ಮಹಾಲಕ್ಷ್ಮಿ ಮತ್ತು ಆತನ ನಡುವೆ ನಡೆದಿದ್ದೇನು?
ಆಕೆಯನ್ನು ಕೊಲ್ಲಲು ನಿಜವಾದ ಕಾರಣವೇನು?
ಪೊಲೀಸರ ಕೈಗೆ ಸಿಗದೇ ಆತ್ಮಹತ್ಯೆ ಮಾಡಿಕೊಂಡ ಕಿಲ್ಲರ್
ಮಹಾಲಕ್ಷ್ಮೀಯನ್ನ ಕೊಂದ ಆ ಸೈಕೋ ಕಿಲ್ಲರ್ ಯಾರು? ಸದ್ಯ ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. 29 ವರ್ಷದ ಮಹಿಳೆಯನ್ನ 59 ತುಂಡುಗಳನ್ನಾಗಿ ಮಾಡಿದ್ದ ಆ ಕೊಲೆಗಾರನ ಕ್ಲೂ ಪತ್ತೆಯಾಗಿದೆ. ವಿಪರ್ಯಾಸ ಅಂದ್ರೆ ಪೊಲೀಸರು ಆತನ ಜಾಡು ಹಿಡಿದು ಹೊರಟಿದ್ದಾಗ್ಲೇ ಆತ ತನ್ನ ಬದುಕಿನ ಕ್ಲೈಮ್ಯಾಕ್ಸ್ ತಾನೇ ಬರ್ಕೊಂಡಿದ್ದಾನೆ.
ಮಹಾಲಕ್ಷ್ಮಿ ಕೊಲೆ ಕೇಸ್‌ಗೆ ಬಿಗ್ಟ್ವಿಸ್ಟ್
ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಒಂಟಿ ಮಹಿಳೆ ಮಹಾಲಕ್ಷ್ಮಿ ಬರ್ಬರ ಹತ್ಯೆ ಕೇಸ್‌ಗೆ ಭಯಾನಕವಾದ ಟ್ವಿಸ್ಟ್ ಸಿಕ್ಕಿದೆ. ಮಹಾಲಕ್ಷ್ಮಿಯನ್ನು ಪೀಸ್, ಪೀಸ್ ಮಾಡಿದ ಮಹಾ ಪಾಪಿ ಸಾವು ಅಷ್ಟೇ ಕ್ರೂರವಾಗಿದೆ. ಮಹಾಲಕ್ಷ್ಮಿಯ ಕೊಲೆಯ ಬಳಿಕ ತಲೆಮರೆಸಿಕೊಂಡ ನರರಾಕ್ಷಸ ಮಾಡಿದ ತಪ್ಪಿಗೆ ತಾನೇ ನರಕದ ಬಾಗಿಲು ತಟ್ಟಿದ್ದಾನೆ.
ಇದನ್ನೂ ಓದಿ: BREAKING: ಮಹಾಲಕ್ಷ್ಮಿ ಪೀಸ್, ಪೀಸ್ ಮಾಡಿದ ಮಹಾ ಪಾಪಿ ಸಾವು; ಅಸಲಿಗೆ ಆಗಿದ್ದೇನು?
ಮಹಾಲಕ್ಷ್ಮಿ ಕೊಲೆ ಬೆಳಕಿಗೆ ಬಂದ ಮೇಲೆ ಬೆಂಗಳೂರು ಪೊಲೀಸರು ಪ್ರಮುಖ ಆರೋಪಿಗಾಗಿ ಬಲೆ ಬೀಸಿದ್ದರು. ನರಹಂತಕ ಯಾವುದೇ ಮೂಲೆಯಲ್ಲಿದ್ರೂ ಬಂಧಿಸಲು ಹೊರಟಿದ್ದರು. ಆದ್ರೆ ಆತ ಪೊಲೀಸರ ಕೈಗೆ ಸಿಕ್ಕಿದ್ದು ಮಾತ್ರ ಶವವಾಗಿ. ಈತನೇ ಮಹಾಲಕ್ಷ್ಮೀಯನ್ನ ಕೊಚ್ಚಿ ಕೊಲೆ ಮಾಡಿರೋದು ರಿವೀಲ್ ಆಗಿದೆ.
ಮುಕ್ತಿ ರಂಜನ್ ರಾಯ್ ಯಾರು?
ಅಷ್ಟಕ್ಕೂ ಈ ಮುಕ್ತಿ ರಂಜನ್ ರಾಯ್ ಬೇರೆ ಯಾರು ಅಲ್ಲ. ಮಹಾಲಕ್ಷ್ಮೀ ಕೆಲಸ ಮಾಡ್ತಿದ್ದ ಮಲ್ಲೇಶ್ವರಂ ಫ್ಯಾಶನ್ ಫ್ಯಾಕ್ಟರಿಯ ಟೀಮ್ ಹೆಡ್ ಆಗಿದ್ದ. ತಮ್ಮನ ಜೊತೆಯಲ್ಲಿ ಹೆಬ್ಬಗೋಡಿಯಲ್ಲಿ ವಾಸವಾಗಿದ್ದ. ಇದೇ ವೇಳೆ ಸಹೋದ್ಯೋಗಿ ಮಹಾಲಕ್ಷ್ಮೀ ಜೊತೆ ಪ್ರೀತಿಯಾಗಿದೆ. ಸೆಪ್ಟೆಂಬರ್ 1ರಂದು ಎಥಾಪ್ರಕಾರ ಮಹಾಲಕ್ಷ್ಮೀ ಮತ್ತು ಮುಕ್ತಿ ಇಬ್ಬರೂ ಕೆಲಸಕ್ಕೆ ಹಾಜರಾಗಿದ್ರು. ಆದ್ರೆ, ಸೆಪ್ಟೆಂಬರ್ 2ರಂದು ಮಹಾಲಕ್ಷ್ಮಿ ವೀಕ್ ಆಫ್ ತೆಗೆದುಕೊಂಡಿದ್ಲು. ಅವತ್ತು ನೆಲಮಂಗಲದ ತಾಯಿ ಮನೆಗೆ ಬರೋದಾಗಿ ಹೇಳಿದ್ಲಂತೆ. ಆದ್ರೆ, ಅಂದು ಮಹಾಲಕ್ಷ್ಮೀ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅಂದೇ ಮುಕ್ತಿ ರಾಯ್ ಮಹಾಲಕ್ಷ್ಮೀಯನ್ನ ಕೊಂದು ಪರಾರಿಯಾಗಿದ್ದ.
ಇದನ್ನೂ ಓದಿ: ಅಬ್ಬಾ.. ಮಹಾಲಕ್ಷ್ಮಿ ಕೇಸ್ನಲ್ಲಿ ರೋಚಕ ಟ್ವಿಸ್ಟ್; 59 ಪೀಸ್, ಪೀಸ್ ಮಾಡಿದವನು ಅವನಲ್ಲ.. ಇವನೇ!
ಮದುವೆಗೆ ಒತ್ತಾಯಿಸಿದ್ದೇ ಮಹಾಲಕ್ಷ್ಮಿ ಮರ್ಡರ್ಗೆ ಕಾರಣವಾಯ್ತಾ?
ಇಬ್ಬರು ಒಂದೇ ಕಡೆ ಕೆಲಸ ಮಾಡ್ತಿದ್ದ ಕಾರಣ ಇಬ್ಬರ ಮಧ್ಯೆ ಸಲುಗೆ ಹೆಚ್ಚಾಗಿತ್ತು. ತನನ್ನು ಮದುವೆ ಆಗುವಂತೆ ಮಹಾಲಕ್ಷ್ಮಿ ಒತ್ತಾಯ ಮಾಡ್ತಿದ್ದಳಂತೆ. ಕೆಲಸ ಮಾಡುವ ಸ್ಥಳದಲ್ಲಿ ಬೇರೆ ಹುಡುಗಿಯರು ಮುಕ್ತಿ ರಂಜನನ್ನ್ನು ಮಾತನಾಡಿಸಿದ್ರೆ ಜಗಳ ಮಾಡ್ತಿದ್ಲಂತೆ. ಆದ್ರೆ ಮಹಾಲಕ್ಷ್ಮಿ ಬಗ್ಗೆ ಎಲ್ಲ ತಿಳಿದುಕೊಂಡಿದ್ದ ರಂಜನ್ ಮದುವೆಗೆ ನಿರಾಕರಿಸಿದ್ದ. ಇನ್ನು ಈ ಮುಕ್ತಿ ರಂಜನ್, ಮುಂಗೋಪಿ. ಸಿಟ್ಟಾದ್ರೆ ಈ ಕೆಲಸ ಮಾಡ್ತೀನಿ ಅಂತಾ ಫಿಕ್ಸ್ ಅದ್ರೆ ಆ ಕೆಲಸ ಮಾಡ್ತಿದ್ನಂತೆ. ಹೀಗಾಗಿ ಇಬ್ಬರ ಮಧ್ಯೆ ಜಗಳ ಆಗಿ, ಮುಕ್ತಿ, ಮಹಾಲಕ್ಷ್ಮಿಯನ್ನು ಕೊಲೆ ಮಾಡಿ, ಎಸ್ಕೇಪ್ ಆಗಿದ್ದ.
ಒಡಿಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮುಕ್ತಿ ರಂಜನ್
ಒಡಿಶಾದ ಪಂಡಿ ಗ್ರಾಮದ ಬೂತಕಪುರದ ನಿವಾಸಿಯಾಗಿರುವ ಮುಕ್ತಿ ರಂಜನ್ ಕೊಲೆ ಬಳಿಕ ತಲೆಮರೆಸಿಕೊಂಡು ಓಡಾಡ್ತಿದ್ದ. ನಿನ್ನೆ ರಾತ್ರಿ ಭದ್ರಕ್‌ಗೆ ತೆರಳುತ್ತಿದ್ದೇನೆ ಅಂತ ಮನೆಯಲ್ಲಿ ಹೇಳಿ ಸ್ಕೂಟಿ ಮೂಲಕ ನಿರ್ಜನ ಪ್ರದೇಶಕ್ಕೆ ತರಳಿದ್ದ. ಮೊಬೈಲ್ ಇಲ್ಲದ ಕಾರಣ ಈತ ಲ್ಯಾಪ್‌ಟಾಪ್ ಒಯ್ದಿದ್ದ. ಸ್ಕೂಟಿಯಲ್ಲಿ ಲ್ಯಾಪ್‌ಟಾಪ್ ಇಟ್ಟು ಕುಳೆಪಾ ಸ್ಮಶಾನದ ಬಳಿ ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಧಾವಿಸಿದ ಆರ್‌ಡಿ ಪಂಡಿ ಪೊಲೀಸರು ಪರಿಶೀಲನೆ ನಡೆಸಿ, ಸ್ಕೂಟಿ, ಲ್ಯಾಪ್ಟಾಪ್ಅನ್ನು ವಶಕ್ಕೆ ಪಡೆದುಕೊಂದಿದ್ದಾರೆ.
ಇದನ್ನೂ ಓದಿ: ಭೀಕರ ಅಪಘಾತ.. ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿಗಳು ದಾರುಣ ಸಾವು
ಒಟ್ಟಾರೆ ಈತನ ಸಂಗ ಬೆಳೆಸಿದ ತಪ್ಪಿಗೆ ಮಹಾಲಕ್ಷ್ಮಿ ಪೀಸ್ ಪೀಸ್ ಆಗಿದ್ರೆ ಈಕೆಯನ್ನ ಕೊಂದು ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಆರೋಪಿ ಮುಕ್ತಿ ರಂಜನ್ ದಾಸ್ ತಾನೂ ಸಾವಿನ ಮನೆಯನ್ನ ಸೇರಿದ್ದಾನೆ. ಆದ್ರೆ ಪೊಲೀಸರ ಕೆಲವೊಂದು ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಕ್ಕಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ