಟಿಪಿ ಶೇಷಾ ಅವರು, ದರ್ಶನ್​ ಅವರನ್ನು ಬೇರೆ ಸೆಲ್‌ಗೆ ಸ್ಥಳಾಂತರ ಮಾಡಲ್ಲ.​ ಜೈಲು ಅಧಿಕಾರಿಗಳ ಬಳಿ ಸರ್ಜಿಕಲ್ ಚೇರ್‌ಗೆ ದರ್ಶನ್ ಮನವಿ ಮಾಡಿದ್ದಾರೆ. ಈ ಬಗ್ಗೆ ಮೆಡಿಕಲ್ ರಿಪೋರ್ಟ್ ಪರಿಶೀಲನೆ ಮಾಡಿ ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ. ಕೇಂದ್ರ ಕಾರಾಗೃಹದಲ್ಲಿ ಜಾಮರ್ ವರ್ಕ್ ಆಗುತ್ತಿಲ್ಲ. ಹೀಗಾಗಿ ಹೊಸ ಜಾಮರ್ ಅಳವಡಿಕೆ ಮಾಡಲಾಗುವುದು. ಎಂದು ಹೇಳಿದ್ದಾರೆ.

ಇದನ್ನೂ ಓದಿ:ದರ್ಶನ್ ಕೈಯಲ್ಲಿ ಸಿಗರೇಟ್​, ಟೀ ಕುಡಿಯೋ ಮಗ್ ಜೊತೆ ಬೆಳ್ಳಿ ಕಡಗ; ಸೆಂಟ್ರಲ್ ಜೈಲ್ ಅಂದ್ರೆ ಹೀಗೆನಾ?

Advertisment

publive-image

ಜೈಲಿನ ಒಳಗೆ ಕೈದಿಗಳಿಗೆ ಯಾವುದೇ ಮೊಬೈಲ್, ಸಿಗರೇಟ್ ಸಿಗುತ್ತಿಲ್ಲ. ಈಗಲೂ ಕೈದಿಗಳು ಯಾವುದೇ ಮೊಬೈಲ್​ ಬಳಕೆ ಮಾಡುತ್ತಿಲ್ಲ. ಸಿಗರೇಟ್ ಸೇರಿ ಇತರೆ ವಸ್ತುಗಳನ್ನು ತಂದವರ ಮೇಲೆ ಕೇಸ್ ಹಾಕಲಾಗುತ್ತಿದೆ. ಜೈಲಿನ ವ್ಯವಸ್ಥೆ ಸರಿಪಡಿಸಲಾಗುತ್ತಿದೆ. ಕೆಲ ದ್ವೇಷವಿಟ್ಟುಕೊಂಡು ತಪ್ಪು ಮಾಹಿತಿ ಹೇಳುತ್ತಿದ್ದಾರೆ. ಜೈಲು ಅಭಿವೃದ್ಧಿಗೆ ಎಂದೇ ಒಂದೊಂದು ಜೈಲಿಗೆ ಸರ್ಕಾರ 100 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಇದರಿಂದ ಬಳ್ಳಾರಿ ಜೈಲು ಸುಧಾರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment