Advertisment

ದರ್ಶನ್ ಇಂದು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ.. ಅದಕ್ಕೆ ಪೊಲೀಸರು ಏನ್ ಮಾಡಿದ್ದಾರೆ ಗೊತ್ತಾ?

author-image
AS Harshith
Updated On
ದರ್ಶನ್ ಇಂದು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ.. ಅದಕ್ಕೆ ಪೊಲೀಸರು ಏನ್ ಮಾಡಿದ್ದಾರೆ ಗೊತ್ತಾ?
Advertisment
  • ದರ್ಶನ್ ಪರ ವಾದ ಮಾಡಲಿರುವ ಸಿ.ವಿ. ನಾಗೇಶ್‌
  • ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ತಯಾರಿ!
  • ದರ್ಶನ್ ಪರಿಸ್ಥಿತಿಗೆ ನಿರ್ದೇಶಕ ಓಂ ಪ್ರಕಾಶ್ ರಾವ್​​ ಬೇಸರ

ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಪತಿ ದರ್ಶನ್​​ರನ್ನು ಬಿಡಿಸಿಕೊಳ್ಳಲು ಪತ್ನಿ ವಿಜಯಲಕ್ಷ್ಮಿ ಭಾರಿ ಕಸರತ್ತು ನಡೆಸ್ತಿದ್ದಾರೆ. ಹಿರಿಯ ವಕೀಲ ಸಿ.ವಿ.ನಾಗೇಶ್​ ನೇಮಿಸಿದ್ದು ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ. ಅತ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳನ್ನು ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಮತ್ತೊಂದೆಡೆ ನಟ ದರ್ಶನ್ ಪರಿಸ್ಥಿತಿ ನೆನೆದು ನಿರ್ದೇಶಕ ಓಂಪ್ರಕಾಶ್ ರಾವ್ ಬೇಸರ ಹೊರ ಹಾಕಿದ್ದಾರೆ.

Advertisment

ಇದು ಪ್ರಾಯಶ್ಚಿತ್ತದ ಕಾಲ. ಹೇಯ ಕೃತ್ಯಕ್ಕೆ ಶಿಕ್ಷೆ ಅನುಭವಿಸುವ ಕಾಲ. ಪಟ್ಟಣಗೆರೆ ಶೆಡ್​​​ನಲ್ಲಿ ಅಟ್ಟಹಾಸ ಮೆರೆದವರು ಪಶ್ಚಾತ್ತಾಪ ಪಡುವ ಕಾಲ. ತಪ್ಪಿಗೆ ಶಿಕ್ಷೆ ಪರಪ್ಪನ ಅಗ್ರಹಾರ ಜೈಲು. ಹತ್ಯೆ ಪ್ರಕರಣದ ಬಳಿಕ ದರ್ಶನ್​​ನಿಂದ ಹಲವರು ದೂರ. ಆದ್ರೆ ಪತಿ ಎಷ್ಟೇ ಕ್ರೂರಿಯಾದ್ರೂ ಆತನ ಬೆನ್ನಿಗೆ ನಿಂತಿರೋದು ಮಾತ್ರ ಪತ್ನಿ ವಿಜಯಲಕ್ಷ್ಮಿ. ಪತಿಯನ್ನು ಸಂಕಟದಿಂದ ಪಾರು ಮಾಡಲು ಪತ್ನಿಯ ಶತಪ್ರಯತ್ನ.

publive-image

ದರ್ಶನ್ ಪರ ವಾದ ಮಾಡಲು ಸಿ.ವಿ.ನಾಗೇಶ್ ನೇಮಕ

ರೇಣುಕಾಸ್ವಾಮಿ ಹತ್ಯೆ ಕೇಸ್​​ನಲ್ಲಿ ನಟ ದರ್ಶನ್ ಗ್ಯಾಂಗ್ ಜೈಲು ಸೇರಿದೆ. ಪ್ರಕರಣದಿಂದ ದರ್ಶನ್ ಅಭಿಮಾನಿಗಳು, ಸ್ಯಾಂಡಲ್​ವುಡ್ ಸೇರಿ ರಾಜ್ಯಕ್ಕೆ ಮುಜುಗರ ಆಗಿದೆ. ದರ್ಶನ್​ ಅಣ್ಣ ಅಂತ ಸದಾ ಜೊತೆಗಿದ್ದ ಅನೇಕರು ಇಂದು ಮಾಯವಾಗ್ಬಿಟ್ಟಿದ್ದಾರೆ. ಇಂತದ್ರಲ್ಲಿ ಏಕಾಂಗಿಯಾಗಿರೋ ದರ್ಶನ್ ಬೆನ್ನಿಗೆ ನಿಂತಿದ್ದು ಮಾತ್ರ ಪತ್ನಿ ವಿಜಯಲಕ್ಷ್ಮಿ ಮಾತ್ರ. ದರ್ಶನ್ ವಿರುದ್ಧ ದಾಖಲಾಗಿರುವ ಸೆಕ್ಷನ್​​ಗಳು ದೀರ್ಘಕಾಲ ಜೈಲೊಳಗೆ ಬಂಧಿಯಾಗುವ ಸೂಚನೆ ನೀಡಿವೆ. ಹೀಗಾಗಿ ಒಳ್ಳೆಯ ವಕೀಲರನ್ನು ಹಿಡಿದು ಪತಿಯನ್ನು ಕಂಟಕದಿಂದ ಪಾರು ಮಾಡಲು ವಿಜಯಲಕ್ಷ್ಮಿ ಶತಪ್ರಯತ್ನ ನಡೆಸ್ತಿದ್ದಾರೆ. ಹೆಸರಾಂತ ವಕೀಲ ಸಿ.ವಿ.ನಾಗೇಶ್​​ರನ್ನು ನೇಮಿಸಿದ್ದು ಜಾಮೀನು ಅರ್ಜಿ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ.

publive-image

ಇದನ್ನೂ ಓದಿ:ಹಿರಿಮಗ, ಕಿರಿಮಗ ಇಬ್ಬರೂ ಜೈಲಲ್ಲಿ.. ಸಂಕಷ್ಟಕ್ಕೆ ಸಿಲುಕಿದ ರೇವಣ್ಣ.. ಇಂದು ನಡೆಯಲಿದೆ ಮಹತ್ವದ ಬೆಳವಣಿಗೆ

Advertisment

ಸ್ಥಳೀಯ ಕೋರ್ಟ್‌ನಲ್ಲಿ ಬೇಲ್ ರಿಜೆಕ್ಟ್ ಆದ್ರೆ ಹೈಕೋರ್ಟ್​ ಮೊರೆ

ಜಾಮೀನಿಗಾಗಿ ದರ್ಶನ್‌ ಪರ ವಕೀಲರ ತಯಾರಿ ನಡೆಸಿದ್ದು ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಾಡಲಿದ್ದಾರೆ. ಹೀಗಾಗಿ ಇಂದು ಜಾಮೀನು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಆದ್ರೆ ಆರೋಪಿಗಿ ಹಣಬಲ, ಅಭಿಮಾನಿಗಳ ಬಲ ಇದ್ದು ರಿಮ್ಯಾಂಡ್‌ ಅರ್ಜಿಯಲ್ಲೇ ಸಾಕ್ಷಿಗಳಿಗೆ ಬೆದರಿಕೆ ಅಂಶವನ್ನು ಉಲ್ಲೇಖಿಸಲಾಗಿದೆ. ಜಾಮೀನು ನೀಡದಂತೆ ಪೊಲೀಸರು ಪ್ರಬಲವಾಗಿ ಮನವಿ ಸಲ್ಲಿಸಿದ್ದಾರೆ. ಸ್ಥಳೀಯ ಕೋರ್ಟ್‌ನಲ್ಲಿ ಬೇಲ್ ರಿಜೆಕ್ಟ್ ಆದ್ರೆ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.

publive-image

ಇದನ್ನೂ ಓದಿ: ವಿಜಯ್‌ ಮಲ್ಯ ಮಗನ ಅದ್ಧೂರಿ ಮದುವೆಯ ಪೋಟೋ ವೈರಲ್‌! ಯಾರ್ ಯಾರು ಬಂದಿದ್ರು?

ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ತಯಾರಿ!

ಇನ್ನು ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿ ಎಲ್ಲಾ 17 ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ಎಲ್ಲಾ ಆರೋಪಿಗಳು ಒಂದೇ ಜೈಲಿನಲ್ಲಿದ್ದರೆ ಒಳಸಂಚು ಮಾಡಿ, ಪ್ರಕರಣದ ದಿಕ್ಕು ತಪ್ಪಿಸಬಹುದು. ಹೀಗಾಗಿ ಆರೋಪಿಗಳನ್ನ ಬೇರೆ ಜೈಲಿಗೆ ಶಿಫ್ಟ್ ಮಾಡಲು ಅವಕಾಶ ನೀಡುವಂತೆ ಪೊಲೀಸರು ಕೋರ್ಟ್​​ಗೆ ಮನವಿ ಮಾಡಿದ್ದರು, ನಟ ದರ್ಶನ್​​ರನ್ನು ತುಮಕೂರು ಅಥವಾ ರಾಮನಗರ ಜೈಲಿಗೆ ಕಳುಹಿಸುವಂತೆ ಎಸ್​ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದ್ದರು. ಹೀಗಾಗಿ ಇಂದು ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ವಿಚಾರಣೆ ನಡೆಯಲಿದೆ.

Advertisment

ರೇಣುಕಾ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದ ಓಂಪ್ರಕಾಶ್

ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಕ್ಕೆ ನಿರ್ದೇಶಕ ಓಂಪ್ರಕಾಶ್ ರಾವ್ ಬೇಸರ ವ್ಯಕ್ತಪಡಿಸಿದ್ದಾರೆ. ದರ್ಶನ್ ಈ ಪರಿಸ್ಥಿತಿ ನೋಡಿ ನನಗೆ ತುಂಬಾ ಬೇಜಾರಾಗಿದೆ. ದರ್ಶನ್​ನಂತಹ ಮಹಾನ್ ನಟನಿಗೆ ಏನಕ್ಕೆ ಬೇಕಿತ್ತು ಇದೆಲ್ಲಾ, ದರ್ಶನ್ ಬಗ್ಗೆ ಈಗ ಮಾತಾಡೋರು ಮೊದಲು ಎಲ್ಲೋಗಿದ್ದಾರೆ. ಆಗಲೇ ಹೇಳಿ ಅವರನ್ನ ತಿದ್ದುವ ಕೆಲಸ ಮಾಡಿದ್ರೆ ಹೀಗಾಗ್ತಿರಲಿಲ್ಲ, ರೇಣುಕಾ ಕುಟುಂಬಕ್ಕೆ ನ್ಯಾಯ ಸಿಗ್ಬೇಕು ಅಂತ ಓಂ ಪ್ರಕಾಶ್​ ರಾವ್ ಆಗ್ರಹಿಸಿದ್ದಾರೆ. ಅಲ್ಲದೇ ಇದೇ ವೇಳೆ ಬಾಂಬೊದ್ದನ್ನು ಸಿಡಿಸಿದ್ದಾರೆ.

publive-image

ಇದನ್ನೂ ಓದಿ: ದರ್ಶನ್‌ ಗ್ಯಾಂಗ್‌ಗೆ ಬಿಗ್ ಶಾಕ್.. 17 ಆರೋಪಿಗಳ ಮೊಬೈಲ್‌ನಿಂದ ಕೊಲೆ ಕೇಸ್‌ಗೆ ರೋಚಕ ಟ್ವಿಸ್ಟ್; ಏನದು?

ದರ್ಶನ್ ಮುಖದಲ್ಲಿ ಪಶ್ಚಾತ್ತಾಪ ಕಾಣ್ತಿದೆ. ದರ್ಶನ್ ಅಭಿಮಾನಿಗಳು ಸಿನಿಮಾ ನೋಡಲ್ಲ ಅಂದ್ರೆ ಏನೂ ಮಾಡೋಕೆ ಆಗಲ್ಲ, ಅವರವರ ಅಭಿಮಾನಿಗಳು ಅವರ ಸಿನಿಮಾ‌ ನೋಡ್ತಾರೆ ಅಂತ ಓಂಪ್ರಕಾಶ್ ರಾವ್ ಹೇಳಿದ್ದಾರೆ. ಅದೇನೇ ಇರಲಿ ಸದ್ಯ ದರ್ಶನ್​ ಪರ ಜಾಮೀನು ಅರ್ಜಿ ಸಲ್ಲಿಕೆಗೆ ತಯಾರಿ ನಡೆಯುತ್ತಿದೆ. ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment