newsfirstkannada.com

×

ಆಸ್ಪತ್ರೆ ಮುಂದೆ ಕೈಹಿಡಿದು ಎಳೆದ ಅಭಿಮಾನಿ; ಅಲ್ಲೇ ಗರಂ ಆದ ದರ್ಶನ್

Share :

Published October 23, 2024 at 7:13am

Update October 23, 2024 at 8:22am

    ಏಕಾಏಕಿ ಕೈ ಎಳೆದಿದ್ರಿಂದ ಆರೋಪಿ ದರ್ಶನ್ ಗರಂ

    ಬಳಿಕ ಪೊಲೀಸರ ಭದ್ರತೆಯಲ್ಲಿ ​ಆ್ಯಂಬುಲೆನ್ಸ್ ಏರಿದ ದರ್ಶನ್

    ಕೊಲೆ ಆರೋಪಿ ದರ್ಶನ್​ಗೆ ವಿಮ್ಸ್​ ಆಸ್ಪತ್ರೆಯಲ್ಲಿ MRI ಸ್ಕ್ಯಾನ್

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್​​ಗೆ ಬೆನ್ನುನೋವಿನ ಸಮಸ್ಯೆ ಉಲ್ಬಣಗೊಂಡಿದೆ. ಅತ್ತ ಇದೇ ಕಾರಣ ಇಟ್ಕೊಂಡು ಬೆಂಗಳೂರಿಗೆ ಮರಳಲು ದರ್ಶನ್ ಕಾನೂನು ಹೋರಾಟ ಆರಂಭಿಸಿದ್ದಾರೆ. ಈ ಸಂಬಂಧ ಹೈಕೋರ್ಟ್ ವೈದ್ಯಕೀಯ​ ವರದಿ ಕೇಳಿದ ಬೆನ್ನಲ್ಲೇ ವಿಮ್ಸ್​ನಲ್ಲಿ ದಾಸನಿಗೆ ಸ್ಕ್ಯಾನಿಂಗ್ ಮಾಡಲಾಗಿದೆ.

ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನಿಂದ ದರ್ಶನ್​ ಪರದಾಡುತ್ತಿದ್ದಾರೆ ಎನ್ನಲಾಗಿದೆ. ಇಷ್ಟಿದ್ರೂ ಬಳ್ಳಾರಿಯಲ್ಲಿ ಸ್ಕ್ಯಾನಿಂಗ್ ಬೇಡ, ನಾನು ಬೆಂಗಳೂರಲ್ಲೇ ತೋರಿಸೋದು ಅಂತಿದ್ದ ದರ್ಶನ್​ಗೆ ಬೆನ್ನುನೋವು ಬಲವಾದ ಪೆಟ್ಟು ಕೊಟ್ಟಿದೆ. ನೋವು ಹೆಚ್ಚಾದ ಹಿನ್ನೆಲೆ ಚಿಕಿತ್ಸೆ ಅತ್ಯಗತ್ಯ ಅನ್ನೋದು ಅರಿವಾಗಿದೆ. ಹೈಕೋರ್ಟ್ ಕೂಡ ಮೆಡಿಕಲ್ ರಿಪೋರ್ಟ್ ಕೇಳಿರೋದ್ರಿಂದ ಬಳ್ಳಾರಿಯಲ್ಲಿ ದರ್ಶನ್ ಚಿಕಿತ್ಸೆ ಆರಂಭವಾಗಿದೆ.

ಇದನ್ನೂ ಓದಿ: ಮುಳುಗಿದ ಬೆಂಗಳೂರು.. ರಣ ಭಯಂಕರ ಮಳೆಯ ನರಕ ದರ್ಶನದ 10 ಫೋಟೋಗಳು..!

ಬಳ್ಳಾರಿ ವಿಮ್ಸ್‌ನಲ್ಲಿ ದರ್ಶನ್​ಗೆ ಎಂಆರ್​ಐ ಸ್ಕ್ಯಾನಿಂಗ್

ಬೆನ್ನುನೋವಿನ ವಿಚಾರದಲ್ಲಿ ಮೊಂಡಾಟವನ್ನ ಬದಿಗಿಟ್ಟ ಸಾರಥಿ ಕೊನೆಗೂ ಬಳ್ಳಾರಿ ವಿಮ್ಸ್‌ನಲ್ಲಿ ಸ್ಕ್ಯಾನಿಂಗ್ ಮಾಡಿಸೋದಕ್ಕೆ ಒಪ್ಪಿಗೆ ಸೂಚಿಸಿದ್ದ. ಪತ್ನಿಯೂ ಕೂಡ ಜೈಲಿಗೆ ಭೇಟಿ ಕೊಟ್ಟ ವೇಳೆ ದರ್ಶನ್‌ಗೆ ಚಿಕಿತ್ಸೆ ಬಗ್ಗೆ ಮನವರಿಕೆ ಮಾಡಿದ್ದರು. ಸ್ಕ್ಯಾನಿಂಗ್ ರಿಪೋರ್ಟ್ ಹಿಡಿದು ಹೈಕೋರ್ಟ್​ನಲ್ಲಿ ಹೋರಾಟ ಮಾಡಿ ಜಾಮೀನು ಪಡೆಯೋಣ. ಇಲ್ಲವಾದ್ರೆ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗೆ ಸೇರಿಸಿ ಅಲ್ಲೇ ಚಿಕಿತ್ಸೆ ಕೊಡಿಸುವ ಯತ್ನ ಮಾಡೋಣ ಅಂತಾ ದರ್ಶನ್‌ಗೆ ಧೈರ್ಯ ತುಂಬಿದ್ದರು ಎನ್ನಲಾಗಿದೆ. ಹೀಗಾಗಿ ದರ್ಶನ್ ಬಳ್ಳಾರಿ ವಿಮ್ಸ್​ನಲ್ಲಿ ಸ್ಕಾನಿಂಗ್ ಮಾಡಿಸಲು ಒಪ್ಪಿಗೆ ನೀಡಿದ್ದು, ರಾತ್ರಿ ಮೆಡಿಕಲ್ ಚೆಕಪ್ ನಡೆದಿದೆ.

ರಾತ್ರಿ 9.10ಕ್ಕೆ ಆ್ಯಂಬುಲೆನ್ಸ್​ನಲ್ಲಿ ದರ್ಶನ್​ನ ಜೈಲಿನಿಂದ ವಿಮ್ಸ್‌‌ಗೆ ಕರದೊಯ್ಯಲಾಯ್ತು. ದರ್ಶನ್ ಆಸ್ಪತ್ರೆ ಬಳಿ ಬರ್ತಿದಂತೆ ಅಭಿಮಾನಿಗಳ ಶಿಳ್ಳೆ ಹರ್ಷೋದ್ಘಾರ ಜೋರಾಯ್ತು. ಪೊಲೀಸ್ ಭದ್ರತೆಯಲ್ಲಿ ವಿಮ್ಸ್‌ನಲ್ಲಿ ದರ್ಶನ್ MRI ಸ್ಕ್ಯಾನಿಂಗ್ ಮಾಡಲಾಯ್ತು. ರಾತ್ರಿ 10.10ರವರೆಗೂ ಸ್ಕ್ಯಾನಿಂಗ್ ಮಾಡಲಾಯ್ತು.

ಇದನ್ನೂ ಓದಿ:BBK11: ಭವ್ಯಾ ಗೌಡ, ತ್ರಿವಿಕ್ರಮ ಲವ್​ ಇದ್ಯಾ; ಶಾಕಿಂಗ್​ ರಿಯಾಕ್ಷನ್​ ಬಿಚ್ಚಿಟ್ಟ ಬಿಗ್​ಬಾಸ್​ ರಂಜಿತ್​

ಪ್ರಾಥಮಿಕ ಮಾಹಿತಿ ಪ್ರಕಾರ ದರ್ಶನ್ ಬ್ಯಾಕ್ ಬೋನ್ 15 ಪರ್ಸೆಂಟ್​ನಷ್ಟು ಇರುವ ಜಾಗ ಬಿಟ್ಟು ಪಕ್ಕಕ್ಕೆ ಸರೆದಿದೆ. ಹೀಗಾಗಿ ಅದನ್ನ ಫಿಜಿಯೋಥೆರಪಿ ಮೂಲಕ ಸರಿಮಾಡಲು ಸಾಧ್ಯವಿಲ್ಲ.‌ ಹೀಗಾಗಿ ಸ್ಕಾನಿಂಗ್ ಹಾಗೂ ಸರ್ಜರಿ ಅಗತ್ಯ ಇದೆ ಅಂತಾ ವೈದ್ಯರು ಮೌಖಿಕವಾಗಿ ತಿಳಿಸಿದ್ದರು ಎನ್ನಲಾಗಿದೆ. ಸದ್ಯ ಈ ಸ್ಕ್ಯಾನಿಂಗ್ ರಿಪೋರ್ಟ್​ಗಾಗಿ ವೈದ್ಯರು ಕಾಯ್ತಿದ್ದಾರೆ. ಈ ರಿಪೋರ್ಟ್​ನಲ್ಲಿ ಸರ್ಜರಿ ಅಗತ್ಯ ಅನ್ನೊದು ಗೊತ್ತಾದ್ರೆ ಬಳ್ಳಾರಿ ಆಸ್ಪತ್ರೆಯಲ್ಲಿ ಅಷ್ಟೊಂದು ಸೌಲಭ್ಯಗಳಿಲ್ಲ. ಹೀಗಾಗಿ ಬೆಂಗಳೂರಿಗೆ ಶಿಪ್ಟ್ ಮಾಡಿಸಿ ಅಂತಾ ದರ್ಶನ್ ಕುಟುಂಬಸ್ಥರು ಕೋರ್ಟ್​ನಲ್ಲಿ ಮನವಿ ಮಾಡೋಕೆ ಸಿದ್ಧತೆ ನಡೆಸಿದೆ.

ಆಸ್ಪತ್ರೆಯಿಂದ ಬರೋ ವೇಳೆ ದರ್ಶನ್ ಕೈ ಎಳೆದ ಅಭಿಮಾನಿ​
ದರ್ಶನ್ ಆಸ್ಪತ್ರೆಯಿಂದ ಹೊರಡುವ ವೇಳೆ ಪೊಲೀಸರ ಮಧ್ಯೆ ತೂರಿ ಬಂದ ಅಭಿಮಾನಿಯೊಬ್ಬ ದರ್ಶನ್ ಕೈ ಹಿಡಿದು ಎಳೆದಿದ್ದಾನೆ. ಈ ವೇಳೆ ಫ್ಯಾನ್ ಮೇಲೆಯೇ ಒಂದು ಕ್ಷಣ ದರ್ಶನ್ ಗರಂ ಆದ ದೃಶ್ಯ ಕಂಡು ಬಂತು. ಅಂತಿಮವಾಗಿ ಆಸ್ಪತ್ರೆಯಿಂದ ನೇರ ಜೈಲಿಗೆ ಬಂದ ದರ್ಶನ್​ ಬೆನ್ನನ್ನ ಹಿಡಿದುಕೊಂಡೇ ತಮ್ಮ ಸೆಲ್ ಸೇರಿದ್ರು. ಒಟ್ಟಿನಲ್ಲಿ ಈ ಬೆನ್ನುನೋವು ಅಭಿಮಾನಿಗಳ ಪಾಲಿನ ಬಾಸ್​ನ ಬಿಟ್ಟುಬಿಡದೇ ಕಾಡ್ತಿರೋದಂತೂ ಸುಳ್ಳಲ್ಲ!

ಇದನ್ನೂ ಓದಿ:ಜನಬಲ, ಧನಬಲ ಗಟ್ಟಿಯಾಗುವ ದಿನ, ಪ್ರೇಮಿಗಳ ಮಧ್ಯೆ ಬೇಸರ; ಇಲ್ಲಿದೆ ಇಂದಿನ ಭವಿಷ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಪತ್ರೆ ಮುಂದೆ ಕೈಹಿಡಿದು ಎಳೆದ ಅಭಿಮಾನಿ; ಅಲ್ಲೇ ಗರಂ ಆದ ದರ್ಶನ್

https://newsfirstlive.com/wp-content/uploads/2024/10/DARSHAN-1.jpg

Load More