newsfirstkannada.com

ಕುಡಿಯಲು ನೀರು ತುಂಬಿಸಿಕೊಳ್ತಿದ್ದಾಗ.. ಟ್ಯಾಂಕರ್​​ ಒಳಗೆ 25 ವರ್ಷದ ಮಹಿಳೆಯ ಶವ ಪತ್ತೆ..

Share :

Published June 21, 2024 at 8:00am

    ನೀರು ತುಂಬಿಸಿಕೊಂಡು ಹೋದ ಜನಗೆ ಕಾಡಿದೆ ಆತಂಕ

    ಶವ ಬಿದ್ದಿದ್ದ ನೀರು ಅದೆಷ್ಟು ಜನರಿಗೆ ಪೂರೈಕೆ ಆಗಿದೆಯೋ?

    ಟ್ಯಾಂಕ್​ ಒಳಗೆ ಬಿದ್ದಿದ್ದ ಶವ ಪತ್ತೆಯಾಗಿದ್ದು ಹೇಗೆ..?

ಕುಡಿಯುವ ನೀರನ್ನು ಪೂರೈಕೆ ಮಾಡಲು ಬಂದಿದ್ದ ವಾಹನ ಟ್ಯಾಂಕ್​ ಒಳಗೆ 25 ವರ್ಷ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ನೀರು ತುಂಬಿಸಿಕೊಂಡು ಹೋಗಿದ್ದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಮಹಾರಾಷ್ಟ್ರದ ಪುಣೆಯ ಫುರ್ಸುಂಗಿ ಪ್ರದೇಶದಲ್ಲಿ ನೀರು ಪೂರೈಕೆ ಮಾಡಲು ಟ್ಯಾಂಕರ್ ಬಂದಿತ್ತು.

ಆಗಿದ್ದೇನು..?
ಟ್ಯಾಂಕರ್​ ಬರ್ತಿದ್ದಂತೆಯೇ ಸ್ಥಳೀಯರು ನೀರು ತುಂಬಿಸಿಕೊಳ್ಳಲು ಶುರುಮಾಡಿದ್ದಾರೆ. ಸ್ವಲ್ಪ ಸಮಯ ನೀರು ತುಂಬಿಸಿಕೊಳ್ತಿದ್ದಂತೆ ಟ್ಯಾಂಕ್​ನಿಂದ ನೀರು ಬರೋದು ಸ್ಟಾಪ್ ಆಗಿದೆ. ಆಗ ಡ್ರೈವರ್​​ ಟ್ಯಾಂಕ್​​ನ ಪೈಪ್ ಪರಿಶೀಲನೆ ನಡೆಸಿದ್ದಾರೆ. ಆಗ ಸೀರೆಯೊಂದು ಪೈಪ್​​ಗೆ ಒಳಗೆ ಸಿಲುಕಿ ಬ್ಲಾಕ್ ಆಗಿರೋದು ಪತ್ತೆಯಾಗಿದೆ.

ಇದನ್ನೂ ಓದಿ:ಮೋದಿ ಸರ್ಕಾರ ಬೆಲೆ ಏರಿಸಿದಾಗ ಯಾರೂ ಕೇಳಲಿಲ್ಲ.. ನಾವು ಹೆಚ್ಚಳ ಮಾಡಿದ್ರೆ ಪ್ರಶ್ನೆ ಮಾಡ್ತೀರಾ; ಸಿದ್ದರಾಮಯ್ಯ ಸಿಡಿಮಿಡಿ

ಏನಾಗಿದೆ ಎಂದು ಡ್ರೈವರ್ ಟ್ಯಾಂಕ್ ಹತ್ತಿ ನೋಡಿದಾಗ 25 ವರ್ಷದ ಯುವತಿಯ ಶವ ಪತ್ತೆಯಾಗಿದೆ. ಕೌಶಲ್ಯ ಮುಕೇಶ್ ಚೌಹಾನ್ ಮೃತ ಮಹಿಳೆ. ಪೊಲೀಸರು ಸ್ಥಳಕ್ಕೆ ಬಂದು ತನಿಖೆ ಆರಂಭಿಸಿದ್ದಾರೆ. ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರೋದೋ? ಅಥವಾ ಯಾರೋ ಕೊಲೆ ಮಾಡಿ ಬೀಸಾಡಿರೋದು ಎಂಬ ಆಯಾಮಾದ ಮೇಲೆ ತನಿಖೆ ಶರುಮಾಡಿದ್ದಾರೆ.

ವರದಿಗಳ ಪ್ರಕಾರ ಮೃತ ಯುವತಿಯ ದೇಹದಲ್ಲಿ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಅಸಲಿ ಕಾರಣ ಗೊತ್ತಾಗಲಿದೆ. ರಾತ್ರಿ ವೇಳೆ ಟ್ಯಾಂಕರ್ ಡ್ರೈವರ್ ಹಾಗೂ ಮೃತ ಯುವತಿ ಒಂದೇ ಬಿಲ್ಡಿಂಗ್​ನಲ್ಲಿ ವಾಸವಿದ್ದರು. ರಾತ್ರಿ ಬಿಲ್ಡಿಂಗ್ ಕೆಳಗೆ ಟ್ಯಾಂಕರ್ ನಿಲ್ಲಿಸಿದ್ದ. ಈ ವೇಳೆ ಏನೋ ಅನಾಹುತ ನಡೆದಿದೆ ಎಂಬ ಅನುಮಾನ ಶುರುವಾಗಿದೆ. ಹಂಡೆವಾಡಿ ಜೆಎಸ್​​ಪಿಎಂ ಕಾಲೇಜು ಬಳಿ ಮಹಿಳೆ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಿದ್ದಳು. ಇವವರು ಮೂಲತಃ ಉತ್ತರ ಪ್ರದೇಶದವರು. ಕೇವಲ ಒಂದು ತಿಂಗಳ ಹಿಂದಷ್ಟೇ ಮಹಾರಾಷ್ಟ್ರಕ್ಕೆ ಬಂದಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ದರ್ಶನ್ ಕೇಸ್​​ನಲ್ಲಿ ಯಾರ ಮಾತಿಗೂ CM ಡೋಂಟ್‌ಕೇರ್.. ಸಿದ್ದರಾಮಯ್ಯರ ದೃಢ ನಿರ್ಧಾರಕ್ಕೆ ಇದೆ 5 ಕಾರಣ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿಯಲು ನೀರು ತುಂಬಿಸಿಕೊಳ್ತಿದ್ದಾಗ.. ಟ್ಯಾಂಕರ್​​ ಒಳಗೆ 25 ವರ್ಷದ ಮಹಿಳೆಯ ಶವ ಪತ್ತೆ..

https://newsfirstlive.com/wp-content/uploads/2024/06/WATER-TANKER.jpg

Load More