ಮುಡಾ ಪ್ರಕರಣದ ಸಿಲುಕಿರುವ ಸಿಎಂ ಸಿದ್ದರಾಮಯ್ಯ
ಇಂದು ಕರೆಯಲಾದ ರಾಜ್ಯ ಸಚಿವ ಸಂಪುಟ ಸಭೆ
ಏನೆಲ್ಲಾ ಚರ್ಚೆ ನಡೆಯಲಿಕ್ಕಿದೆ? ಇಲ್ಲಿದೆ ಮಾಹಿತಿ
ಮುಡಾ ಪ್ರಕರಣದ ಕುರಿತು ಸಿಎಂ ಸಿದ್ದರಾಮಯ್ಯ ವಿರುದ್ಧ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆ ಒಂದೆಡೆಯಾದರೆ. ಇತ್ತ ರಾಜ್ಯ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಮಧ್ಯಾಹ್ನ 12.30ಕ್ಕೆ ಮಹತ್ವದ ಸಂಪುಟ ಸಭೆ ನಡೆಯಲಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಸಂಪುಟ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಸಿಎಂ ವಿರುದ್ಧದ ಹೈಕೋರ್ಟ್ ತೀರ್ಪಿನ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಸಾಧ್ಯತೆಯಿದೆ. ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಹೇಳಿರುವ ಕುರಿತು ಸಮಾಲೋಚನೆ ನಡೆಯಲಿಕ್ಕಿದೆ ಎನ್ನಲಾಗುತ್ತಿದೆ.
ರಾಜ್ಯಪಾಲರ ವಿರುದ್ಧ ಕ್ಯಾಬಿನೆಟ್ನಲ್ಲಿ ಕೈಗೊಂಡಿದ್ದ ನಿರ್ಣಯವನ್ನು ಹೈಕೋರ್ಟ್ ಮಾನ್ಯಮಾಡದ ವಿಚಾರದ ಬಗ್ಗೆ ಚರ್ಚೆ ಮತ್ತು ಮುಂದಿನ ಕಾನೂನು ಹೋರಾಟ, ಪ್ರಕರಣದಲ್ಲಾದ ಬೆಳವಣಿಗೆ, ಹೈಕಮಾಂಡ್ ಮಟ್ಟದಲ್ಲಿ ನಡೆದ ಮಾತುಕತೆ ಕುರಿತು ಸಹ ಸಿಎಂ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಮುಡಾ ಕೇಸ್; ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವ್ಯಾವ IPC ಸೆಕ್ಷನ್ ಏನ್ ಹೇಳುತ್ತೆ?
ಇದರ ಜೊತೆಗೆ ಅರ್ಕಾವತಿ ಪ್ರಕರಣದ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿಕ್ಕಿದೆ ಎನ್ನಲಾಗುತ್ತಿದೆ. ನ್ಯಾ.ಕೆಂಪಣ್ಣ ಆಯೋಗ ಕೊಟ್ಟಿರುವ ವರದಿ ಕುರಿತು ಸಚಿವರು ಚರ್ಚೆ ನಡೆಸಬಹುದಾಗಿದೆ. ಜೊತೆಗೆ ರಾಜ್ಯಪಾಲರ ಪತ್ರಕ್ಕೆ ಸ್ಪಷ್ಟನೆ ಕೊಡುವ ಕುರಿತು ನಿರ್ಣಯ ಮಾಡಲಿರುವ ಸಂಪುಟ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಮಹಾಲಕ್ಷ್ಮಿಯನ್ನು ಕೊಂ*ದು 1,405km ಸಂಚರಿಸಿದ.. ಸ್ಮಶಾನದ ಬಳಿಯೇ ನೇಣಿಗೆ ಶರಣಾದ ಕಿಲ್ಲ*ರ್
ಇತ್ತೀಚೆಗೆ ರಾಜ್ಯಪಾಲರು ಸರ್ಕಾರದ ವಿರುದ್ಧ ನಿರಂತರ ಪತ್ರ ಬರೆಯುತ್ತಿರುವ ವಿಚಾರ, ಸರ್ಕಾರದ ನಿಲುವು ಮತ್ತು ನಿರ್ಧಾರಗಳ ಬಗ್ಗೆ ಸಚಿವರ ಜೊತೆ ಸಿಎಂ ಸಮಾಲೋಚನೆ ನಡೆಸಿದ್ದಾರೆ. ಜೊತೆಗೆ ಮುಡಾ ಪ್ರಕರಣ ಸಂಬಂಧ ಹೈಕೋರ್ಟ್, ಸೆಷನ್ಸ್ ಕೋರ್ಟ್ ತೀರ್ಪು ಕುರಿತೂ ಚರ್ಚೆ ನಡೆಯುವ ಸಾಧ್ಯತೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ