Advertisment

ದರ್ಶನ್​ ಅರೆಸ್ಟ್​ ಬೆನ್ನಲ್ಲೇ ನಟಿ ಪವಿತ್ರಾ ಗೌಡ ಪೊಲೀಸ್​ ವಶಕ್ಕೆ.. ಸದ್ಯ ಎಲ್ಲಿದ್ದಾರೆ ಗೊತ್ತಾ?

author-image
AS Harshith
Updated On
ಕಾಟೇರನಿಗೆ ‘ಪವಿತ್ರಾ’ ಕಂಟಕ ಇದೇ ಮೊದಲಲ್ಲ.. ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದೇಕೆ? ಅಸಲಿ ಕಾರಣವೇನು?
Advertisment
  • ನಟಿ ಪವಿತ್ರಾ ಗೌಡಗೂ ಈ ಕೊಲೆಗೂ ಏನು ಸಂಬಂಧ
  • ರೇಣುಕಾಸ್ವಾಮಿ ಎಂಬ ಯುವಕನನ್ನು ಕೊಲೆ ಮಾಡಿದ್ಯಾಕೆ?
  • ಕೊಲೆಯಾದ ರೇಣುಕಾಸ್ವಾಮಿ ಪತ್ನಿ 3 ತಿಂಗಳ ಗರ್ಭಿಣಿ

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅರೆಸ್ಟ್​ ಆಗಿದ್ದಾರೆ. ರೇಣುಕಾಸ್ವಾಮಿ ಎಂಬ ಯುಕನನ್ನು ಹಲ್ಲೆ ಮಾಡಿ ಕೊಲೆ ಮಾಡಿದ ಆರೋಪ ಅವರ ಮೇಲೆ ಕೇಳಿಬಂದಿದೆ. ಇದೀಗ ನಟನನ್ನು ಅರೆಸ್ಟ್​ ಮಾಡಿದ ಬೆನ್ನಲ್ಲೇ ನಟಿ ಪವಿತ್ರಾ ಗೌಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

Advertisment

ನಟ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರಿಗೂ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ರೇಣುಕಾಸ್ವಾಮಿ ಎಂಬ ಯುವಕನನ್ನು ಕೊಲೆ ಮಾಡಿ ಮೋರಿಗೆ ಎಸೆದ ಆರೋಪದ ಮೇರೆಗೆ ವಶಕ್ಕೆ ಪಡೆದಿದ್ದಾರೆ.

publive-image

ರೇಣುಕಾ ಸ್ವಾಮಿ ಕೊಲೆಯಾಗಿದ್ದೇಕೆ?

ನಟಿ ಪವಿತ್ರಾ ಗೌಡಗೆ ಮೆಸೇಜ್​ ಮಾಡಿರುವ ಆರೋಪದ ಮೇಲೆಗೆ ರೇಣುಕಾಸ್ವಾಮಿ ಎಂಬ ಯುವಕನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೊಲೆಯಾದ ಯುವಕ ಚಿತ್ರದುರ್ಗ ಮೂಲದವನಾಗಿದ್ದು, ಚಿತ್ರದುರ್ಗದ ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದನು. ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡ್ತಿದ್ದ ರೇಣುಕಾ ಸ್ವಾಮಿಯನ್ನು ಕರೆಸಿಕೊಂಡು ಹಲ್ಲೆ ಮಾಡಿದ್ದರು. ಬಳಿಕ ಹಲ್ಲೆಯ ಏಟಿಗೆ ಗಂಭೀರ ಗಾಯಗೊಂಡಿದ್ದ ಯುವಕ ರೇಣುಕಾ ಸ್ವಾಮಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ದರ್ಶನ್​ ಏಟಿಗೆ ಕೊಲೆಯಾದ ರೇಣುಕಾಸ್ವಾಮಿ ಯಾರು? ಇಲ್ಲಿದೆ ಇಂಚಿಂಚು ಮಾಹಿತಿ

Advertisment

publive-image

ಕೊಲೆ ಮಾಡಿ ಬಾಡಿ ಶಿಫ್ಟ್​ 

ದರ್ಶನ್ ಜಾಗದಲ್ಲಿ ಕೊಲೆ ಮಾಡಿ ಯುವಕನ ಬಾಡಿ ಶಿಫ್ಟ್ ಮಾಡಲಾಗಿದೆ. ಬಳಿಕ ಕಾಮಾಕ್ಷಿಪಾಳ್ಯ ಲಿಮಿಟ್ಸ್ ಗೆ ಬಾಡಿ ರವಾನಿಸಲಾಗಿದೆ. ದರ್ಶನ್ ಬೌನ್ಸರ್ಸ್ ಕಾಮಾಕ್ಷಿಪಾಳ್ಯದಲ್ಲಿರುವ ಯುವಕನ ರೂಂ ಕಡೆಗೆ ಬಾಡಿ ಬಿಸಾಡಿದ್ದಾರೆ.

ಇದನ್ನೂ ಓದಿ: ದರ್ಶನ್​ ಹಲ್ಲೆ ಮಾಡಿದ ಯುವಕನ ಶವ ಮೋರಿಯಲ್ಲಿ ಸಿಕ್ತು.. ಸಿಸಿಟಿವಿಯಲ್ಲಿ ದೃಶ್ಯದಲ್ಲಿ ಏನಿತ್ತು?

ರೇಣುಕಾಸ್ವಾಮಿ ಬಾಡಿ ಸಿಕ್ಕಿದ್ದೆಲ್ಲಿ?

ಸತ್ವ ಅನುಗ್ರಹ ಅಪಾರ್ಟ್ ಮೆಂಟ್ ನ ಮುಂಭಾಗದಲ್ಲಿರುವ ಮೋರಿಯಲ್ಲಿ ರೇಣುಕಾಸ್ವಾಮಿ ಶವ ಪತ್ತೆಯಾಗಿದೆ. ಅಪರಿಚಿತ ಶವ ಪತ್ತೆ ಸಂಬಂಧ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗಾರ್ಡ್ ದೂರು ನೀಡಿದ್ದರು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment