ಕಲರ್ಸ್‌ನ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್
ಪ್ರೀಮಿಯರ್ ದಿನಾಂಕ ಮತ್ತು ಸಮಯ ತಿಳಿಸಿದ ಬಿಗ್‌ಬಾಸ್
ಬಿಗ್‌ಬಾಸ್ ಮೇಲಿನ ಉತ್ಸಾಹ ಇಮ್ಮಡಿಗೊಳಿಸಿದ ಪ್ರೋಮೋ
ಕಲರ್ಸ್‌ನ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ 18’ ಗಾಗಿ ಅಭಿಮಾನಿಗಳು ತುಂಬಾ ದಿನಗಳಿಂದ ಕಾಯ್ತಿದ್ದರು. ಆ ಕಾಯುವಿಕೆ ಮುಗಿದಿದ್ದು, ಸಲ್ಮಾನ್ ಖಾನ್ ದಿನಾಂಕವನ್ನು ಘೋಷಿಸಿದ್ದಾರೆ. ಅಕ್ಟೋಬರ್ 6 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ‘ಬಿಗ್ ಬಾಸ್ 18’ ವೀಕ್ಷಿಸಲು ಸಿದ್ಧರಾಗಿ ಎಂದು ತಿಳಿಸಿದ್ದಾರೆ.
‘ಬಿಗ್ ಬಾಸ್ OTT 3’ ಮುಗಿದ ನಂತರ ಅಭಿಮಾನಿಗಳು ‘ಬಿಗ್ ಬಾಸ್ 18’ ಗಾಗಿ ಕಾಯ್ತಿದ್ದರು. ಸ್ವಲ್ಪ ಸಮಯದ ಹಿಂದೆ ಪ್ರೋಮೋ ಬಂದಿತ್ತು. ಆದರೆ ದಿನಾಂಕ ಘೋಷಣೆ ಮಾಡಿರಲಿಲ್ಲ. ‘ಬಿಗ್ ಬಾಸ್ 18’ ರ ಗ್ರ್ಯಾಂಡ್ ಪ್ರೀಮಿಯರ್ ಅಕ್ಟೋಬರ್ 6 ರಂದು ನಡೆಯಲಿದೆ. ಅಂದೇ ಸ್ಪರ್ಧಿಗಳನ್ನು ಅಂತಿಮ ಹೆಸರನ್ನು ಬಹಿರಂಗ ಮಾಡಲಾಗ್ತದೆ.
ಇದನ್ನೂ ಓದಿ:BBK11: ವೀಕ್ಷಕರಿಗೆ ಗುಡ್‌ನ್ಯೂಸ್; ಇಂದು ಬಿಗ್ ಅಪ್ಡೇಟ್ ಹೊತ್ತು ತರ್ತಿದೆ ಬಿಗ್‌ಬಾಸ್ ತಂಡ.. ಏನದು?
ಕಲರ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೋಮೋ ಹಂಚಿಕೊಳ್ಳಲಾಗಿದೆ. ಅದರ ಶೀರ್ಷಿಕೆ ಹೀಗಿದೆ, ‘ಈ ಬಾರಿ ಮನೆಯಲ್ಲಿ ಭೂಕಂಪ ಆಗಲಿದೆ. ಏಕೆಂದರೆ ಬಿಗ್‌ಬಾಸ್‌ನಲ್ಲಿ ಸಮಯದ ಉತ್ಸಾಹ ಇರುತ್ತದೆ. ಅಕ್ಟೋಬರ್ 6 ರಂದು ರಾತ್ರಿ 9 ಗಂಟೆಗೆ ‘ಬಿಗ್ ಬಾಸ್ 18’ ಗ್ರ್ಯಾಂಡ್ ಪ್ರೀಮಿಯರ್ ಅನ್ನು ಕಲರ್ಸ್ ಮತ್ತು ಜಿಯೋದಲ್ಲಿ ಮಾತ್ರ ವೀಕ್ಷಿಸಿ.
ಇನ್ನು ವೀಡಿಯೊದಲ್ಲಿ ಸಲ್ಮಾನ್ ಖಾನ್ ‘ಬಿಗ್ ಬಾಸ್ 18’ ಥೀಮ್ ಹೇಳಿದ್ದಾರೆ. ಈ ಬಾರಿಯ ಥೀಮ್‌ನ ಹೆಸರು ‘ಟೈಮ್ ಕಾ ತಾಂಡವ್’ ಮತ್ತು ಇಡೀ ಸೀಸನ್ ಇದನ್ನು ಆಧರಿಸಿದೆ. ಪ್ರತಿ ವರ್ಷ ಬಿಗ್ ಬಾಸ್ ಥೀಮ್ ಬದಲಾಗುತ್ತದೆ, ಅದರಂತೆ ಈ ಬಾರಿಯೂ ಅದಾಗುತ್ತಿದೆ. ಸೀಸನ್ 18 ಆಗಿದ್ದರೆ, ಸ್ಪರ್ಧಿಗಳಿಗೂ 18 ವರ್ಷ ವಯಸ್ಸಾಗಿರುತ್ತದೆ ಎಂದಿದ್ದಾರೆ.
ಯಾರೆಲ್ಲ ಸ್ಪರ್ಧಿಗಳು..?
ಬಿಗ್ ಬಾಸ್ ಮನೆಗೆ ಯಾರೆಲ್ಲ ಎಂಟ್ರಿ ನೀಡ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಕರಣ್ವೀರ್ ಮೆಹ್ರಾ, ಶೆಹಜಾದಾ ಧಾಮಿ, ಚಾಹತ್ ಪಾಂಡೆ, ಶೋಯೆಬ್ ಇಬ್ರಾಹಿಂ, ಧೀರಜ್ ಕಪೂರ್ ಮತ್ತು ನಿಯಾ ಶರ್ಮಾ ಅವರಂತಹ ಟಿವಿ ತಾರೆಗಳು ಹೋಗ್ತಿದ್ದಾರೆ ಎಂಬ ವದಂತಿ ಇದೆ.
ಇದನ್ನೂ ಓದಿ:ಬಿಗ್‌ಬಾಸ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಹೊಸ ಅಧ್ಯಾಯದ ಬಿಗ್ ಸೀಕ್ರೆಟ್ ರಿವೀಲ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ