/newsfirstlive-kannada/media/post_attachments/wp-content/uploads/2024/06/Renuka-prasad.jpg)
ರೇಣುಕಾಸ್ವಾಮಿ ಕೊಲೆಗೆ ಹಂತಕರು ಸಾಕಷ್ಟು ಪ್ಲಾನ್​ ಮಾಡಿದ್ದು, ಸದ್ಯ ಒಂದರ ಮೇಲೆ ಒಂದರಂತೆ ಸಾಕ್ಷಿಗಳು ಸಿಗುತ್ತಿವೆ. ಅದರಲ್ಲಿ ರೇಣುಕಾಸ್ವಾಮಿ ಧರಿಸುವ ಬಟ್ಟೆಯನ್ನು ಕೂಡ ಹಂತಕರು ಬದಲಾಯಿಸಿದ್ದಾರೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ದರ್ಶನ್​ ಆ್ಯಂಡ್​ ಟೀಂ ಕೊಲೆಗೂ ಮುಂಚೆ ಮತ್ತು ನಂತರ ಸಾಕಷ್ಟು ಪ್ಲಾನ್​ ಮಾಡಿಕೊಂಡಿದ್ದಾರೆ. ಕೊಲೆಯನ್ನು ಮುಚ್ಚಿಹಾಕಲು ಯೋಜನೆ ಹಾಕಿಕೊಂಡಿದ್ದರು. ಆದರೆ ಪೊಲೀಸರು ಮಾತ್ರ ಹಂತಕರ ದಾರಿ ಸೆರೆ ಹಿಡಿದಿದ್ದಾರೆ. ಇಂಚಿಂಚು ಮಾಹಿತಿಯನ್ನು ಹೊರತೆಗೆದಿದ್ದಾರೆ.
ರೇಣುಕಾಸ್ವಾಮಿ ಅವರು ಮನೆಯಿಂದ ಹೊರಡುವಾಗ ಕ್ರೀಂ ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಆದರೆ ಸುಮನಹಳ್ಳಿ ಬಳಿಯ ಮೋರಿಯಲ್ಲಿ ರೇಣುಕಾಸ್ವಾಮಿ ಮೃತದೇಹ ಸಿಕ್ಕಾಗ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿರೋದು ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿ ಪತ್ನಿ ಕೂಡ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಕೊಲೆಗಡುಕರು ರೇಣುಕಾಸ್ವಾಮಿ ಕೊಲೆಯ ಬಳಿಕವು ಪ್ಲಾನ್​ ಮಾಡಿರೋದು ಗೊತ್ತಾಗಿದೆ.
ಇದಲ್ಲದೆ ರೇಣುಕಾಸ್ವಾಮಿ ಮೃತದೇಹವನ್ನು ಯಾವ ಸಿಸಿಟಿವಿಗೂ ತಿಳಿಯದಂತೆ ಸುಮನಹಳ್ಳಿ ಮೋರಿ ಬಳಿ ತಂದು ಬಿಸಾಕಿದ್ದಾರೆ. ಇನ್ನು ಈ ಕೊಲೆಯನ್ನು ಮುಚ್ಚಾಕಲು ದರ್ಶನ್​ 30 ಲಕ್ಷ ರೂಪಾಯಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಪ್ರತಿಯೊಬ್ಬರಿಗೂ ತಲಾ 5 ಲಕ್ಷದಂತೆ ನೀಡಿದ್ದಾರೆ. ಈ ವಿಚಾರವನ್ನು ಆರೋಪಿಗಳು ತನಿಖೆ ವೇಳೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಇವಿಷ್ಟು ಮಾತ್ರವಲ್ಲದೆ, ರೇಣುಕಾಸ್ವಾಮಿ ಮೃತದೇಹ ಸಿಕ್ಕ ಬಳಿಕ ಹಂತಕರು ಪೊಲೀಸ್​ ಠಾಣೆಗೆ ಬಂದು ತಾವೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಣದ ವಿಚಾರವಾಗಿ ಕೊಲೆ ಮಾಡಿರುವುದಾಗಿ ಸುಳ್ಳು ಹೇಳಿದ್ದಾರೆ. ಬಳಿಕ ಹಂತಕರ ಮೊಬೈಲ್​ ಟ್ರೇಸ್​ ಮಾಡಿದಾಗ ನಟ ದರ್ಶನ್​ ಜೊತೆಗೆ ಕರೆ ಮಾಡಿರೋದು ಗೊತ್ತಾಗಿದೆ. ಬಳಿಕ ತನಿಖೆ ಚುರುಕುಗೊಂಡಿದ್ದು, ನಟನ್ನು ಅರೆಸ್ಟ್​ ಮಾಡಲಾಗಿದೆ. ಬಳಿಕ ಹಂತ ಹಂತವಾಗಿ ಈ ಕೊಲೆಯ ಹಿಂದಿರುವ ಕೈಗಳನ್ನು ಅರೆಸ್ಟ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ