/newsfirstlive-kannada/media/post_attachments/wp-content/uploads/2024/09/SCHOOL-1-1.jpg)
ಬೆಂಗಳೂರು: ಶಾಲಾ ಮಕ್ಕಳು ತುಂಬಾ ದಿನಗಳಿಂದ ಕಾಯುತ್ತಿದ್ದ ಕಾತುರಕ್ಕೆ ತೆರೆ ಬಿದ್ದಿದೆ. ಕೊನೆಗೂ ಶಿಕ್ಷಣ ಇಲಾಖೆ ದಸರಾ ರಜೆಯ ದಿನಾಂಕವನ್ನು ಘೋಷಣೆ ಮಾಡಿದೆ.
ಅಕ್ಟೋಬರ್ 3 ರಿಂದ 20ರವರೆಗೆ ದಸರಾ ರಜೆ ಇರಲಿದೆ. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಈ ರಜೆ ಅನ್ವಯ ಆಗಲಿದೆ. ಅದೂ ಕೂಡ ರಾಜ್ಯ ಪಠ್ಯಕ್ರಮ ಹೊಂದಿರುವ ಶಾಲೆಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಈ ಬಾರಿ ಅಕ್ಟೋಬರ್ 3 ರಂದು ದಸರಾ ಆರಂಭವಾಗಲಿದೆ. ಅಕ್ಟೋಬರ್ 12 ರಂದು ವಿಜಯದಶಮಿ ಆಚರಣೆ ಮೂಲಕ ಅಂತ್ಯಗೊಳ್ಳಲಿದೆ. ಶಾಲಾ ಮಕ್ಕಳಿಗೆ ಒಟ್ಟು 17 ದಿನಗಳ ಕಾಲ ರಜೆ ಸಿಗಲಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಆಚರಣೆ ನಡೆಯಲಿದೆ.
ಇದನ್ನು ಓದಿ: ಕಾಯುವಿಕೆ ಮುಗೀತು..! BIGG BOSS ಥೀಮ್ ರಿವೀಲ್.. ಉತ್ಸಾಹ ಇಮ್ಮಡಿಗೊಳಿಸಿದ ಪ್ರೋಮೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ