/newsfirstlive-kannada/media/post_attachments/wp-content/uploads/2024/08/Dharwad.jpg)
ಮೂರು ವರ್ಷಗಳಿಂದ ಮನೆಯೊಂದರಲ್ಲಿ ಮೃತದೇಹ ಪತ್ತೆಯಾಗಿರುವ ಸಂಗತಿ ಧಾರವಾಡದ ಮಾಳಮಡ್ಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆಯಿಂದ ಗ್ರಾಮದಲ್ಲಿನ ಜನರನ್ನ ಬೆಚ್ಚಿಬೀಳುವಂತೆ ಮಾಡಿದೆ.
ಮೃತದೇಹದ ಗುರುತು ಪತ್ತೆಯಾಗಿದ್ದು, ಚಂದ್ರಶೇಖರ ಕೊಲ್ಲಾಪುರ ಎಂದು ಗುರುತಿಸಲಾಗಿದೆ. ಮೂರು ವರ್ಷಗಳಿಂದ ಚಂದ್ರಶೇಖರ ಮೃತದೇಹ ಮನೆಯಲ್ಲಿಯೇ ಇತ್ತು ಎಂಬುದು ಗ್ರಾಮದ ಜನರಿಗೆ ಶಾಕ್​ ನೀಡಿದಂತಾಗಿದೆ.
/newsfirstlive-kannada/media/post_attachments/wp-content/uploads/2024/08/Dharwad-1.jpg)
ಚಂದ್ರಶೇಖರವರು ಧಾರವಾಡದ ಸುರೇಖಾ ಎಂಬುವವರನ್ನ ವಿವಾಹವಾಗಿದ್ದರು.ಇವರಿಗೆ ಮಕ್ಕಳು ಆಗಿರಲಿಲ್ಲ. 2015 ರಲ್ಲಿ ಸುರೇಖಾ ಹೃದಯಾಘಾತದಿಂದ ನಿಧನರಾದರು. ಬಳಿಕ ಚಂದ್ರಶೇಖರ ತಾನೊಬ್ಬನೇ ಆ ಮನೆಯಲ್ಲಿ ವಾಸ ಮಾಡುತ್ತಿದ್ದರು.
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯಂದೇ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಕ್ರಿಕೆಟರ್ಸ್​!
ಸುರೇಖಾ ಅಕ್ಕನ ಮಗ ಯಶವಂತ ಎಂಬಾತ ಆಗಾಗ ಚಂದ್ರಶೇಖರ್​ ಮನೆಗೆ ಬಂದು ಹೋಗುತ್ತಿದ್ದರು.ಆದ್ರೆ ಯಶವಂತ ಕಳೆದ 3 ವರ್ಷಗಳಿಂದ ಚಂದ್ರಶೇಖರ ಮನೆಗೆ ಬಂದಿರಲಿಲ್ಲ. 3 ತಿಂಗಳ ಹಿಂದೆ ಮನೆಗೆ ಬಂದು ನೋಡಿದಾಗ ಮನೆ ಲಾಕ್ ಆಗಿತ್ತು.
/newsfirstlive-kannada/media/post_attachments/wp-content/uploads/2024/08/Dharwad-2.jpg)
ಅನುಮಾನ ಬಂದ ಯಶವಂತ ಇತ್ತೀಚೆಗೆ ಪೊಲೀಸರ ಸಮ್ಮುಖದಲ್ಲಿ ಮನೆ ಬಾಗಿಲು ಮುರಿದು ಒಳ ಹೋಗಿ ಪರಿಶೀಲಿಸಿದಾಗ ಮನೆಯ ಬೆಡ್ ಮೇಲೆ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್​ ಮಾತನಾಡಿ ಅಸ್ಥಿಪಂಜರವನ್ನ ಹುಬ್ಬಳ್ಳಿ ಕಿಮ್ಸ್‌ಗೆ ತಪಾಸಣೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ಇದರ ಸತ್ಯಾಸತ್ಯತೆ ಗೊತ್ತಾಗಲಿದೆ. ಈಗ ವಿದ್ಯಾಗಿರಿ ಠಾಣೆ ಪೊಲೀಸರು ಇದೊಂದು ಸಹಜ ಸಾವು ಎಂದು ದೂರು ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us