/newsfirstlive-kannada/media/post_attachments/wp-content/uploads/2024/06/DARSHAN-JAIL-1.jpg)
ದರ್ಶನ್ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮೊದಲ ಕೆಲವು ದಿನಗಳು ಜೈಲಿನಲ್ಲಿ ಸಪ್ಪೆ ಮೋರೆ ಹಾಕಿ ಕುಳಿತ್ತಿದ್ದ ದರ್ಶನ್ ಈಗ ಪುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಎಲ್ಲರ ಜೊತೆಗೆ ಬೆರೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮೊದಲ ದಿನಕ್ಕೆ ಹೋಲಿಕೆ ಮಾಡಿದ್ರೆ ದರ್ಶನ್ ಸದ್ಯ ತನ್ನ ಜೊತೆಗಿರುವ ನಾಲ್ವರು ಆರೋಪಿಗಳ ಜೊತೆಗೆ ಟೈಂ ಪಾಸ್ ಮಾಡುತ್ತಿದ್ದಾರಂತೆ. ದರ್ಶನ್ ಕೊಠಡಿಯಲ್ಲಿ ಟಿವಿ ಹಾಗೂ ಕೇರಂ ಬೋರ್ಡ್ ಇದ್ದು, ತನ್ನ ನಾಲ್ವರು ಸಹ ಆರೋಪಿಗಳ ಜೊತೆ ಕಾಲ ಕಳೆಯುತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಪವಿತ್ರಾ ಗೌಡರನ್ನು ಭೇಟಿ ಮಾಡಿದ ದರ್ಶನ್! ಆಕೆಗೆ ಎಲ್ಲಾ ಸರಿ ಹೋಗುತ್ತೆ ಎಂದ್ರಂತೆ ದಾಸ?
ಈ ಹಿಂದೆ ಪಿಎಸ್ಐ ಸ್ಕ್ಯಾಮ್ ಆರೋಪಿಗಳಿದ್ದ ರೂಂನಲ್ಲಿರುವ ದರ್ಶನ್ ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ. ದರ್ಶನ್ಗೆ ಹೊರಗಿನ ಆಹಾರ ಇನ್ನೂ ಸಹ ಸಿಕ್ಕಿಲ್ಲ. ಕೇವಲ ಪ್ರೂಟ್ಸ್ ಮಾತ್ರ ಸಿಗ್ತಾ ಇದೆಯಂತೆ.
ಇದನ್ನೂ ಓದಿ: ಶಿವಣ್ಣನ ಬರ್ತ್ ಡೇಗೆ ಬಿಗ್ ಗಿಫ್ಟ್.. ಅಭಿಮಾನಿಗಳಿಗೂ ‘ಭೈರತಿ ರಣಗಲ್’ ಚಿತ್ರತಂಡ ನೀಡ್ತಿದೆ ಹೀಗೊಂದು ಸರ್ಪ್ರೈಸ್!
ಸದ್ಯ ಆರಂಭದ ದಿನಗಳಿಗೂ ಮತ್ತು ಈಗಿನ ದಿನಗಳಿಗೆ ಹೋಲಿಸಿದಾಗ ದರ್ಶನ್ ಕೊಂಚ ಬೆರೆಯಲು ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ. ಇಲ್ಲದಿದ್ದರೆ ಯಾರೊಂದಿಗೂ ಮಾತನಾಡದೆ ಧ್ಯಾನದಲ್ಲಿ ಕುಳಿತಿರುತ್ತಿದ್ದರು ಎಂಬ ಮಾತುಗಳು ಕೇಳಿಬಂದಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ