newsfirstkannada.com

×

VIDEO: ರಘುಪತಿ ರಾಘವ ರಾಜಾರಾಮ್.. ಬಿಜೆಪಿ ನಾಯಕರಿಗೆ ಟಾಂಗ್‌ ಕೊಟ್ಟ ಡಿ.ಕೆ ಶಿವಕುಮಾರ್

Share :

Published January 23, 2024 at 3:19pm

Update January 23, 2024 at 3:20pm

    ನಮ್ಮನ್ನ ಹಿಂದು ವಿರೋಧಿಗಳು ಅಂತ ಬಿಂಬಿಸಲು ಬಿಜೆಪಿಗರಿಂದ ಪ್ರಯತ್ನ

    ಮುಜರಾಯಿ ಇಲಾಖೆಯಿಂದ ರಾಜ್ಯದ ದೇವಸ್ಥಾನಗಳಲ್ಲಿ ಪೂಜೆಗೆ ಆದೇಶ

    ನಾವು ರಾಮನನ್ನೂ ಪೂಜಿಸ್ತೀವಿ.. ಸೀತೆಯನ್ನೂ ಪೂಜಿಸ್ತೀವಿ ಎಂದ ಡಿಕೆ

ಬೆಂಗಳೂರು: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆಯಾದ ಮೇಲೂ ಕಾಂಗ್ರೆಸ್, ಬಿಜೆಪಿ ನಾಯಕರ ವಾಗ್ಯುದ್ಧ ನಿಂತಿಲ್ಲ. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನೇರವಾಗಿ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದು, ಶ್ರೀರಾಮನೇನು ಬಿಜೆಪಿ ಅವರ ಅಪ್ಪನ ಮನೆ ಆಸ್ತಿನಾ? ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬಿಲ್ಲು ಬಾಣ ಹಿಡಿದು ಅರವಿಂದ ಲಿಂಬಾವಳಿಗೆ ಗುರಿಯಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ -Photo

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ರಾಜ್ಯದ ದೇವಸ್ಥಾನಗಳಲ್ಲಿ ಪೂಜೆಗೆ ಆದೇಶ ಮಾಡಿತ್ತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ಮಾಡಿ, ಪೂಜೆ ಮಾಡಲು ನಮ್ಮ ಸರ್ಕಾರ ಹೇಳಿದೆ. ಬಿಜೆಪಿ ಅವರಿಗೆ ನಮ್ಮನ್ನು ಕಂಡರೆ ಆಗಲ್ಲ, ಹೊಟ್ಟೆ ಉರಿ. ಏನಾದ್ರೂ ಮಾಡಿ ನಮ್ಮನ್ನ ಹಿಂದು ವಿರೋಧಿಗಳು ಅಂತಾ ಬಿಂಬಿಸಲು ಪ್ರಯತ್ನ ಮಾಡುತ್ತಿದ್ದಾರೆ.

ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆ. ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ಶಿವನ ಮಗ ಕುಮಾರನೂ ಇದ್ದಾನೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಹೇಳಿಲ್ವಾ ರಘುಪತಿ ರಾಘವ ರಾಜಾರಾಮ್.. ಪತೀತ ಪಾವನ ಸೀತಾರಾಮ್ ಅಂತ. ನಾವು ರಾಮನನ್ನೂ ಪೂಜಿಸ್ತೀವಿ.. ಸೀತೆಯನ್ನೂ ಪೂಜಿಸ್ತೀವಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ರಘುಪತಿ ರಾಘವ ರಾಜಾರಾಮ್.. ಬಿಜೆಪಿ ನಾಯಕರಿಗೆ ಟಾಂಗ್‌ ಕೊಟ್ಟ ಡಿ.ಕೆ ಶಿವಕುಮಾರ್

https://newsfirstlive.com/wp-content/uploads/2024/01/DkShivakumar.jpg

Load More