Advertisment

ಟಿವಿನೂ ಸಿಕ್ಕಿಲ್ಲ, ಟೈಂ ಪಾಸ್​​ ಆಗುತ್ತಿಲ್ಲ.. ಒಂಟಿತನದಿಂದ ಪರದಾಡುತ್ತಿರುವ ದರ್ಶನ್​

author-image
AS Harshith
Updated On
ಜೈಲಲ್ಲಿ ಅನ್ನ ತಿನ್ನುವುದು ಬಿಟ್ಟ ದರ್ಶನ್.. ಈ ಮಾತ್ರೆಗಳನ್ನ ಸೇವನೆ ಮಾಡುತ್ತಿರುವುದು ಏಕೆ?
Advertisment
  • ಆರೋಪಿ ದರ್ಶನ್​ ಸೆಲ್​ಗೆ ಟಿವಿ ಬರೋದ್ಯಾವಾಗ?
  • 10 ದಿನಗಳಿಂದ ಪರದಾಡುತ್ತಿರುವ ಆರೋಪಿ ದರ್ಶನ್​​
  • ಹೊರ ಜಗತ್ತಿನ ಮಾಹಿತಿ ತಿಳಿಯಲು ದರ್ಶನ್​​ಗೆ ಕಾತುರ

ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್​​ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿ 2 ವಾರಕ್ಕೂ ಅಧಿಕ ದಿನ ಕಳೆಯುತ್ತಾ ಬಂದಿದ್ದಾರೆ. ಸದ್ಯ ಜೈಲಿನಲ್ಲಿ ಟೈಂ ಪಾಸ್ ಆಗದೆ ದರ್ಶನ್ ಹೈರಾಣಾಗಿದ್ದಾರೆ. ಅತ್ತ ಆರೋಪಿಯ ಇನ್ನಿತರ ಬೇಡಿಕೆಗೂ ಸರಿಯಾಗಿ ಸ್ಪಂದಿಸದೆ ಇರುವುದರಿಂದ​ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Advertisment

ದರ್ಶನ್​ ಟಿವಿ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ 10 ದಿನಗಳಿಂದ ಸೆಲ್‌‌ಗೆ ಟಿವಿ ವ್ಯವಸ್ಥೆ ಸಿಗದೆ ಅತ್ತ ಟೈಂ ಪಾಸ್​ ಆಗದೆ ತಲೆಕೆಡೆಸಿಕೊಂಡಿದ್ದಾರೆ. ಹೀಗಾಗಿ ಒಂಟಿತನದಿಂದ ಕಾಲ ಕಳೆಯಲು ದರ್ಶನ್ ಪರದಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ​ದರ್ಶನ್​​ಗೆ ಶುರುವಾಗಿದೆ ಮತ್ತೊಂದು ಚಿಂತೆ.. ಬೇಡಿಕೆಯಿಟ್ಟ ದಾಸ​.. ನೋ ಎಂದ ಜೈಲು ಅಧಿಕಾರಿಗಳು; ಏನದು?

ಸಾಲು ಸಾಲು ಸರ್ಕಾರಿ ರಜೆಯಿಂದಾಗಿ ದರ್ಶನ್‌ ಬೇಸರಗೊಂಡಿದ್ದಾರೆ. 10 ದಿನಗಳಿಂದ ಟಿವಿ ವ್ಯವಸ್ಥೆ ಸಿಗದೆ ಚಿಂತಿಸುತ್ತಿದ್ದಾರೆ. ಹೊರ ಜಗತ್ತಿನ ಮಾಹಿತಿ ತಿಳಿಯಲು ದರ್ಶನ್ ಕಾತುರಾಗಿದ್ದಾರೆ.

Advertisment

ಇದನ್ನೂ ಓದಿ: ಮಾತಿಲ್ಲ, ಕತೆಯಿಲ್ಲ, ಮೌನಕ್ಕೆ ಜಾರಿದ ಮುನಿರತ್ನ.. ನ್ಯಾಯಾಧೀಶರ ಮುಂದೆ ಒಂದೇ ಉತ್ತರ

ಎರಡು ದಿನಗಳ ಹಿಂದೆ ಜೈಲಾಧಿಕಾರಿಗಳು ಟಿವಿ ರಿಪೇರಿಗೆ ಕಳುಹಿಸಿದ್ದಾರೆ. ಮಂಗಳವಾರ ಸೆಲ್‌ಗೆ ಟಿವಿ ನೀಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ದರ್ಶನ್‌ನ ಮೂರನೇ ಬೇಡಿಕೆ ಇಡೇರಿಕೆಗೆ ಜೈಲಾಧಿಕಾರಿಗಳು ಮುಂದಾಗಿದ್ದಾರೆ.

ಕೋರ್ಟ್ ವಿಚಾರಣೆ ಆರಂಭಕ್ಕೂ ಮುನ್ನ ದರ್ಶನ್ ಸೆಲ್​ಗೆ ಟಿವಿ ಅಳವಡಿಕೆ ಮಾಡಲಿದ್ದಾರೆ. ಆಡಿಯೋ ವಿಡಿಯೋ ಸಮಸ್ಯೆಯಿಂದ ಟಿವಿಯನ್ನು ತೆರವು ಮಾಡಿ ರಿಪೇರಿಗೆ ಕಳುಹಿಸಲಾಗಿತ್ತು. ಇದೀಗ ರಿಪೇರಿ ಆದ ಹಿನ್ನಲೆ ಮಂಗಳವಾರ ಟಿವಿ ನೀಡಲು ಸಿದ್ಧತೆ ಮಾಡಿದ್ದಾರೆ ಎನ್ನಲಾಗುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment