/newsfirstlive-kannada/media/post_attachments/wp-content/uploads/2024/06/Pavitra-Gowda-2.jpg)
ದರ್ಶನ್ ಆದಷ್ಟು ಬೇಗ ನಿರಪರಾಧಿ ಆಗಿ ಹೊರಗೆ ಬರ್ಬೇಕು. ದರ್ಶನ್ ಪ್ರಕರಣದಿಂದ ಇಂಡಸ್ಟ್ರಿ ಮೇಲೆ ನೆಗೆಟಿವ್ ವೈಬ್ ಶುರುವಾಗಿದೆ ಎಂದು ಸ್ಯಾಂಡಲ್​ವುಡ್​ ನಟಿ ನಿಖಿತಾ ಸ್ವಾಮಿ ಹೇಳಿದ್ದಾರೆ.
ನ್ಯೂಸ್​ಫಸ್ಟ್​ ಕನ್ನಡ ಜೊತೆ ಮಾತನಾಡಿದ ನಿಖಿತಾ ಸ್ವಾಮಿ ‘ಅಶ್ಲೀಲ ಮೆಸೇಜ್ ಬಂದ್ರೂ, ನಟಿಯರು ಯಾಕೆ ಕಂಪ್ಲೆಂಟ್ ಕೊಡಲ್ಲ. ನನಗೂ ಅಶ್ಲೀಲ ಮೆಸೇಜ್​ಗಳು ಬಂದಿವೆ. ಆ ಥರಾ ಮೆಸೇಜ್ ಮಾಡೋರನ್ನ ಬ್ಲಾಕ್ ಮಾಡಿ ಬಿಸಾಕ್ಬೇಕು’ ಎಂದು ಹೇಳಿದ್ದಾರೆ.
‘ನಟಿಯರಿಗೂ ಇಂಥಾ ಸಮಸ್ಯೆಗಳು ಎದುರಾಗುತ್ತವೆ. ಅನಾವಶ್ಯಕವಾಗಿ ವಿಷಯ ದೊಡ್ಡದಾಗುತ್ತೆ ಅನ್ನೋ ಕಾರಣಕ್ಕೆ ನಟಿಯರು ಕಂಪ್ಲೆಂಟ್ ಕೊಡೋಕೆ ಹೋಗಲ್ಲ’ ಎಂದು ನಿಖಿತಾ ಸ್ವಾಮಿ ಹೇಳಿದ್ದಾರೆ.
ದರ್ಶನ್ ವಿಚಾರ ಇನ್ನೂ ನ್ಯಾಯಾಲಯದಲ್ಲಿದೆ. ಅವರು ಹೊರಗೆ ಬರಲಿ ಅಂತಾ ಕಾಯ್ತಿದ್ದೀವಿ ಎಂದು ನಟಿ ನಿಖಿತಾ ನ್ಯೂಸ್​​ಫಸ್ಟ್​ಗೆ ದರ್ಶನ್​ ಕೇಸ್​ ಬಗ್ಗೆ ಮಾತನಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us