/newsfirstlive-kannada/media/post_attachments/wp-content/uploads/2024/06/darshan-18-1.jpg)
ನಟ ದರ್ಶನ್​ ಸದ್ಯ ಪೊಲೀಸರ ವಶದಲ್ಲಿದ್ದಾರೆ. ರೇಣುಕಾಸ್ವಾಮಿ ಹತ್ಯೆಗೆ ಸಂಬಂಧ ತನಿಖೆ ಎದುರಿಸುತ್ತಿದ್ದಾರೆ. ಸೆಲೆಬ್ರಿಟಿ ಜೀವನ ನಡೆಸುತ್ತಿದ್ದ ದಾಸ ಚಿತ್ರದುರ್ಗ ಮೂಲದ ವ್ಯಕ್ತಿಯನ್ನು ಕೊಲೆ ಮಾಡಿ ಸಿಕ್ಕಿಬಿದ್ದು, ಇದೀಗ ಪಶ್ಚಾತ್ತಾಪ ಪಡುವಂತಾಗಿದೆ. ಸ್ಟೇಷನ್​ನಲ್ಲೇ ಮಲಗಿ, ಎದ್ದು, ದಿನನಿತ್ಯ ತನಿಖೆಗೆ ಹಾಜರಾಗುತ್ತಿದ್ದಾರೆ. ಸದ್ಯ ದರ್ಶನ್​ ಜೀವನ ಶೈಲಿ ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ.
ದರ್ಶನ್​ ಕೆಲವು ವಾರಗಳ ಹಿಂದೆ ಸೆಲೆಬ್ರಿಟಿ ಜೀವನ ನಡೆಸುತ್ತಿದ್ದರು. ಇಷ್ಟ ಬಂದಾಗ ನಿದ್ದೆ ಮಾಡುತ್ತಿದ್ದರು, ಇಷ್ಟ ಬಂದಾಗ ಎದ್ದೇಳುತ್ತಿದ್ದರು. ಸಿನಿಮಾಗಾಗಿ ಹುರಿಗೊಳಿಸಿದ ದೇಹವನ್ನಾಗಿಸಲು ಜಿಮ್​ಗೆ ಹೋಗಿ ಬರುತ್ತಿದ್ದರು.
/newsfirstlive-kannada/media/post_attachments/wp-content/uploads/2024/06/darshan-18-1.jpg)
ಇಷ್ಟೇ ಅಲ್ಲದೆ, ಸ್ನಾನಕ್ಕೆ ಐಷಾರಾಮಿ ಟಬ್ ಬಳಸುತ್ತಿದ್ದು. ತರಹೇವಾರಿ ತಿಂಡಿ ಸವಿಯುತ್ತಿದ್ದರು. ಇದರ ಜೊತೆ ಜೊತೆಗೆ ದರ್ಶನ್ ಗಾಗಿ ಸ್ನೇಹಿತರು, ಅಭಿಮಾನಿಗಳು ಕಾದಿರುತ್ತಿದ್ದರು. ಮಧ್ಯಾಹ್ನಕ್ಕೆ ಶುರುವಾಗುತ್ತಿದ್ದ ಪಾರ್ಟಿ, ತಡ ರಾತ್ರಿವರೆಗೂ ಬಿಂದಾಸ್ ಲೈಫ್, ಮಲಗೋದಕ್ಕೆ ಕಿಂಗ್ ಸೈಜ್ ಬೆಡ್ ಇಷ್ಟೆಲ್ಲಾ ಜೀವನ ನಡೆಸುತ್ತಿದ್ದ ದರ್ಶನ್​ ಇದೀಗ ಪೊಲೀಸ್​ ಠಾಣೆಯಲ್ಲಿ ದಿನ ದೂಡುವಂತಾಗಿದೆ.
ಇದನ್ನೂ ಓದಿ: ದರ್ಶನ್​ ಸೇಫ್​ ಮಾಡುವಂತೆ ಕಣ್ಣೀರಿಟ್ಟ ಸಚಿವ.. ಗೃಹ ಸಚಿವರ ಕಾಲಿಗೆ ಬಿದ್ದು ಹೈಡ್ರಾಮಾ?
/newsfirstlive-kannada/media/post_attachments/wp-content/uploads/2024/06/DARSHAN-32.jpg)
ದರ್ಶನ್ ಸದ್ಯದ ಪರಿಸ್ಥಿತಿ ಹೇಗಿದೆ?
ಬೆಳಗ್ಗೆ 6 ಗಂಟೆಗೆ ಎದ್ದೇಳಬೇಕು. ಠಾಣೆಯ ಎಲ್ಲರೂ ಬಳಸುವ ಶೌಚಾಲಯ ಬಳಸಬೇಕು. ಜಿಮ್ ಇಲ್ಲ. ಸ್ನಾನ ಕೂಡ ಪ್ರತಿ ದಿನ ಇಲ್ಲ. ಇಡ್ಲಿ ವಡೆ ತಿನ್ನಬೇಕು. ನೆಲದ ಮೇಲೆ ಕೂರವಂತಾಗಿದೆ.
ಇದನ್ನೂ ಓದಿ: ಕಲೆಗಳು.. ರಕ್ತದ ಕಲೆಗಳು.. ಸೆಕ್ಯುರಿಟಿ ಗಾರ್ಡ್​ ಬಿಚ್ಚಿಟ್ಟ ರೇಣುಕಾಸ್ವಾಮಿ ಹತ್ಯೆಯ ಬಗೆಗಿನ ಸ್ಫೋಟಕ ಮಾಹಿತಿ
ಇನ್ನು ಮಧ್ಯಾಹ್ನ ಅನ್ನ ಸಾಂಬರ್ ಸವಿಯಬೇಕು. ರಾತ್ರಿಗೂ ಅನ್ನ ಸಾಂಬಾರ್ ತಿನ್ನಬೇಕು. ದಿಂಬಿಲ್ಲದ ಹಾಸಿಗೆಯಲ್ಲಿ ಮಲಗುವಂತ ಪರಿಸ್ಥಿತಿ ಸದ್ಯ ದರ್ಶನ್​ಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us