ದರ್ಶನ್​, ಪವಿತ್ರಾ ಜೈಲು ಸೇರಿದ ಬೆನ್ನಲ್ಲೇ ಮತ್ತೆ ಬಿಗ್ ಟ್ವಿಸ್ಟ್​ ಕೊಟ್ಟ ಪತ್ನಿ ವಿಜಯಲಕ್ಷ್ಮಿ

author-image
Bheemappa
Updated On
ದರ್ಶನ್​, ಪವಿತ್ರಾ ಜೈಲು ಸೇರಿದ ಬೆನ್ನಲ್ಲೇ ಮತ್ತೆ ಬಿಗ್ ಟ್ವಿಸ್ಟ್​ ಕೊಟ್ಟ ಪತ್ನಿ ವಿಜಯಲಕ್ಷ್ಮಿ
Advertisment
  • ಕೊಲೆ ಕೇಸ್​ನಲ್ಲಿ ಎ-2 ಆರೋಪಿಯಾಗಿರುವ ನಟ ದರ್ಶನ್​
  • ನಿನ್ನೆಯಷ್ಟೇ ಗಂಡನನ್ನ ಅನ್​ ಫಾಲೋ ಮಾಡಿದ್ದ ವಿಜಯಲಕ್ಷ್ಮಿ
  • ದರ್ಶನ್​ ಫ್ಯಾನ್ ಪೇಜ್​ ಅನ್ನು ಅನ್​​ಫಾಲೋ ಮಾಡಿದ್ದ ಪತ್ನಿ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎ1 ಆರೋಪಿಯಾಗಿ ಪವಿತ್ರಾ ಗೌಡರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇಂದೊಂದು ಪ್ರಕರಣದಿಂದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ತುಂಬಾ ಬೇಸರವಾಗಿದ್ದರು. ಇದರ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ಇನ್​ಸ್ಟಾ ಖಾತೆಯನ್ನು ಡಿ-ಆಕ್ಟಿವೇಟ್‌ ಮಾಡಿದ್ದಾರೆ.

ಇದನ್ನೂ ಓದಿ: ​IPLನಲ್ಲಿ ಆರ್ಭಟಿಸಿದ್ದ ವಿರಾಟ್​ ವಿಶ್ವಕಪ್​ನಲ್ಲಿ ಸೈಲೆಂಟ್.. ಕೊಹ್ಲಿರನ್ನ ಬೆಂಚ್ ಕಾಯಿಸ್ತಾರಾ ಕ್ಯಾಪ್ಟನ್ ರೋಹಿತ್?

ರೇಣುಕಾಸ್ವಾಮಿ ಕೊಲೆ ಪ್ರರಕಣದಲ್ಲಿ ಪವಿತ್ರಾ ಗೌಡ, ದರ್ಶನ್ ಹೆಸರು ಕೇಳಿ ಬರುತ್ತಿದ್ದಂತೆ ನಿನ್ನೆ ಇನ್​​ಸ್ಟಾದಲ್ಲಿ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಅನ್​ಫಾಲೋ ಮಾಡಿದ್ದರು. ಅಲ್ಲದೇ ದರ್ಶನ್ ಫ್ಯಾನ್​ ಪೇಜ್​ ಅನ್ನು ಅನ್​​ಫಾಲೋ ಮಾಡಿ ಇನ್​​ಸ್ಟಾಗೆ ಇದ್ದ ಡಿಪಿ ಫೋಟೋವನ್ನು ತೆಗೆದು ಹಾಕಿದ್ದರು. ಇದರಿಂದ ಇನ್​​ಸ್ಟಾ ಖಾತೆಯ ಡಿಪಿ ಬ್ಲಾಂಕ್​ನಲ್ಲಿತ್ತು. ಸದ್ಯ ಈ ಎಲ್ಲದರ ಬೆನ್ನಲ್ಲೇ ಇದೀಗ ತಮ್ಮ ಇನ್​ಸ್ಟಾ ಖಾತೆಯನ್ನು ವಿಜಯಲಕ್ಷ್ಮಿ ಅವರು ಡಿ-ಆ್ಯಕ್ಟಿವೇಟ್ ಮಾಡಿದ್ದಾರೆ.

ಇದನ್ನೂ ಓದಿ: ಅಪಾರ್ಟ್​​ಮೆಂಟ್​ನಲ್ಲಿ ಭೀಕರ ಅಗ್ನಿ.. ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಭಾರತೀಯರು ಸಜೀವ ದಹನ

publive-image

ವಿಜಯಲಕ್ಷ್ಮಿ ಅವರು ಹೀಗೆ ಮಾಡಿರುವುದರಿಂದ ತಾವು ದರ್ಶನ್ ವಿಚಾರದಲ್ಲಿ ಸಖತ್ ಬೇಜಾರ್ ಆಗಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಕೊಲೆ ಕೇಸ್​​ನಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಅವರಿಂದ ವಿಜಯಲಕ್ಷ್ಮಿ ಅಂತರ ಕಾಯ್ದುಕೊಂಡರೆ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ರೇಣುಕಾಸ್ವಾಮಿ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು ಕೆದಕಿದಷ್ಟು ಮಾಹಿತಿ ಪೊಲೀಸರಿಗೆ ಲಭ್ಯವಾಗುತ್ತಿದೆ. ಈ ಎಲ್ಲದರ ಕಾರಣದಿಂದ ವಿಜಯಲಕ್ಷ್ಮಿ ಅವರು ತಮ್ಮ ಇನ್​ಸ್ಟಾ ಖಾತೆಯನ್ನು ಡಿ-ಆ್ಯಕ್ಟಿವೇಟ್ ಮಾಡಿರಬಹುದು ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment