/newsfirstlive-kannada/media/post_attachments/wp-content/uploads/2024/09/Elon-musk.jpg)
ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆಗೆ ಟೆಕ್ ಬಿಲಿಯನೇರ್ ಎಲಾನ್ ಮಸ್ಕ್ ಫೋಟೋ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದೀಗ ಇಬ್ಬರು ಒಟ್ಟಿಗೆ ಇರುವ ಫೋಟೋ ಡೇಟಿಂಗ್ ನಡೆಸುತ್ತಿದ್ದಾರಾ? ಎಂಬ ಅನುಮಾನಗಳು ಹುಟ್ಟಿಹಾಕಿದೆ.
ಜಾರ್ಜಿಯಾ ಮೆಲೋನಿಯವರು ಅಟ್ಲಾಂಟಿಕ್ ಕೌನ್ಸಿಲ್ ಗ್ಲೋಬಲ್ ಸಿಟಿಜನ್ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಕಾರ್ಯಕ್ರಮದಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೂಡ ಭಾಗವಹಿಸಿದ್ದರು. ಬಳಿ ಮೆಲೋನಿಯವರಿಗೆ ಎಲಾನ್ ಮಸ್ಕ್ ತಮ್ಮ ಕೈಯಾರೆ ಪ್ರಶಸ್ತಿ ನೀಡಿದರು. ಈ ವೇಳೆ ಟೆಸ್ಲಾ ಸಿಇಒ ಇಟಾಲಿಯನ್ ಪ್ರಧಾನಿಯನ್ನು ‘‘ಪ್ರಮಾಣಿಕ ಮತ್ತು ಸತ್ಯವಂತೆ’’ ಎಂದು ಕರೆದರು.
ಇದನ್ನೂ ಓದಿ: ಮಹಾಯುದ್ಧದ ಕಾರ್ಮೋಡ; ರಷ್ಯಾ- ಉಕ್ರೇನ್ ಘರ್ಷಣೆ ಮತ್ತೆ ಆರಂಭ.. ನ್ಯೂಕ್ಲಿಯರ್- ಕ್ಷಿಪಣಿ ದಾಳಿಗೆ ಪ್ಲಾನ್?
ಮಾತ್ರವಲ್ಲದೆ, ‘ಮೆಲೋನಿ ಆಂತರ್ಯಕ್ಕಿಂತ ಬಾಹ್ಯವಾಗಿ ತುಂಬಾ ಸುಂದರವಾಗಿದ್ದಾರೆ. ಈ ಪ್ರಶಸ್ತಿಯನ್ನು ನೀಡುವುದು ಗೌರವವಾಗಿದೆ’ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಬಳಿಕ ‘ಜಾರ್ಜಿಯಾ ಮೆಲೋನಿ ನಾನು ಮೆಚ್ಚುವ ವ್ಯಕ್ತಿ. ಅವರು ಇಟಾಲಿಯನ್ ಪ್ರಧಾನಿಯಾಗಿ ನಂಬಲಾಗದ ಕೆಲಸ ಮಾಡಿದ್ದಾರೆ.
Grazie Elon pic.twitter.com/NgHchWLUtB
— Giorgia Meloni (@GiorgiaMeloni)
Grazie Elon pic.twitter.com/NgHchWLUtB
— Giorgia Meloni (@GiorgiaMeloni) September 24, 2024
">September 24, 2024
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ.. ಕುತೂಹಲ ಮೂಡಿಸಿದೆ ಇಂದಿನ ಚರ್ಚೆ
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಎಲಾನ್ ಮಸ್ಕ್ ಮತ್ತು ಜಾರ್ಜಿಯಾ ಮೆಲೋನಿ ಫೋಟೋಗಳು ಹರಿದಾಡುತ್ತೊವೆ. ಒಟ್ಟಿಗೆ ಕುಳಿತು ಡಿನ್ನರ್ ಮಾಡುತ್ತಿರುವುದು, ಪ್ರಶಸ್ತಿ ಪಡೆಯುವ ವೇಳೆ ಎಲಾನ್ ಮಸ್ಕ್ ಅವರನ್ನು ಮೆಲೋನಿ ನೋಡುತ್ತಿರುವ ದೃಶ್ಯ ವೈರಲ್ ಆಗಿದೆ.
Do you think They’ll date? ? pic.twitter.com/XXs1U45kjb
— Tesla Owners Silicon Valley (@teslaownersSV)
Do you think They’ll date? 🤣 pic.twitter.com/XXs1U45kjb
— Tesla Owners Silicon Valley (@teslaownersSV) September 24, 2024
">September 24, 2024
ಇನ್ನು ವೈರಲ್ ಆದ ಫೋಟೋ ಟೆಸ್ಲಾ ಓನರ್ಸ್ ಸಿಲಿಕಾನ್ ವ್ಯಾಲಿ ಎಂಬ ಎಕ್ಸ್ (ಟ್ವಿಟ್ಟರ್) ಖಾತೆ ಇವರಿಬ್ಬರು ಡೇಟ್ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದೆ. ಅದಕ್ಕೆ ಎಲಾನ್ ಮಸ್ಕ್ ‘ಡೇಟಿಂಗ್ ಮಾಡುತ್ತಿಲ್ಲ’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ