Advertisment

ದರ್ಶನ್​ಗಾಗಿ ಕನ್ನಡ ಇಂಡಸ್ಟ್ರಿ ಹೋಮ ಮಾಡಿಸ್ತಿದೆಯಾ..? ಅನುಮಾನಗಳಿಗೆ ನಿರ್ಮಾಪಕ ರಾಕ್​ಲೈನ್ ಸ್ಪಷ್ಟನೆ

author-image
Bheemappa
Updated On
ದರ್ಶನ್​ಗಾಗಿ ಕನ್ನಡ ಇಂಡಸ್ಟ್ರಿ ಹೋಮ ಮಾಡಿಸ್ತಿದೆಯಾ..? ಅನುಮಾನಗಳಿಗೆ ನಿರ್ಮಾಪಕ ರಾಕ್​ಲೈನ್ ಸ್ಪಷ್ಟನೆ
Advertisment
  • ಕಲಾವಿದರ ಸಂಘದಲ್ಲಿ ಯಾವ ಯಾವ ಪೂಜೆ ಮಾಡಲಿದ್ದಾರೆ?
  • ಹೋಮಗಳು ಮಾಡುವ ಕುರಿತು ಹಿರಿಯ ನಟ ದೊಡ್ಡಣ್ಣ ಸ್ಪಷ್ಟನೆ
  • ಶಿವಣ್ಣ, ಸುದೀಪ್​ ಸೇರಿ ಹಲವು ನಟ, ನಟಿಯರಿಗೆ ಆಹ್ವಾನ

ಕನ್ನಡ ಚಿತ್ರರಂಗಕ್ಕೆ ಮಂಕು ಕವಿದಿದ್ಯಾ ಗೊತ್ತಿಲ್ಲಾ?. ಈ ಪ್ರಶ್ನೆ ಸದ್ದು ಮೂಡೋದಕ್ಕೆ ಕಾರಣ ಆಗಸ್ಟ್​ 14 ರಂದು ಕಲಾವಿದರ ಸಂಘದಲ್ಲಿ ನಡೆಯುತ್ತಿರುವ ಹೋಮ ಹವನದ ಸುದ್ದಿ.. ಈ ವಿಶೇಷ ಪೂಜೆ ಜೈಲು ಹಕ್ಕಿ ದರ್ಶನ್​ಗಾಗಿ ಮಾಡಲಾಗ್ತಿದೆ ಅನ್ನೋ ಊಹಾಪೋಹಗಳಿಗೆ ರೆಕ್ಕೆ ಬಂದಿತ್ತು. ಆದ್ರೆ, ಅದಕ್ಕೆಲ್ಲ ಕ್ಲಾರಿಟಿ ಸಿಕ್ಕಿದೆ.

Advertisment

ಎತ್ತ ಸಾಗುತ್ತಿದೆ ಕನ್ನಡ ಚಿತ್ರರಂಗ? ಹೋಮದ ಅಸಲಿಯತ್ತೇನು?

ಆಗಸ್ಟ್ 14.. ಅಂದ್ರೆ ಬುಧವಾರ.. ಸ್ಯಾಂಡಲ್​ವುಡ್ ಪಾಲಿಗೆ ಶುಭ ದಿನವಾಗಲಿದೆ. ಯಾಕಂದ್ರೆ ಅಂದು ಚಿತ್ರರಂಗದ ಒಳಿತಿಗಾಗಿ ವಿಶೇಷವಾದ ಪೂಜೆ ಹೋಮ ಹವನ ನಡೆಯೋದು ಫಿಕ್ಸ್ ಆಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳಿರೋದ್ರಿಂದ ಪರಿಹಾರ ಕಂಡುಕೊಳ್ಳಲು ಕಲಾವಿದರ ಸಂಘದಲ್ಲಿ ಹೋಮ ಹವನ ನಡೆಯಲಿದೆ.

ಇದನ್ನೂ ಓದಿ: RCBಗೆ ರಿಟೇನ್ ಆಗೋ 6 ಪ್ಲೇಯರ್ಸ್ ಇವರೇನಾ..​ ರೆಡ್ ಆರ್ಮಿಯಲ್ಲಿ ಕೊಹ್ಲಿ, ಮ್ಯಾಕ್ಸಿ ಸ್ಥಾನ ಸೇಫಾ?

publive-image

‘ನಟ ದರ್ಶನ್​ಗಾಗಿ ನಾವು ಪೂಜೆ, ಹೋಮ ಮಾಡಿಸ್ತಿಲ್ಲ’

ಅದ್ಯಾವಾಗ ಕಲಾವಿದರ ಸಂಘದಲ್ಲಿ ಹೋಮ ಅನ್ನೋ ವಿಚಾರ ಹೊರಬೀಳ್ತಿದ್ದಂತೆ ಹಲವು ಊಹಾ ಪೋಹಗಳಿಗೆ ತೆರೆ ಬಿದ್ದಿದೆ.. ಈ ಪೂಜೆಯನ್ನ ಪರಪ್ಪನ ಅಗ್ರಹಾರದ ನಿವಾಸಿಯಾಗಿರುವ ದರ್ಶನ್​ ಅವರಿಗಾಗಿ ಮಾಡ್ತಿರುವ ಪೂಜೆ ಅನ್ನೋ ಆರೋಪ ಕೇಳಿ ಬಂದಿತ್ತು. ಆದ್ರೀಗ ಈ ಎಲ್ಲ ಆರೋಪಗಳಿಗೆಲ್ಲ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಕ್ಲಾರಿಟಿ ಕೊಟ್ಟಿದ್ದಾರೆ.

Advertisment

‘ಚಿತ್ರರಂಗದ ಉಳಿವಿಗಾಗಿ ಪೂಜೆ’

ಚಿತ್ರರಂಗದ ಏಳಿಗೆಗೋಸ್ಕರ, ನಾವು ಹೋಮ, ಪೂಜೆ ಮಾಡಬೇಕು ಎಂದುಕೊಂಡಿದ್ದೇವೆ. ಈ ಬಗ್ಗೆ ಈಗಾಗಲೇ ಪ್ಲಾನ್ ಮಾಡಿಕೊಳ್ಳಲಾಗಿದೆ. ದರ್ಶನ್​ಗಾಗಿ ಪೂಜೆ ಮಾಡಬೇಕು ಅಂದರೆ 100 ದೇವಾಲಯದಲ್ಲಿ ಪೂಜೆ ಮಾಡಿಸ್ತೀನಿ. ಇಲ್ಲೇ ಪೂಜೆ ಮಾಡಬೇಕೆಂದು ನನಗೇನು ಇಲ್ಲ. ದರ್ಶನ್​ಗೋಸ್ಕರ ಪೂಜೆ ಮಾಡಲಾಗುತ್ತಿದೆ ಎಂದು ಅನ್ಕೋಂಡರೇ ದಯವಿಟ್ಟು ಕ್ಷಮಿಸಿ. ಇದು ಅವರಿಗಾಗಿ ಅಲ್ಲ, ಚಿತ್ರರಂಗದ ಅಭಿವೃದ್ಧಿಗಾಗಿ ಮಾಡಲಾಗುತ್ತಿದೆ.

ರಾಕ್ ಲೈನ್ ವೆಂಕಟೇಶ್, ಕಲಾವಿದರ ಸಂಘದ ಕಾರ್ಯದರ್ಶಿ

ಇದನ್ನೂ ಓದಿ: ಕೊಹ್ಲಿ, ಜಡ್ಡು, ರೈನಾ ಸೇರಿ 6 ಆಟಗಾರರ​ ರೆಸ್ಟೋರೆಂಟ್​ ಬ್ಯುಸಿನೆಸ್​ ಸಕ್ಸಸ್​.. ಬೆಂಗಳೂರಲ್ಲಿ ಯಾವ ಪ್ಲೇಯರ್​ದಿದೆ? 

publive-image

ಅಂದು ಯಾವ್ಯಾವ ಹೋಮ.. ಯಾವ್ಯಾವ ಪೂಜೆ ಇರಲಿದೆ?

ಕಲಾವಿದರ ಸಂಘದಲ್ಲಿ ಯಾವ ಯಾವ ಪೂಜೆ ಇರಲಿದೆ. ಯಾವೆಲ್ಲ ಹೋಮಗಳು ನಡೆಯಲಿದೆ ಅನ್ನೋ ಕುತೂಹಲಕ್ಕೆ ಹಿರಿಯ ನಟ ದೊಡ್ಡಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ. ಮೊದಲಿಗೆ ಗಣ ಹೋಮ,ಮೃತ್ಯಂಜಯ ಹೋಮ, ಸರ್ಪ ಶಾಂತಿ, ಮುಂತಾದ ಹೋಮಗಳ ಮಂತ್ರಗಳ ಪಠಣ ಇರಲಿದೆ ಅನ್ನೋ ಮಾಹಿತಿ ಇದೆ.

Advertisment

ಇದನ್ನೂ ಓದಿ: ಚಾಮುಂಡಿ ಬೆಟ್ಟದ ಮೇಲಿದೆಯಾ ಸಿದ್ದರಾಮಯ್ಯ ಸರ್ಕಾರದ ಕಣ್ಣು..? ರಿಟ್ ಅರ್ಜಿ ಸಲ್ಲಿಸಿದ ರಾಜಮಾತೆ

ಕನ್ನಡ ಚಿತ್ರರಂಗದಲ್ಲಿ ನಿರ್ವಿಘ್ನವಾಗಿ ಎಲ್ಲ ಕೆಲಸ ಆಗಲಿ ಅಂತ ಹೋಮ ಹವನ ಮಾಡಲಾಗ್ತಿದೆ. ಈ ಶುಭ ಕಾರ್ಯಕ್ಕೆ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಸೇರಿ ಹಲವು ನಟ ನಟಿಯರಿಗೆ ಆಹ್ವಾನ ನೀಡಲಾಗಿದೆ. ಅದೇನೇ ಹೇಳಿ, ಇನ್ಮೇಲಾದ್ರೂ ಕಾಲಿ ಹೊಡೆಯುತ್ತಿರುವ ಚಿತ್ರಮಂದಿರಗಳು ಭರ್ತಿಯಾಗಲಿ, ನಷ್ಟದಲ್ಲಿರುವ ಸ್ಯಾಂಡಲ್​ವುಡ್​ಗೆ ಮರುಜೀವ ಸಿಗ್ಲಿ ಎಂದು ಆಶಿಸೋಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment