newsfirstkannada.com

ಕೊಲೆ ಬಳಿಕ ರೇಣುಕಾಸ್ವಾಮಿ ಶರ್ಟ್​ ಬದಲಾಯಿಸಿದ ಹಂತಕರು.. ಇವ್ರು ಮಾಡಿರೋ ಪ್ಲಾನ್​ ಒಂದೆರಡಲ್ಲ!

Share :

Published June 13, 2024 at 12:56pm

    ರೇಣುಕಾಸ್ವಾಮಿ ಕೊಲೆ ಮುಚ್ಚಿ ಹಾಕಲು ಪ್ಲಾನ್​ ಮೇಲೆ ಪ್ಲಾನ್​

    ತನಿಖೆ ವೇಳೆ ಸಿಗುತ್ತಿದೆ ಕೊಲೆಗಾರರ ಹಂತ ಹಂತದ ಮಾಹಿತಿ

    ಕಿಡ್ನಾಪ್​, ಹಲ್ಲೆ, ಕೊಲೆ.. ತಂದೆಯಾಗುವ ಖುಷಿಯಲ್ಲಿದ್ದ ರೇಣುಕಾಸ್ವಾಮಿ

ರೇಣುಕಾಸ್ವಾಮಿ ಕೊಲೆಗೆ ಹಂತಕರು ಸಾಕಷ್ಟು ಪ್ಲಾನ್​ ಮಾಡಿದ್ದು, ಸದ್ಯ ಒಂದರ ಮೇಲೆ ಒಂದರಂತೆ ಸಾಕ್ಷಿಗಳು ಸಿಗುತ್ತಿವೆ. ಅದರಲ್ಲಿ ರೇಣುಕಾಸ್ವಾಮಿ ಧರಿಸುವ ಬಟ್ಟೆಯನ್ನು ಕೂಡ ಹಂತಕರು ಬದಲಾಯಿಸಿದ್ದಾರೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ದರ್ಶನ್​ ಆ್ಯಂಡ್​ ಟೀಂ ಕೊಲೆಗೂ ಮುಂಚೆ ಮತ್ತು ನಂತರ ಸಾಕಷ್ಟು ಪ್ಲಾನ್​ ಮಾಡಿಕೊಂಡಿದ್ದಾರೆ. ಕೊಲೆಯನ್ನು ಮುಚ್ಚಿಹಾಕಲು ಯೋಜನೆ ಹಾಕಿಕೊಂಡಿದ್ದರು. ಆದರೆ ಪೊಲೀಸರು ಮಾತ್ರ ಹಂತಕರ ದಾರಿ ಸೆರೆ ಹಿಡಿದಿದ್ದಾರೆ. ಇಂಚಿಂಚು ಮಾಹಿತಿಯನ್ನು ಹೊರತೆಗೆದಿದ್ದಾರೆ.

ಇದನ್ನೂ ಓದಿ: ಕಿಡ್ನಾಪ್​ಗೂ ಮುನ್ನ ದರ್ಶನ್​ ಆ್ಯಕ್ಸಿಡೆಂಟ್​ ಮಾಡಿಸಿದ್ರಾ​? ರೇಣುಕಾಸ್ವಾಮಿ ಸ್ಕೂಟರ್​ ಡ್ಯಾಮೇಜ್​!

ರೇಣುಕಾಸ್ವಾಮಿ ಅವರು ಮನೆಯಿಂದ ಹೊರಡುವಾಗ ಕ್ರೀಂ ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಆದರೆ ಸುಮನಹಳ್ಳಿ ಬಳಿಯ ಮೋರಿಯಲ್ಲಿ ರೇಣುಕಾಸ್ವಾಮಿ ಮೃತದೇಹ ಸಿಕ್ಕಾಗ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿರೋದು ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿ ಪತ್ನಿ ಕೂಡ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಕೊಲೆಗಡುಕರು ರೇಣುಕಾಸ್ವಾಮಿ ಕೊಲೆಯ ಬಳಿಕವು ಪ್ಲಾನ್​ ಮಾಡಿರೋದು ಗೊತ್ತಾಗಿದೆ.

ಇದನ್ನೂ ಓದಿ: ವಿಚಾರಣೆ ವೇಳೆ ದರ್ಶನ್​ ಹೇಳೋದು ಒಂದೇ ಮಾತು.. ಪಶ್ಚಾತ್ತಾಪ ಪಡ್ತಿದ್ದಾರಾ ಚಾಲೆಂಜಿಂಗ್​ ಸ್ಟಾರ್​

ಇದಲ್ಲದೆ ರೇಣುಕಾಸ್ವಾಮಿ ಮೃತದೇಹವನ್ನು ಯಾವ ಸಿಸಿಟಿವಿಗೂ ತಿಳಿಯದಂತೆ ಸುಮನಹಳ್ಳಿ ಮೋರಿ ಬಳಿ ತಂದು ಬಿಸಾಕಿದ್ದಾರೆ. ಇನ್ನು ಈ ಕೊಲೆಯನ್ನು ಮುಚ್ಚಾಕಲು ದರ್ಶನ್​ 30 ಲಕ್ಷ ರೂಪಾಯಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಪ್ರತಿಯೊಬ್ಬರಿಗೂ ತಲಾ 5 ಲಕ್ಷದಂತೆ ನೀಡಿದ್ದಾರೆ. ಈ ವಿಚಾರವನ್ನು ಆರೋಪಿಗಳು ತನಿಖೆ ವೇಳೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್​ ಜೊತೆಗೆ ಮತ್ತೊರ್ವ ನಟ ಅರೆಸ್ಟ್​.. ರೇಣುಕಾಸ್ವಾಮಿ ಹತ್ಯೆಯಲ್ಲಿ ಈತನ ಕೈವಾಡವೇನಿತ್ತು?

ಇವಿಷ್ಟು ಮಾತ್ರವಲ್ಲದೆ, ರೇಣುಕಾಸ್ವಾಮಿ ಮೃತದೇಹ ಸಿಕ್ಕ ಬಳಿಕ  ಹಂತಕರು ಪೊಲೀಸ್​ ಠಾಣೆಗೆ ಬಂದು ತಾವೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಣದ ವಿಚಾರವಾಗಿ ಕೊಲೆ ಮಾಡಿರುವುದಾಗಿ ಸುಳ್ಳು ಹೇಳಿದ್ದಾರೆ. ಬಳಿಕ ಹಂತಕರ ಮೊಬೈಲ್​ ಟ್ರೇಸ್​ ಮಾಡಿದಾಗ ನಟ ದರ್ಶನ್​ ಜೊತೆಗೆ ಕರೆ ಮಾಡಿರೋದು ಗೊತ್ತಾಗಿದೆ. ಬಳಿಕ ತನಿಖೆ ಚುರುಕುಗೊಂಡಿದ್ದು, ನಟನ್ನು ಅರೆಸ್ಟ್​ ಮಾಡಲಾಗಿದೆ. ಬಳಿಕ ಹಂತ ಹಂತವಾಗಿ ಈ ಕೊಲೆಯ ಹಿಂದಿರುವ ಕೈಗಳನ್ನು ಅರೆಸ್ಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಬಳಿಕ ರೇಣುಕಾಸ್ವಾಮಿ ಶರ್ಟ್​ ಬದಲಾಯಿಸಿದ ಹಂತಕರು.. ಇವ್ರು ಮಾಡಿರೋ ಪ್ಲಾನ್​ ಒಂದೆರಡಲ್ಲ!

https://newsfirstlive.com/wp-content/uploads/2024/06/Renuka-prasad.jpg

Load More