/newsfirstlive-kannada/media/post_attachments/wp-content/uploads/2024/11/darshan13.jpg)
ಬೆಂಗಳೂರು: ಕೆಂಗೇರಿಯ BGS ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್ ಅವರಿಗೆ 4ನೇ ಮಹಡಿಯ VIP ಸೂಟ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆಯಿಂದ ಹಲವು ಪರೀಕ್ಷೆಗಳನ್ನು ನಡೆಸುತ್ತಿರುವ ವೈದ್ಯರು ಇಂದು ಕೂಡ ಕೆಲವು ವೈದ್ಯಕೀಯ ಪರೀಕ್ಷೆಗಳನ್ನ ನಡೆಸಲಾಗುತ್ತಿದೆ. ನಾಳೆ ಎಲ್ಲಾ ಮೆಡಿಕಲ್ ಟೆಸ್ಟ್‌ನ ರಿಪೋರ್ಟ್‌ಗಳು ವೈದ್ಯರ ಕೈ ಸೇರುತ್ತಿದೆ.
ದರ್ಶನ್ ಬೆನ್ನು ನೋವಿನ ಸಂಬಂಧ ಪರೀಕ್ಷೆ ನಡೆಸುತ್ತಿರುವ ವೈದ್ಯರು ರಿಪೋರ್ಟ್‌ಗಳ ಪರಿಶೀಲನೆ ಬಳಿಕ ಮುಂದಿನ ಚಿಕಿತ್ಸೆಯ ಬಗ್ಗೆ ನಿರ್ಧಾರ ಮಾಡಲಿದ್ದಾರೆ. ಡಾ. ನವೀನ್ ಅಪ್ಪಾಜಿ ಗೌಡ ಅವರ ವೈದ್ಯರ ತಂಡ ನಾಳೆಯೇ ಮುಂದಿನ ಚಿಕಿತ್ಸೆಗೆ ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ: ವಿಜಯಲಕ್ಷ್ಮಿ ದರ್ಶನ್ ಪೂಜಾ ಫಲ.. ಅಕ್ಟೋಬರ್‌ಗೆ ಹೇಳ್ಬಿಡು ಚಿನ್ನಾ ಬಂದೇ ಬರ್ತೀವಿ ಡೈಲಾಗ್ ವೈರಲ್!
ವೈದ್ಯರಿಗೆ ಗೌಪ್ಯತೆಯ ಮನವಿ!
ದರ್ಶನ್‌ಗೆ ಚಿಕಿತ್ಸೆ ನೀಡುತ್ತಿರುವ ಬಿಜಿಎಸ್ ವೈದ್ಯರ ಬಳಿ ವಿಜಯಲಕ್ಷ್ಮಿ ದರ್ಶನ್ ಅವರು ವಿಶೇಷವಾದ ಮನವಿ ಮಾಡಿದ್ದಾರೆ. ದರ್ಶನ್ ಚಿಕಿತ್ಸೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಬೇಡಿ ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಈ ಮನವಿ ಮೇರೆಗೆ ಬಿಜಿಎಸ್ ಆಸ್ಪತ್ರೆಯ ಮ್ಯಾನೇಜ್ಮೆಂಟ್ ಕೂಡ ವೈದ್ಯರಿಗೆ ತಾಕೀತು ಮಾಡಿದೆ. ಮಾಧ್ಯಮಗಳು ಅಥವಾ ಇತರೆ ಸಂಬಂಧಿಗಳಿಗೆ ದರ್ಶನ್ ಅವರ ಚಿಕಿತ್ಸೆ ಬಗ್ಗೆ ಮಾಹಿತಿ ನೀಡದಂತೆ ಸೂಚಿಸಿದೆ.
ಬಿಜಿಎಸ್ ಆಸ್ಪತ್ರೆಯ 4ನೇ ಮಹಡಿಯಲ್ಲಿರುವ ದರ್ಶನ್ ಅವರನ್ನು ಭೇಟಿಯಾಗಲು 7 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸ್ಪೆಷಲ್ ಸೂಟ್‌ಗೆ 7 ಜನರು ತಮ್ಮ ಹೆಸರನ್ನು ಎಂಟ್ರಿ ಮಾಡಿದರೆ ಮಾತ್ರ ಒಳಗೆ ಬಿಡುವಂತೆ ಸೂಚನೆ ನೀಡಲಾಗಿದೆ.
7 ಜನ ದರ್ಶನ್ ಕೇರ್ ಟೇಕರ್!
ವಿಜಯಲಕ್ಷ್ಮಿ (ದರ್ಶನ್ ಪತ್ನಿ)
ವಿನೀಶ್ (ದರ್ಶನ್ ಮಗ)
ಮೀನಮ್ಮ (ದರ್ಶನ್ ಅಮ್ಮ)
ದಿನಕರ್ ತೂಗುದೀಪ (ದರ್ಶನ್ ಸಹೋದರ)
ಚಂದ್ರು (ದರ್ಶನ್ ಸಹೋದರಿ ಪುತ್ರ)
ಧನ್ವೀರ್ (ದರ್ಶನ್ ಸ್ನೇಹಿತ)
ಸುಶಾಂತ್ (ದರ್ಶನ್ ಸಂಬಂಧಿ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ