/newsfirstlive-kannada/media/post_attachments/wp-content/uploads/2024/09/Darshan-in-bellary-Jial.jpg)
ಬಳ್ಳಾರಿ: ದರ್ಶನ್​​ ಬಳ್ಳಾರಿ ಜೈಲಿಗೆ ಹೋಗಿ ಇಂದಿಗೆ ಆರು ದಿನ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯುತ್ತಿದ್ದ ದಾಸ ರಾಜಾತಿಥ್ಯದಿಂದಾಗಿ ಬಳ್ಳಾರಿ ಜೈಲು ಶಿಫ್ಟ್​ ಆದರು. ಸದ್ಯ ಬಳ್ಳಾರಿ ಜೈಲಿನಲ್ಲಿ ದರ್ಶನ್​ ಪಶ್ಚಾತಾಪ ಪಡುತ್ತಿದ್ದಾರೆ. ಜೈಲು ವ್ಯವಸ್ಥೆಯಿಂದ ಪರದಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಬಳ್ಳಾರಿ ಜೈಲಿಗೆ ಸೇರಿದ ದರ್ಶನ್ ಬೇಡಿಕೆಯೊಂದನ್ನ ಇಟ್ಟಿದ್ದರು. ಸರ್ಜಿಕಲ್​ ಚೇರ್​ ಬೇಕೆಂದು ಮನವಿ ಮಾಡಿದ್ದರು.​ ಮೆಡಿಕಲ್ ರಿಪೋರ್ಟ್ ಇದ್ರು ಸರ್ಜಿಕಲ್ ಚೇರ್ ಪಡೆಯೋಕೆ ದರ್ಶನ್​ ಮೂರು ದಿನ ಕಾದಿದ್ದಾರೆ. ಸದ್ಯ ಬಳ್ಳಾರಿಯಲ್ಲಿರುವ ದರ್ಶನ್​ಗೆ ಒಂಟಿತನ ಕಾಡುತ್ತಿದೆ ಎನ್ನಲಾಗುತ್ತಿದೆ.
ದರ್ಶನ್​ ಸದ್ಯ ನಿಜವಾದ ಜೈಲು ಶಿಕ್ಷ ರೂಪ ಅನಿಭವಿಸುತ್ತಿದ್ದಾರಂತೆ. ಕಠಿಣ ಜೈಲು ವ್ಯವಸ್ಥೆಗೆ ಕುಗ್ಗಿದ್ದಾರಂತೆ. ಬ್ರ್ಯಾಂಡೆಡ್ ಬಟ್ಟೆ ಧರಿಸಿ ಖುಷಿ ಖುಷಿಯಾಗಿ ಜೈಲಿಗೆ ಎಂಟ್ರಿಯಾಗಿದ ದರ್ಶನ್​ ಇದೀಗ ಒಳಗೊಳಗೆ ಕೊರಗುತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಒಂಟಿಯಾದ ಚಂದನ್ ಶೆಟ್ಟಿ ಮನೆಗೆ ಹೊಸ ಅತಿಥಿ; ಏನಿದರ ಸ್ಪೆಷಲ್? ಲೆಜೆಂಡ್ ಕಾರಿನ ರೇಟ್ ಎಷ್ಟು?
ಸದ್ಯ ದರ್ಶನ್​ ಇರೋ ಅಕ್ಕ ಪಕ್ಕದ ಸೆಲ್‌ಗಳು ಖಾಲಿ ಇದ್ದು ಸೊಳ್ಳೆಗಳು ಅವರನ್ನು ಹಿಂಡುತ್ತಿದೆಯಂತೆ. ದಿನ ಕಳೆಯಲು ಕಷ್ಟಪಡುತ್ತಿದ್ದಾರೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ