newsfirstkannada.com

ಬಳ್ಳಾರಿ ಜೈಲಿಗೆ ದರ್ಶನ್​​ ಎಂಟ್ರಿ ಕೊಡುತ್ತಿರೋದು ಇದೇ ಮೊದಲಲ್ಲ! 7 ವರ್ಷದ ಹಿಂದಿನ ಘಟನೆ ನೆನಪಿಲ್ವಾ?

Share :

Published August 28, 2024 at 10:25am

Update August 28, 2024 at 11:30am

    ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ದರ್ಶನ್​ ಶಿಫ್ಟ್​

    150 ವರ್ಷಗಳ ಹಳೆಯ ಜೈಲಿಗೆ ಹೋಗುತ್ತಿರೋ ದರ್ಶನ್​

    ರೀಲಲ್ಲಿ ನಡೆದ ಕಥೆ ದಾಸನಿಗೆ ರಿಯಲಲ್ಲೂ ಎದುರಾಯ್ತು!

ರೇಣುಕಾಸ್ವಾಮಿ ಹತ್ಯೆ ಕೇಸ್​ನ A2 ಆರೋಪಿ ದರ್ಶನ್​ ಬಳ್ಳಾರಿಗೆ ಶಿಫ್ಟ್​ ಆಗುವ ಪರಿಸ್ಥಿತಿ ಬಂದಿದೆ. ಪರಪ್ಪನ ಅಗ್ರಹಾರ ಜೈಲಲ್ಲಿ ಆರಾಮಾಗಿ ಇದ್ದ ದಾಸನಿಗೆ ಅದೊಂದು ಫೋಟೋ ಸಂಕಷ್ಟ ತಂದೊಡ್ಡಿದೆ. ಜೊತೆಗೆ 3 ಎಫ್​ಐಆರ್​ಗೆ ಸೇರ್ಪಡೆಗೊಂಡಿದೆ.

ದರ್ಶನ್​ಗೆ​​ ಪರಪ್ಪನ ಅಗ್ರಹಾರ ಸೇರಿ ಮೂರು ತಿಂಗಳಿಂದ ರಾಜಾತಿಥ್ಯದಲ್ಲಿ ದಿನದೂಡುತ್ತಿದ್ದರು. ಯಾರಿಗೂ ತಿಳಿಯದಂತೆ ಸಿಗರೇಟು, ವಿಡಿಯೋ ಕರೆ, ಚಿಕನ್​-ಮಟನ್​ ಅಡುಗೆ ಹೀಗೆ ಎಲ್ಲವೂ ದರ್ಶನ್ ಸೇರುತ್ತಿತ್ತು. ಆದರೆ ರೌಡಿ ವೇಲು ತೆಗೆದ ಫೋಟೋ ದರ್ಶನ್​ನನ್ನು ಬೆಂಗಳೂರಿನಿಂದ 300ಕಿಲೋ ಮೀಟರ್​ಗೂ ದೂರದ ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡುವಂತೆ ಮಾಡಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಿಂದ 326km ದೂರ, 150 ವರ್ಷಗಳ ಇತಿಹಾಸ! ಬಳ್ಳಾರಿ ಜೈಲು ಅಂದ್ರೆ ಭಯ ಬೀಳೋದ್ಯಾಕೆ ಕೈದಿಗಳು?

ಅಂದಹಾಗೆಯೇ ಬಳ್ಳಾರಿ ಜೈಲು ಇಂದು ನಿನ್ನೆಯದಲ್ಲ. 150 ವರ್ಷಗಳ ಇತಿಹಾವಿರುವ ಜೈಲು. ಬ್ರಿಟಿಷರ ಕರಿ ನೆರಳ ಛಾಯೆ ಈ ಜೈಲಿನಲ್ಲಿದೆ. ಅನೇಕ ಸ್ವಾತಂತ್ರ್ಯ ಹೋರಾಟಗಾರರ ಈ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಉದಾಹರಣೆಗಳಿವೆ. ಆದರೀಗ ಇದೇ ಜೈಲಿಗೆ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​​ ತೆರಳುತ್ತಿದ್ದಾರೆ.

ಇದನ್ನೂ ಓದಿ: ಇದೇನಾ ನೀರಿಲ್ಲದ ಜೈಲು! ದರ್ಶನ್​​ ಸೇರುವ ಬಳ್ಳಾರಿ ಜೈಲಿನಲ್ಲಿದೆ ಬ್ರಿಟಿಷರ ಕರಿ ನೆರಳ ಛಾಯೆ!

ದರ್ಶನ್​ ಕೈದಿಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಂತೆಯೇ 2017ರಲ್ಲಿ ತೆರೆಕಂಡ ಚೌಕ ಸಿನಿಮಾದಲ್ಲಿ ದರ್ಶನ್​​ ಗೆಸ್ಟ್​​ ಆಗಿ ನಟಿಸಿದ್ದರು. ಈ ಸಿನಿಮಾದ ಕೆಲವು ಸೀನ್​ಗಳ ಶೂಟಿಂಗ್​ ಬಳ್ಳಾರಿ ಜೈಲಿನಲ್ಲಿ ನಡೆದಿದೆ. ಹೀಗಾಗಿ ಈ ಸಿನಿಮಾ ತೆರೆಕಂಡು 7 ವರ್ಷವಾಗಿದೆ ಎಂಬುದನ್ನು ನೆನಪಿಸಬೇಕಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್​; ದರ್ಶನ್ ಬರೋ ಸುದ್ದಿ ತಿಳಿದು ಕೈದಿಗಳು ಖುಷ್.. ಯಾಕಿರಬಹುದು?

ಇನ್ನು ಚೌಕ ಸಿನಿಮಾ ತರುಣ್​ ಸುಧೀರ್​ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾವಾಗಿದೆ. ಯೋಗಿಶ್​​ ದ್ವಾರಕೀರ್ಶ್ ಮತ್ತು ಹಿರಿಯ ನಟ ದ್ವಾರಕೀಶ್​​ ಅವರ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿತ್ತು. ಈ ಸಿನಿಮಾದಲ್ಲಿ ಪ್ರೇಮ್​, ದಿಗಂತ್​​, ಪ್ರಜ್ವಲ್​ ದೇವರಾಜ್​, ವಿಜಯ್​ ರಾಘವೇಂದ್ರ, ಐಂದ್ರಿತಾ ರೇ, ದೀಪಾ ಸನ್ನಿಧಿ, ಪ್ರಿಯಾಮಣಿ, ಭಾವನಾ ನಟಿಸಿದ್ದರು. ಮತ್ತೊಂದು ಅಚ್ಚರಿ ಎಂದರೆ ಹಿರಿಯ ನಟರಾದ ಕಾಶಿನಾಥ್​, ದ್ವಾರಕೀಶ್​ ಕೂಡ ಇದರಲ್ಲಿ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಳ್ಳಾರಿ ಜೈಲಿಗೆ ದರ್ಶನ್​​ ಎಂಟ್ರಿ ಕೊಡುತ್ತಿರೋದು ಇದೇ ಮೊದಲಲ್ಲ! 7 ವರ್ಷದ ಹಿಂದಿನ ಘಟನೆ ನೆನಪಿಲ್ವಾ?

https://newsfirstlive.com/wp-content/uploads/2024/08/darshan2-1.jpg

Load More