ಮುಡಾ ಕೇಸ್ ತನಿಖೆಗೆ ಆದೇಶ ನೀಡಿರುವ ಎರಡು ಕೋರ್ಟ್
ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಾಗುತ್ತಾ..?
IPC 351- ಪ್ರಕಾರ ದಾಳಿ ಮಾಡುವ ಮತ್ತು ಭಯ ಹುಟ್ಟಿಸುವುದು
ಮುಡಾ ಭೂ ಸುಳಿಯಲ್ಲಿ ಸಿಲುಕಿರುವ ಸಿಎಂ ವಿರುದ್ಧ ತನಿಖೆಗೆ ಹೈಕೋರ್ಟ್, ಜನಪ್ರತಿನಿಧಿಗಳ ಕೋರ್ಟ್ ಅಸ್ತು ಎಂದಿದೆ. 3 ತಿಂಗಳೊಳಗೆ ತನಿಖೆ ನಡೆಸಿ, ವರದಿ ನೀಡುವಂತೆ ಮೈಸೂರು ಲೋಕಾಯುಕ್ತರಿಗೆ ಕೋರ್ಟ್ ಸೂಚನೆ ನೀಡಿದೆ. ಕ್ರಿಮಿನಲ್ ಕೇಸ್ ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಕೇಸ್ ದಾಖಲಿಸುವಂತೆ ಆದೇಶಿಸಿದೆ. ಇವತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ಆಗುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಹೆಗಲೇರಿದ್ದ ಮುಡಾ ಅಕ್ರಮದ ಭೂತ ಈಗ ನೆತ್ತಿ ಮೇಲೆ ಕೂತಿದೆ. ಯಾವಾಗ ಏನಾಗುತ್ತೋ ಎಂಬ ಟೆನ್ಶನ್ ಸಿಎಂಗೆ ಕಾಡುತ್ತಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶ ನೀಡಿದೆ. ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಿ, ಮುಂದಿನ 3 ತಿಂಗಳಲ್ಲಿ ತನಿಖಾ ವರದಿ ನೀಡಲು ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಮೈಸೂರು ಲೋಕಾಯುಕ್ತದತ್ತ ಇಡೀ ರಾಜ್ಯದ ಚಿತ್ತವೇ ಹರಿದಿದೆ.
ಇದನ್ನೂ ಓದಿ: DCM ಡಿ.ಕೆ ಶಿವಕುಮಾರ್ ರಾತ್ರಿ 2 ಗಂಟೆವರೆಗೆ ಸಿಲಿಕಾನ್ ಸಿಟಿ ರೌಂಡ್ಸ್.. ಕಾರಣವೇನು?
ಮುಡಾ ಕೇಸ್‌ನಲ್ಲಿ ಸಿಎಂಗೆ ಬಿಗ್ ಶಾಕ್ ನೀಡಿರುವ ಕೋರ್ಟ್, IPC 120B, 166, 403, 406, 420, 426, 465, 468, 340, 351, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಸೆಕ್ಷನ್ 9 ಮತ್ತು 13ರ ಅಡಿ, ಬೇನಾಮಿ ಆಸ್ತಿ ನಿಷೇಧ ಕಾಯ್ದೆಯಡಿ ಸೆಕ್ಷನ್ 53 & 54, ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಸೆಕ್ಷನ್ 3, 4ರ ಅಡಿ ಕೇಸ್ ದಾಖಲಿಸಲು ಸೂಚಿಸಿದೆ. ಹಾಗಾದ್ರೆ ಯಾವ ಸೆಕ್ಷನ್ ಏನು ಹೇಳುತ್ತೆ ಅನ್ನೋದನ್ನ ನೋಡೋದಾದ್ರೆ..
ಸಿಎಂ ವಿರುದ್ಧದ ಸೆಕ್ಷನ್ಗಳು!
ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯನವರೇ ಎ1
ಕೋರ್ಟ್ ಆದೇಶದಿಂದ ಮುಡಾಫ್ನಲ್ಲಿರುವ ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಟೆನ್ಷನ್ ಹೆಚ್ಚಾಗಿದೆ. ಕೋರ್ಟ್ ಪರಿಗಣಿಸಿರುವ ಅಂಶಗಳ ಪ್ರಕಾರ ಈ ಅಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರ ಕೈಚಳಕ ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರ್ಟ್ ಆದೇಶ ನೀಡಿದ್ದು, ಸಿದ್ದರಾಮಯ್ಯನವರೇ ಎ1 ಆರೋಪಿ ಆಗಲಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯಗೆ ರಾಜಕೀಯ ಸಂಧ್ಯಾ ಕಾಲದಿಂದ ಇಷ್ಟೆಲ್ಲ ಸಂಕಷ್ಟ ಬರೋಕೆ ಕಾರಣವೇ ಆ ಭೂಮಿ. ಇದೇ ಮೊದಲ ಬಾರಿಗೆ ಸಿಎಂ ಭಾಮೈದನಿಗೆ ಆಸ್ತಿಯನ್ನು ಬರೆದುಕೊಟ್ಟಿದ್ದ ದೇವರಾಜು ಫೋಟೋ ಲಭ್ಯವಾಗಿದೆ. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿರುವ ದೇವರಾಜು, ವಿವಾದಿತ ಭೂಮಿಯ ಮೂಲ ಮಾಲೀಕ ನಿಂಗ ಅವರ ಮಗ. ಈತ ತನ್ನ ಕುಟುಂಬದ ಜೊತೆಗೆ ಸಿಎಂ ಕುಟುಂಬಕ್ಕೂ ಯಾಮಾರಿಸಿದ್ದು, ಸದ್ಯ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾರೆ.
ಇದನ್ನೂ ಓದಿ: 10ನೇ ಕ್ಲಾಸ್ ಪಾಸ್ ಆಗಿದ್ರೆ ಸರ್ಕಾರಿ ಕೆಲಸ.. ಆದಾಯ ತೆರಿಗೆ ಇಲಾಖೆ ಹುದ್ದೆಗಳಿಗೆ ಕಾಲ್ಫಾರ್ಮ್
40 ವರ್ಷಗಳ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಎಂದೂ ಈ ಪರಿಸ್ಥಿತಿಯನ್ನ ಫೇಸ್ ಮಾಡಿರಲಿಲ್ಲ. ರಾಜ್ಯ ರಾಜಕೀಯದಲ್ಲಿ ಕಳಂಕವೇ ಇಲ್ಲ ಅಂತಾ ಹೇಳಿಕೊಳ್ತಿದ್ದ ರಾಜಕಾರಣಿಗೆ ಇದೀಗ ಮುಡಾ ಎಂಬ ಅಕ್ರಮದ ಭೂತ ಹೆಗಲಲ್ಲ ನೆತ್ತಿಯ ಮೇಲೆ ಕೂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ