Advertisment

ದರ್ಶನ್ ಬಟ್ಟೆ ಬಗ್ಗೆ ಹೀಗೊಂದು ಚರ್ಚೆ.. ಜೈಲಿನಲ್ಲಿ ​​ಬ್ರಾಂಡೆಡ್​ ಬಟ್ಟೆ ಧರಿಸಬಹುದಾ?

author-image
AS Harshith
Updated On
ಬಳ್ಳಾರಿಯಲ್ಲಿದ್ರೂ ಬಿಡದ ಪವಿತ್ರಾ ಗೌಡ.. ಕೊಲೆ ಕೇಸ್‌ಗೆ ಅತಿ ದೊಡ್ಡ ಟ್ವಿಸ್ಟ್; ದರ್ಶನ್‌ಗೆ ಹೊಸ ಟೆನ್ಷನ್‌; ಏನಾಯ್ತು?
Advertisment
  • ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿರುವ ದರ್ಶನ್​​
  • ದರ್ಶನ್​ ಬಳ್ಳಾರಿ ಜೈಲು ಸೇರಿ ಮೂರು ದಿನ ಕಳೆದ ದಾಸ
  • ಜೈಲಿನಲ್ಲಿ ದರ್ಶನ್ ಬ್ರಾಂಡೆಡ್ ಬಟ್ಟೆ ಧರಿಸುವ ಬಗ್ಗೆ ಭಾರೀ ಚರ್ಚೆ​

ದರ್ಶನ್​ ಬಳ್ಳಾರಿ ಜೈಲು ಸೇರುವಾಗ ಬ್ರಾಂಡೆಡ್​ ಬಟ್ಟೆ ಧರಿಸಿರುವ ದೃಶ್ಯ ಸೆರೆಯಾಗಿತ್ತು. ಅನೇಕರು ಈ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆದರೀಗ ವಿಚಾರಣಾಧೀನ ಕೈದಿ ಆಗಿರೋ ದರ್ಶನ್​ ಯಾವುದೇ ರೀತಿಯ ಬಟ್ಟೆ ಧರಿಸಬಹುದು ಎಂಬ ಸಂಗತಿ ಹೊರಬಿದ್ದಿದೆ.

Advertisment

ಇದನ್ನೂ ಓದಿ: ಕಿಚ್ಚ ಸುದೀಪ್ ದಿಢೀರ್ ಸುದ್ದಿಗೋಷ್ಠಿ; ಸಿನಿಮಾ? ಬಿಗ್​ಬಾಸ್​ ಬಗ್ಗೆ ಅಪ್ಡೇಟ್ ಕೊಡ್ತಾರಾ ಬಾದ್​ ಷಾ!

ಬಳ್ಳಾರಿ ಜೈಲಿನಲ್ಲೂ ನಟ ದರ್ಶನ್ ಬ್ರಾಂಡೆಡ್ ಬಟ್ಟೆ ಧರಿಸಲಿಕ್ಕೆ ಯಾವುದೇ ಅಡ್ಡಿ ಇಲ್ಲ. ವಿಚಾರಣಾಧೀನ ಕೈದಿ ಆಗಿರೋ ದರ್ಶನ್​ ಯಾವುದೇ ರೀತಿಯ ಬಟ್ಟೆ ಧರಿಸಬಹುದು. ತನಗಿಷ್ಟದ ಬಟ್ಟೆಯನ್ನ ಕುಟುಂಬಸ್ಥರಿಂದ ಪಡೆದು ಧರಿಸಲಿಕ್ಕೆ ಅವಕಾಶವಿದೆ. ದರ್ಶನ್​ಗೆ ಕೇವಲ ಬ್ರಾಂಡೆಡ್ ಬಟ್ಟೆ ಮಾತ್ರವಲ್ಲ, ಬ್ರಾಂಡೆಡ್ ಚಪ್ಪಲಿ, ಶೂ ಕೂಡ ಧರಿಸಲಿಕ್ಕೆ ಅವಕಾಶವಿದೆ.

ಇದನ್ನೂ ಓದಿ: ಸ್ವಂತ ಹಣದಿಂದ ದರ್ಶನ್ ಕೇಸ್ ತನಿಖೆ; ಇಲ್ಲಿಯವರೆಗೆ ಪೊಲೀಸರು ಎಷ್ಟು ಖರ್ಚು ಮಾಡಿದ್ದಾರೆ..?

Advertisment

ಬೆಂಗಳೂರಿನಿಂದ ಬಳ್ಳಾರಿಗೆ ಶಿಫ್ಟ್ ಮಾಡೋ ವೇಳೆಯೂ ದರ್ಶನ್ ಬ್ರಾಂಡೆಡ್ ಶರ್ಟ್ ಧರಿಸಿದ್ದರು. ಇನ್ನು ರೇಣುಕಾಸ್ವಾಮಿ  ಕೊಲೆ ಆರೋಪಿಯಾಗಿರುವ ದರ್ಶನ್ ತನಗಿಷ್ಟವಾದ ಎಷ್ಟು ಜೊತೆ ಬಟ್ಟೆ, ಶೂ ತನ್ನ ಬಳಿ ಇಟ್ಟುಕೊಳ್ಳಬಹುದು. ಕಣ್ಣಿನ ದೃಷ್ಟಿ ಕಡಿಮೆ ಇದ್ದಲ್ಲಿ ಪವರ್ ಗ್ಲಾಸ್ ಧರಿಸಲಿಕ್ಕೂ ವಿಚಾರಣಾಧೀನ ಕೈದಿಗೆ ಅವಕಾಶವಿದೆ. ಹೀಗಾಗಿ ಬ್ರಾಂಡೆಡ್ ಬಟ್ಟೆ ಶೂ ಜೊತೆ ಪವರ್ ಗ್ಲಾಸ್ ತನ್ನೊಂದಿಗೆ ಇಟ್ಟುಕೊಲ್ಲಲು ದರ್ಶನ್ ಅವಕಾಶವಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment