newsfirstkannada.com

JDS ರಾಜ್ಯದಲ್ಲಿ ಮುಂದೆ ಇರೋದೇ ಇಲ್ಲ.. ಡಿಸಿಎಂ ಡಿ.ಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

Share :

Published April 2, 2024 at 2:06pm

    ರಾಜ್ಯದಲ್ಲಿ ಮುಂದೆ ಜೆಡಿಎಸ್ ಇರೋದಿಲ್ಲ ಎಂದ ಡಿಸಿಎಂ ಡಿ.ಕೆ ಶಿವಕುಮಾರ್

    ಚುನಾವಣೆಯಲ್ಲಿ ದಳದವರು ಕೇವಲ ಕುಟುಂಬದವರಿಗೆ ಟಿಕೆಟ್ ಕೊಟ್ಟಿದ್ದಾರೆ

    ಇದು ಎಂತಹ ನೀಚ ರಾಜಕೀಯ ಅಂತ ಜೆಡಿಎಸ್ ಕಾರ್ಯಕರ್ತರಿಗೆ ಬೇಸರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ನಾಯಕರು ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧ ಮುಗಿಬಿದ್ದಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ರಣತಂತ್ರ ಹೆಣೆಯುತ್ತಿದ್ದಾರೆ. ಬಿಜೆಪಿ, ಜೆಡಿಎಸ್‌ ರಣತಂತ್ರಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಟಕ್ಕರ್‌ ಕೊಟ್ಟಿದ್ದು ತಿರುಗೇಟು ಕೊಟ್ಟಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ಜೊತೆ ದೋಸ್ತಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷದಲ್ಲಿ ರಾಜ್ಯದಲ್ಲಿ ಮುಂದೆ ಇರೋದೇ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಜಾತಿ ಬಗ್ಗೆ ‌ಮಾತನಾಡುತ್ತಿದ್ದಾರೆ ಅಂತ ಗೊತ್ತಾಗಿದೆ. ಹಾಗಾದರೆ ಕುಮಾರಸ್ವಾಮಿಯನ್ನ ಇಳಿಸುವಾಗ ಎಲ್ಲಿ ಹೋಗಿತ್ತು ಜಾತಿ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ 20 ಸೀಟು ಗೆಲ್ಲೋದು ಯಾರು? ಕಾಂಗ್ರೆಸ್ಸಾ ಅಥವಾ ಬಿಜೆಪಿ-ಜೆಡಿಎಸ್ಸಾ?

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಒಕ್ಕಲಿಗ ನಾಯಕರಿಗೆ ಟಿಕೆಟ್‌ ಕೊಟ್ಟಿದೆ. ದಳದವರು ಕೇವಲ ಕುಟುಂಬದವರಿಗೆ ಟಿಕೆಟ್ ಕೊಟ್ಟಿದ್ದಾರೆ. ಬಹಳಷ್ಟು ನಾಯಕರು ಜೆಡಿಎಸ್‌ನಿಂದ ಬರ್ತಾ ಇದ್ದಾರೆ. ಯಾರು ಸರ್ಕಾರ ಕಿತ್ತು ಹಾಕಿದ್ರೋ ಅವರ ಜೊತೆಗೆ ನೆಂಟಸ್ಥಿಕೆ ಮಾಡಿಕೊಂಡಿದ್ದಾರೆ. ಎಂತಹ ನೀಚ ರಾಜಕೀಯ ನಡೆಯುತ್ತಿದೆ ಅಂತ ಜೆಡಿಎಸ್ ಕಾರ್ಯಕರ್ತರು‌ ಬೇಸರಗೊಂಡಿದ್ದಾರೆ. ಹೀಗಾಗಿ ಮುಂದೆ ರಾಜ್ಯದಲ್ಲಿ ಜೆಡಿಎಸ್ ಇರುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

JDS ರಾಜ್ಯದಲ್ಲಿ ಮುಂದೆ ಇರೋದೇ ಇಲ್ಲ.. ಡಿಸಿಎಂ ಡಿ.ಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

https://newsfirstlive.com/wp-content/uploads/2024/01/DkShivakumar.jpg

Load More