/newsfirstlive-kannada/media/post_attachments/wp-content/uploads/2024/06/darshan-2-1.jpg)
ಸ್ಯಾಂಡಲ್​ವುಡ್​​​ ನಟ ದರ್ಶನ್​ ಅರೆಸ್ಟ್​ ಆದ ಬೆನ್ನಲ್ಲೇ ಅವರ ಕರಾಳ ಮುಖ ಅನಾವರಣಗೊಳ್ಳುತ್ತಿದೆ. ಮಾತ್ರವಲ್ಲದೆ ಹಲವು ಆರೋಪಗಗಳು ಅವರ ಮೇಲೆ ಕೇಳಿ ಬರುತ್ತಿವೆ. ನಿರ್ಮಾಪಕರೊಬ್ಬರಿಗೆ ದರ್ಶನ್​ ಜೀವ ಬೆದರಿಕೆ ಹಾಕಿರುವ ಸಂಗತಿ ಮುನ್ನೆಲೆ ಬಂದಿದೆ.
ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾದ ನಿರ್ಮಾಪಕನಿಗೆ ದರ್ಶನ್​ ಜೀವ ಬೆದರಿಕೆ ಹಾಕಿದ್ದರಂತೆ. ಈ ಸಿನಿಮಾದ ಮುಹೂರ್ತಕ್ಕೆ ದರ್ಶನ್​ ಆಗಮಿಸಿದ್ದರು. ಸಿನಿಮಾದ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಆಗಿತ್ತು. ಆನಂತರದಲ್ಲಿ ಹಣ ವ್ಯತ್ಯಯ ಕಂಡು ಬಂದಿದ್ದರಿಂದ ಶೂಟಿಂಗ್ ತಡವಾಗಿತ್ತು. ಈ ವಿಚಾರವಾಗಿ ನಿರ್ಮಾಪಕ ಭರತ್ ಕರೆಸಿ, ದರ್ಶನ್ ಬೆದರಿಕೆ ಹಾಕಿದ್ದರಂತೆ.
/newsfirstlive-kannada/media/post_attachments/wp-content/uploads/2024/06/Movie.jpg)
ಭೂಮಿ ಮೇಲೆ ಇಲ್ಲದಂತೆ ಮಾಡಿಸ್ತೀನಿ
ಈ ಸಿನಿಮಾ ಕಂಪ್ಲೀಟ್ ಮಾಡದಿದ್ರೆ, ಭೂಮಿ ಮೇಲೆ ಇಲ್ಲದಂತೆ ಮಾಡಿಸ್ತೀನಿ ಅಂತಾ ಬೆದರಿಕೆ ಹಾಕಿದ್ದರಂತೆ. ಕೆಂಗೇರಿ ರಸ್ತೆಯ ಟೊರಿನೊ ಫ್ಯಾಕ್ಟರಿಗೆ ಕರೆಸಿ ಬೆದರಿಕೆ ಹಾಕಿದ್ದರಂತೆ. ಸಿನಿಮಾದ NOC ಕೊಡುವಂತೆ ಒತ್ತಾಯಿಸಿದ್ದರಂತೆ. ಆದರೆ ದುಡ್ಡು ಕ್ಲಿಯರ್ ಮಾಡೋ ತನಕ NOC ಕೊಡಲ್ಲ ಎಂದು ನಿರ್ಮಾಪಕ ಹೇಳಿದ್ದರಂತೆ.
ರಕ್ಷಣೆ ನೀಡುವಂತೆ ಪೊಲೀಸರ ಮೊರೆ
ಇದೀಗ ನಿರ್ಮಾಪಕ ಭರತ್ ಗೌಡ ಮಾತನಾಡಿದ್ದ ಹಳೆಯ ಆಡಿಯೋ ವೈರಲ್ ಆಗಿದೆ. ಅಭಿಮಾನಿಗಳಿಂದ ನಿರ್ಮಾಪಕನಿಗೆ ಜೀವ ಬೆದರಿಕೆ ಕೂಡ ಬರ್ತಿದೆ. ಹೀಗಾಗಿ ತಮಗೆ ರಕ್ಷಣೆ ನೀಡುವಂತೆ ಭರತ್ ಪೊಲೀಸರ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಆಗಿದ್ದು ಹೇಗೆ? ಕೊನೆಗೂ ಸತ್ಯ ಬಾಯ್ಬಿಟ್ಟ ಆರೋಪಿಗಳು; A1, A2, A3 ಹೇಳಿದ್ದೇನು?
ಬೆದರಿಕೆ ಪ್ರಕರಣದಲ್ಲಿ ಅವ್ರು ಇದ್ದರು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಲಕ್ಷ್ಮಣ್, ನಾಗರಾಜ್ ಕೂಡ ಈ ಬೆದರಿಕೆ ಪ್ರಕರಣದಲ್ಲಿ ಇದ್ದರು. ಈಗಾಗಲೇ ಕಂಪ್ಲೆಂಟ್ ಕೊಡಲಾಗಿದೆ. ಇಂದು FIR ಆಗಲಿದೆ ಎಂದು ನಿರ್ಮಾಪಕ ಭರತ್​ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us