newsfirstkannada.com

ಹೊಸ ಜೈಲಿಗೆ ಬಂದಾಯ್ತು.. ಕೈದಿ ನಂಬರ್​ ಬದಲಾಯ್ತು! ದರ್ಶನ್​ಗೆ​ ಸಿಕ್ಕ ನಂಬರ್​ ಎಷ್ಟು ಗೊತ್ತಾ?

Share :

Published August 29, 2024 at 11:41am

Update August 29, 2024 at 11:42am

    ಇಂದು ಬೆಳ್ಳಂಬೆಳಗ್ಗೆ ಬಳ್ಳಾರಿಗೆ ದರ್ಶನ್​​ ಶಿಫ್ಟ್​

    ಬದಲಾಯ್ತು ಕೊಲೆ ಆರೋಪಿ ದರ್ಶನ್​​ ಕೈದಿ ನಂಬರ್

    ಕೈದಿ ನಂಬರ್​ 6106 ಬದಲಿಗೆ ಈಗ ಸಿಕ್ಕ ನಂಬರ್​ ಎಷ್ಟು?

ಪರಪ್ಪನ ಅಗ್ರಹಾರದಿಂದ ನಟ ದರ್ಶನ್​ ಬಳ್ಳಾರಿ ಜೈಲಿಗೆ ಶಿಫ್ಟ್​​ ಆಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅಧಿಕಾರಿಗಳು ಸುರಕ್ಷಿತವಾಗಿ ಅವರನ್ನು ಬಳ್ಳಾರಿಗೆ ಕರೆದುಕೊಂಡು ಹೋಗಿದ್ದಾರೆ. 9.45ರ ವೇಳೆಗೆ ಬಳ್ಳಾರಿಗೆ ತಲುಪಿಸಿದ ದರ್ಶನ್​ ಇದೀಗ ಕೇಂದ್ರ ಕಾರಾಗೃಹದ ಒಳ ಸೇರಿದ್ದಾರೆ. ಸದ್ಯ ನಟನಿಗೆ ಹೊಸ ಕೈದಿ ನಂಬರ್​ ಕೂಡ ಜೈಲಾಧಿಕಾರಿಗಳು ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ A2 ಆರೋಪಿ ದರ್ಶನ್​ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ದರ್ಶನ್​ಗೆ ಜೈಲಾಧಿಕಾರಿಗಳಿಂದ ಕೈದಿ ನಂಬರ್​ 6106 ನೀಡಿದ್ದರು. ಆದರೀಗ ಬಳ್ಳಾರಿಗೆ ಶಿಫ್ಟ್​ ಆದ ಬಳಿಕ ಬೇರೆ ನಂಬರ್​ ನೀಡಿದ್ದಾರೆ.

ಇದನ್ನೂ ಓದಿ: ದರ್ಶನ್​ ಭೇಟಿ ಮಾಡಿದ ಕಾಮಿಡಿ ನಟ! ಚಿಕ್ಕಣ್ಣನಿಗೆ ಮತ್ತೊಮ್ಮೆ ಸಂಕಷ್ಟ!

ಬಳ್ಳಾರಿ ಜೈಲು ಸೇರಿದ ದರ್ಶನ್​ಗೆ ಕೈದಿ ನಂಬರ್​ 511 ನೀಡಿದ್ದಾರೆ. ಸದ್ಯ ಹೊಸ ನಂಬರ್​ ದರ್ಶನ್​ಗೆ ಸಿಕ್ಕಿದೆ. ಮೊದಲಿಗೆ 6106 ನಂಬರ್​ ಸಿಕ್ಕಿದಾಗ ನಟನ ಅಭಿಮಾನಿಗಳು ಆ ನಂಬರನ್ನು ವಾಹನದ ಮೇಲೆ, ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ರು. ಆದರೀಗ ಹೊಸ ನಂಬರ್​ ಸಿಕ್ಕಿದೆ. ಅಭಿಮಾನಿಗಳು ಈ ನಂಬರ್​ ಇಟ್ಟು ಕೊಂಡು ಯಾವ ರೀತಿ ಅಭಿಮಾನ ಮೆರೆಯಲಿದ್ದಾರೆ ಎಂದು ನೋಡಬೇಕಿದೆ.

ಇದನ್ನೂ ಓದಿ: ದರ್ಶನ್​ ಬಳ್ಳಾರಿ ಜೈಲಿನಲ್ಲಿ ಇರುವುದರಿಂದ ಏನು ನಷ್ಟ.. ಜೈಲು ಅಧಿಕಾರಿಗಳಿಗೆ ಏನು ಲಾಭ..?

ದರ್ಶನ್​ ಶಿಫ್ಟ್​ನಿಂದ ಯಾರಿಗೆ ಸಮಸ್ಯೆ? 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಿಚಾರಣೆ ಮುಕ್ತಾಯಗೊಂಡಿದೆ. ಈ ಕೃತ್ಯದಲ್ಲಿ ಐ ವಿಟ್ನೆಸ್ ಟಿಪಿ ಪೆರಡ್ ಆಗಿದೆ. ಭೌತಿಕ, ಸಾಂಧರ್ಭಿಕ, ತಾಂತ್ರಿಕ ಸಾಕ್ಷಿಗಳ ಸಂಗ್ರಹ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ, ಕೋರ್ಟ್ ಮುಂದೆ ಮಾತ್ರ ಹಾಜರಾಗಲು ಬಾಕಿ ಇದೆ. ಅದನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಬಹುದಾಗಿದೆ. ಹೀಗಾಗಿ ದರ್ಶನ್ ಜೈಲು ಶಿಫ್ಟ್​​ನಿಂದ ಯಾವುದೇ ಸಮಸ್ಸೆ ಆಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ ದರ್ಶನ್​ ವಿರುದ್ಧ ಜಾರ್ಜ್​​ ಶೀಟ್​ ಸಲ್ಲಿಕೆಯಾಗಬೇಕಿದೆ. ಆದಾದ ಬಳಿಕ ಟ್ರಯಲ್ ಆರಂಭ ಆಗಲಿದೆ. ಆಗಲೂ ವಿಡಿಯೋ ಕಾನ್ಫರೆನ್ಸ್​ ಮೂಲಕ ಆರೋಪಿ ಹಾಜರಾಗಬಹುದಾಗಿದೆ. ಒಟ್ಟಿನಲ್ಲಿ ದರ್ಶನ್ ಶಿಫ್ಟ್ ಕೇವಲ ಅವರ ಕುಟುಂಬಕ್ಕೆ ಮಾತ್ರ ಸಂಕಷ್ಟ ತಂದೊಡ್ಡಿದೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ದರ್ಶನ್ ಇರಲಿರುವ ಹೈ ಸೆಕ್ಯೂರಿಟಿ ಸೆಲ್‌ ಹೇಗಿದೆ.. 3 ದಶಕಗಳ ಹಿಂದೆ ನಿರ್ಮಿಸಿದ ಇದರ ಇತಿಹಾಸ ಗೊತ್ತಾ?

ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್​ ಭೇಟಿಗೆ ಅವರ ಕುಟುಂಬಸ್ಥರು ಪದೇ ಪದೇ ಬರುತ್ತಿದ್ದರು. ಸ್ನೇಹಿತರು ವಾರಕ್ಕೆ ಎರಡು ಮೂರು ಬಾರಿ ಬಂದು ಹೋಗುತ್ತಿದ್ದರು. ಆದರೀಗ ಬಳ್ಳಾರಿ ಬಲು ದೂರವಾದ್ದರಿಂದ ಮತ್ತು ಬೆಂಗಳೂರಿನಿಂದ 300ಕ್ಕೂ ಹೆಚ್ಚು ಕಿಮೀ ಇರುವ ಕಾರಣ ದರ್ಶನ್​ ಭೇಟಿ ಮಾಡೋದು ಕಷ್ಟ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಜೈಲಿಗೆ ಬಂದಾಯ್ತು.. ಕೈದಿ ನಂಬರ್​ ಬದಲಾಯ್ತು! ದರ್ಶನ್​ಗೆ​ ಸಿಕ್ಕ ನಂಬರ್​ ಎಷ್ಟು ಗೊತ್ತಾ?

https://newsfirstlive.com/wp-content/uploads/2024/08/darshan-5-2.jpg

Load More