ಜೈಲಿನಲ್ಲೂ ನೂರು ದಿನ ಪೂರೈಸಿದ ದರ್ಶನ್ ತೂಗುದೀಪನ ಬದುಕು
ಈ ನೂರು ದಿನದಲ್ಲಿ ದರ್ಶನ್ ಯಾಕೆ ಜಾಮೀನು ಅರ್ಜಿ ಸಲ್ಲಿಸಿಲ್ಲ ಗೊತ್ತಾ?
ಬಳ್ಳಾರಿ ಜೈಲಿಗೆ ಹೋದ ಮೇಲೆ ದರ್ಶನ್ ಅನುಭವಿಸಿದ ಒದ್ದಾಟಗಳೇನು?
ಬಳ್ಳಾರಿ: ದರ್ಶನ್ ಸ್ಯಾಂಡಲ್ವುಡ್ನ ಓಡುವ ಕುದರೆ. ಅವರನ್ನು ನಂಬಿ ಬಂಡವಾಳ ಹಾಕಿದ ನಿರ್ಮಾಕರು ದಂಡಿ ದಂಡಿಯಾಗಿ ದುಡ್ಡು ಮಾಡಿದ್ದೇ ಹೆಚ್ಚು. ದರ್ಶನ್ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟ ನಟ. ಶತದಿನಗಳನ್ನು ಕಂಡ ಅದೆಷ್ಟೋ ಸೂಪರ್ಹಿಟ್ ಸಿನಿಮಾಗಳು ದರ್ಶನ್ ಬಾಳಿನಲ್ಲಿವೆ. ಆದ್ರೆ ವಿಧಿ ಅನ್ನೋದು ಒಂದಿದೇ ನೋಡಿ ಅದು ಆಡುವ ಆಟವೇ ಬೇರೆಯದ್ದು. ಹೀಗೆ ಶತದಿನಗಳ ಸಿನಿಮಾ ಕೊಟ್ಟ ನಟ ದರ್ಶನ್ ಬಾಳು ಈಗ ನಾಲ್ಕು ಗೋಡೆಯ ಮಧ್ಯೆಯೂ ಶತದಿನ ಕಂಡಿದೆ. ದರ್ಶನ್ ಜೈಲಿನ ಕಂಬಿಗಳ ಹಿಂದೆ ಹೋಗಿ ಈಗ ನೂರು ದಿನಗಳು ಮುಗಿದಿವೆ.
ರೇಣುಕಾಸ್ವಾಮಿ ಹತ್ಯೆ, ದರ್ಶನ್ ಜೈಲು ಸೇರಿ 100 ಡೇಸ್!
ದರ್ಶನ್ ಸಿನಿಮಾಗಳು 100 ದಿನ ಓಡೋದು ಅಭಿಮಾನಿಗಳ ಪಾಲಿಗೆ ಹಬ್ಬವಾಗಿತ್ತು. ಸ್ಯಾಂಡಲ್‌ವುಡ್ ಪಾಲಿಗೆ ಶಕ್ತಿಯಾಗಿತ್ತು. ಆದ್ರೆ, ಮರ್ಡರ್ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ್ದು ಸ್ಯಾಂಡಲ್‌ವುಡ್‌ಗೂ ಕಳಂಕ, ಅಭಿಮಾನಿಗಳ ಪಾಲಿಗೂ ದೊಡ್ಡ ಕಳಂಕ. ಇನ್ನೊಂದ್ ವಿಶೇಷ ಅಂದ್ರೆ, ದರ್ಶನ್ ತಾವು ಯಾವುದೇ ಸಿನಿಮಾಗೆ 70 ದಿನಕ್ಕಿಂತ ಜಾಸ್ತಿ ಕಾಲ್‌ಶೀಟ್ ಕೊಡಲ್ಲ ಅಂತಿದ್ರು. ಬಳ್ಳಾರಿ ಜೈಲಲ್ಲಿ ಇದ್ದಾಗ ನಟೋರಿಯಸ್ ನಾಗನ ಸಂಘ ಮಾಡಿದ್ದ ದರ್ಶನ್ ಫೋಟೋಗಳು ಲೀಕ್ ಆಗಿದ್ವು. ಕೈಯಲ್ಲಿ ಸಿಗರೇಟು, ಕಾಫಿ ಕಪ್ ಇತ್ತು. ಅದಾದ್ಮೇಲೆ ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆ ಸಂದರ್ಭದಲ್ಲಿ ಅಭಿಮಾನಿಗಳು ನೋಡಿದ್ರಾ? ತಮ್ಮ ಬಾಸ್ 70 ದಿನದ ಮೇಲೆ ಯಾರಿಗೂ ಕಾಲ್‌ಶೀಟ್ ಕೊಡಲ್ಲ ಅಂತಾ ಹೇಳ್ಕೊಂಡಿದ್ರು. ಆದ್ರೆ, ಇದೀಗ ದರ್ಶನ್ ಜೈಲು ಸೇರಿ ಬರೋಬ್ಬರಿ 100 ದಿನ ಕಳೆದಿದೆ.
ಇದನ್ನೂ ಓದಿ:ದರ್ಶನ್ ಪ್ರಕರಣದ ಬಗ್ಗೆ ಸಂತೋಷ್ ಹೆಗ್ಡೆ ಮಾತು.. ಏನಂದ್ರು ಗೊತ್ತಾ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ..?
100 ಡೇಸ್ ಡೈರಿ! ಬಳ್ಳಾರಿಯಲ್ಲಿ ಬಳಲಿ ಬೆಂಡಾಗಿರೋ ದರ್ಶನ್!
ಬೆಂಗಳೂರು ಜೈಲಲ್ಲಿ ಇರೋ ವಷ್ಟ್ ದಿನ ದರ್ಶನ್ ಬಿಂದಾಸ್ ಆಗಿಯೇ ಇದ್ರು. ಅವರಿಗೆ ಬೇಕಾದ ವ್ಯವಸ್ಥೆಯನ್ನು ನಟೋರಿಯಸ್‌ಗಳಾಗಿರೋ ವಿಲ್ಸನ್ ಗಾರ್ಡನ್ ನಾಗ ಮತ್ತು ಬೇಕರಿ ರಘು ಮಾಡ್ತಿದ್ರು. ಆದ್ರೆ, ಅದೊಂದ್ ಫೋಟೋ ವೈರಲ್ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುವಂತೆ ಮಾಡಿದೆ. ಹಾಗೇ ಯಾವಾಗ ಬಳ್ಳಾರಿ ಜೈಲು ಸೇರಿದರೊ ಆವಾಗಲೇ ದರ್ಶನ್‌ಗೇ ನಿಜವಾದ ಜೈಲು ದರ್ಶವಾಗಿದ್ದು. ಜೈಲು ಅಂದ್ರೆ ಹೇಗಿರುತ್ತೆ? ಅಲ್ಲಿಯ ವ್ಯವಸ್ಥೆ ಎಂಥಹದ್ದು? ಅನ್ನೋದ್ ಅರಿವಿಗೆ ಬಂದಿದೆ. ಕಾರಣ ಬಳ್ಳಾರಿ ಜೈಲಲ್ಲಿರೋ ಕಠಿಣ ವ್ಯವಸ್ಥೆ. ಯಾವುದೇ ಸೌಲಭ್ಯ ಕೇಳಿದ್ರೂ ಜೈಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಬೇಕು. ಅವ್ರು ಮೇಲಾಧಿಕಾರಿಗಳ ಪರ್ಮಿಷನ್ ತಗೋಬೇಕು. ಹೀಗಾಗಿ ದರ್ಶನ್ ಸೌಲಭ್ಯ ಕೇಳಿದ ಎಳೆಂಟು ದಿನಗಳ ನಂತರ ಅದು ಬಂದಿರುತ್ತೆ. ಇನ್ನು ಸೆಲ್ ನಂಬರ್ 15 ರಲ್ಲಿ ದರ್ಶನ್ ಏಕಾಂಗಿಯಾಗಿದ್ದಾರೆ. 24 ಗಂಟೆಗಳ ಕಾಲ ಕ್ಯಾಮರಾ ಕಣ್ಗಾವಲಿನಲ್ಲಿಯೇ ಇರಬೇಕಾಗಿದೆ. ಇಂತಾ ಕಠಿಣ ವ್ಯವಸ್ಥೆಗೆ ದರ್ಶನ್ ಬಳಲಿ ಬೆಂಡಾಗಿದ್ದಾರೆ. ಯಾಕಾದ್ರೂ ಬೆಂಗಳೂರು ಜೈಲಲ್ಲಿ ನಾಗನ ಸಹವಾಸ ಮಾಡಿದ್ನೋ ಅಂತಾ ಪಶ್ಚಾತಾಪ ಪಡ್ತಿದ್ದಾರೆ. ಹಾಗೇ ತಮಗೆ ಬಳ್ಳಾರಿ ಜೈಲು ಬೇಡ ಬೆಂಗಳೂರು ಜೈಲಿಗೆ ಪುನಃ ಕರ್ಕೊಂಡ್ ಹೋಗಿ ಅಂತಾ ಪರಿ ಪರಿಯಾಗಿ ಬೇಡಿಕೊಳ್ತಿದ್ದಾರೆ.
100 ಡೇಸ್ ಡೈರಿ! ಕೋರ್ಟ್ ಸೂಚಿಸಿದ್ರೂ ಕುರ್ಚಿ ಸಿಕ್ಕಿಲ್ಲ!
ದರ್ಶನ್‌ಗೆ ಬಳ್ಳಾರಿ ಜೈಲು ನಿಜವಾದ ಕಾರಾಗೃಹ ದರ್ಶನ ಯಾಕೆ ಮಾಡಿಸ್ತಿದೆ ಅಂದ್ರೆ ಇದ್ಕೆ ನೋಡಿ. ಯಾವುದೇ ಸೌಲಭ್ಯವನ್ನು ಪಡೀಬೇಕು ಅಂದ್ರೆ ಸುಲಭ ಇಲ್ಲವೇ ಇಲ್ಲ. ಕೋರ್ಟ್ ಸೂಚನೆ ಕೊಟ್ರೂ ಅದು ದರ್ಶನ್ ಸೆಲ್ ಸೇರೋದಕ್ಕೂ ಮೂರ್ನಾಲ್ಕು ದಿನಗಳ ಬೇಕಾಗುತ್ತೆ. ಹೀಗಾಗಿ ದರ್ಶನ್ ಶಾಕ್ ಆಗಿದ್ದಾರೆ. ಆರಂಭದಲ್ಲಿ ತನಗೆ ವೆಸ್ಟರ್ನ್ ಟಾಯ್ಲೆಟ್ ಬೇಕು ಅನ್ನೋ ಬೇಡಿಕೆ ಇಟ್ಟಿದ್ರು. ಅದು ಕೋರ್ಟ್ ಗಮನಕ್ಕೆ ಹೋಗಿತ್ತು. ಅಂತೂ ಆ ವ್ಯವಸ್ಥೆ ಆಯ್ತು. ಅನಂತರ ಹಾಸಿಗೆ ಬೇಕು, ದಿಂಬು ಬೇಕು ಅಂತಾ ಬೇಡಿಕೆ ಇಟ್ಟಿದ್ರು. ಅದು ಅದೆಷ್ಟೋ ದಿನಗಳ ನಂತರ ಸಿಗುವಂತಾಯ್ತು. ಹಾಗೇ ತನಗೆ ಕೆಳಗೆ ಕುಳಿತುಕೊಳ್ಳಲು ಸಾಧ್ಯವಾಗಲ್ಲ, ಬೆನ್ನು ನೋವಿಗೆ, ಕೈ ನೋವಿದೆ ಹೀಗಾಗಿ ಕುರ್ಚಿ ಬೇಕು ಅಂತಾ ದರ್ಶನ್ ಕೋರ್ಟ್ ಮೊರೆ ಹೋಗಿದ್ರು. ಮಂಗಳವಾರದ ವಿಚಾರಣೆ ವೇಳೆ ನ್ಯಾಯಾಧೀಶರು ಕುರ್ಚಿ ಕೊಡಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆದರೆ, ಗುರುವಾರ ಸಂಜೆಯವರೆಗೂ ದರ್ಶನ್‌ಗೆ ಚೇರ್ ಮತ್ತು ದಿಂಬು ವ್ಯವಸ್ಥೆ ಕಲ್ಪಿಸಿರಲಿಲ್ಲ.
100 ಡೇಸ್ ಡೈರಿ! ಸಿಗರೇಟ್‌ಗೆ ಬೇಡಿಕೆ ಇಟ್ಟಿದ್ದಾರಾ ‘ದಾಸ’?
ದರ್ಶನ್ ಧಮ್ ಹೊಡೀತಾರೆ ಅನ್ನೋದ್ ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ, ಜೈಲಲ್ಲಿರೋ ನಿಯಮದ ಪ್ರಕಾರ ಯಾವುದೇ ಕೈದಿಗೆ ಸಿಗರೇಟು ನೀಡುವಂತೆ ಇಲ್ಲ. ಆದ್ರೆ, ದರ್ಶನ್ ಬೆಂಗಳೂರು ಜೈಲಲ್ಲಿ ಇದ್ದಾಗ ಸಿಗರೇಟ್ ವ್ಯವಸ್ಥೆ ಆಗ್ತಾ ಇತ್ತು. ಅದ್ಕೆ ಉದಾಹರಣೆಗೆ, ರೌಡಿಶೀಟರ್ ನಾಗನ ಜೊತೆ ಕುಳಿತ್ಕೊಂಡಿರೋ ಅದೊಂದು ಫೋಟೋ. ಆ ಫೋಟೋದಲ್ಲಿ ದರ್ಶನ್ ಕೈಯಲ್ಲಿ ಸಿಗರೇಟು ಇರೋದು ಕನ್ಫರ್ಮ್ ಆಗಿತ್ತು. ಆದ್ರೆ, ಬಳ್ಳಾರಿಗೆ ಹೋದ್ಮೇಲೆ ದರ್ಶನ್‌ಗೆ ಸಿಗರೇಟ್ ಸಿಗ್ತಾ ಇಲ್ಲ. ಹೀಗಾಗಿ ತಮ್ಗೆ ಸಿಗರೇಟ್ ಬೇಕು ಅಂತಾ ದರ್ಶನ್ ಜೈಲಾಧಿಕಾರಿಗಳ ಮೊರೆ ಹೋಗಿದ್ದಾರಂತೆ. ಆದ್ರೆ, ಕೋರ್ಟ್ ಮೂಲಕವೇ ಪಡೀಬೇಕು ಅಂತಾ ಜೈಲಾಧಿಕಾರಿಗಳು ದರ್ಶನ್‌ಗೆ ಸೂಚಿಸಿದ್ದಾರಂತೆ. ಇದ್ರಿಂದ ದರ್ಶನ್ ಬೇಸರವಾಗಿದ್ದಾರೆ ಅನ್ನೋ ವಿಚಾರಗಳು ಕೇಳಿಬರ್ತಿವೆ.
100 ಡೇಸ್ ಡೈರಿ! ದರ್ಶನ್‌ಗೆ ಸೌಲಭ್ಯ ನೀಡಲು ಗಣ್ಯರ ಪ್ರಭಾವ!
ಕೊಲೆ ಕೇಸ್ ಆರೋಪಿ ನಟ ದರ್ಶನ್ ತೂಗುದೀಪ ತಮಗೆ ಹೆಚ್ಚುವರಿ ಸೌಲಭ್ಯ ಬೇಕು ಎಂದು ಪ್ರಭಾವಿಗಳಿಂದ ಜೈಲು ಅಧಿಕಾರಿಗಳಿಗೆ ಒತ್ತಡ ಹಾಕಿಸ್ತಿದ್ದಾರೆ ಅನ್ನೋದು ತಿಳಿದು ಬರುತ್ತಿದೆ. ಈ ಹಿಂದೆ ದರ್ಶನ್ ಬೆಂಗಳೂರು ಜೈಲಲ್ಲಿ ಇದ್ದಾಗಲೂ ಸೌಲಭ್ಯ ನೀಡುವಂತೆ ಕೆಲವು ಪ್ರಭಾವಿಗಳು ಜೈಲಾಧಿಕಾರಿಗಳ ಮೇಲೆ ಒತ್ತಡ ಹಾಕಿದ್ದರಂತೆ. ಇದೀಗ ಬಳ್ಳಾರಿಯಲ್ಲೂ ಸೌಲಭ್ಯ ನೀಡಬೇಕು ಅಂತಾ ಪ್ರಭಾವಿಗಳು ನಾನಾ ರೀತಿಯಲ್ಲಿ ಪ್ರಯತ್ನ ನಡೆಸ್ತಿದ್ದಾರೆ ಅನ್ನೋದು ತಿಳಿದು ಬಂದಿದೆ.
ಇನ್ನೂ ಎಷ್ಟು ದಿನ ನಟ ದರ್ಶನ್‌ಗೆ ಜೈಲುವಾಸ?
ಆರಂಭದಲ್ಲಿ ದರ್ಶನ್ ಅರೆಸ್ಟ್ ಆಗಿದ್ದಾಗ ಇಡೀ ರಾಜ್ಯಕ್ಕೆ ಶಾಕ್ ಆಗಿತ್ತು. ನಿಜಕ್ಕೂ ರೇಣುಕಾಸ್ವಾಮಿಯನ್ನು ದರ್ಶನ್ ಹತ್ಯೆ ಮಾಡಿದ್ದು ಹೌದಾ? ಬೇರೆಯವ್ರು ಮಾಡಿದನ್ನು ದರ್ಶನ್ ತಲೆಗೆ ಹಾಕಿದ್ರಾ? ಅನ್ನೋ ಹತ್ತಾರು ಅನುಮಾನದ ಪ್ರಶ್ನೆಗಳು ಇದ್ವು. ಬಟ್, ಇನ್ನೇನು ದರ್ಶನ್ ತಮಗಿರೋ ಸ್ಟಾರ್‌ಗಿರಿಗೆ ಮೂರ್ನಾಲ್ಕು ದಿನದಲ್ಲಿ ಹೊರಗೆ ಬರ್ತಾರೆ ಬಿಡು ಅಂತಾ ಅಭಿಮಾನಿಗಳು ಅಂದುಕೊಂಡಿದ್ರು. ಆದ್ರೆ, ಈಗ ಬರೋಬ್ಬರಿ 100 ದಿನ ದಾಟಿದೆ. ಆದ್ರೂ ದರ್ಶನ್ ಜೈಲಿಂದ ಹೊರಗೆ ಬರೋದು ಇರಲಿ. ಜಾಮೀನು ಮೊರೆಯನ್ನು ಹೋಗಿಲ್ಲ. ಅದು ಯಾಕೆ ಅನ್ನೋದೇ ಯಕ್ಷ ಪ್ರಶ್ನೆ. ಯಾಕಂದ್ರೆ, ಈ ಹಿಂದೆ ಪೊಲೀಸ್ರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಿ. ಆಮೇಲೆ ಜಾಮೀನು ಮೊರೆ ಹೋಗ್ತಾರೆ ಅನ್ನೋ ನಿರೀಕ್ಷೆ ಇತ್ತು. ಆದ್ರೆ, ಪೊಲೀಸ್ರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ರೂ ದರ್ಶನ್ ಬೇಲ್‌ಗೆ ಅರ್ಜಿ ಸಲ್ಲಿಕೆ ಮಾಡಿಲ್ಲ. ಕಾನೂನು ತಜ್ಞರು ಹೇಳೋ ಪ್ರಕಾರ ಇನ್ನೂ ಆರೇಳು ತಿಂಗಳು ದರ್ಶನ್‌ಗೆ ಬೇಲು ಸಿಗೋದು ಡೌಟು ಅಂತಾರೆ.
ಇದನ್ನೂ ಓದಿ:ದರ್ಶನ್‌ಗೆ ಮತ್ತೊಂದು ಕೇಸ್‌ನಲ್ಲಿ ಸಂಕಷ್ಟ.. ಪೊಲೀಸರಿಂದ ಬಿಗ್ ಪ್ಲಾನ್ ರೆಡಿ.. ಏನದು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ