Advertisment

ಮಾರಕಾಸ್ತ್ರದಿಂದ ಡೆಡ್ಲಿ ಅಟ್ಯಾಕ್.. ಮಾಲೀಕನ ಕಾಪಾಡಲು ಬಂದ ವ್ಯಕ್ತಿಯನ್ನು ಮೆಚ್ಚಲೇಬೇಕು.. Video

author-image
Ganesh
Updated On
ಮಾರಕಾಸ್ತ್ರದಿಂದ ಡೆಡ್ಲಿ ಅಟ್ಯಾಕ್.. ಮಾಲೀಕನ ಕಾಪಾಡಲು ಬಂದ ವ್ಯಕ್ತಿಯನ್ನು ಮೆಚ್ಚಲೇಬೇಕು.. Video
Advertisment
  • 54 ವರ್ಷದ ಶ್ರೀನಿವಾಸ್ ಕೊಲೆಯಾದ ಹೋಟೆಲ್ ಮಾಲೀಕ
  • ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸಲಿಲ್ಲ
  • ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು, ತನಿಖೆ ಆರಂಭ

ಹಾಡಹಗಲೇ ಹೋಟೆಲ್​ನಲ್ಲಿ ಕುಳಿತ್ತಿದ್ದ ವ್ಯಕ್ತಿಯ ಮೇಲೆ ರಾಡ್​ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್​ನ ಗಚ್ಚಿಬೌಲಿಯಲ್ಲಿ ನಡೆದಿದೆ.

Advertisment

ಗಚ್ಚಿಬೌಲಿಯ ಹೊಟೇಲ್ ಮಾಲೀಕ 54 ವರ್ಷದ ಶ್ರೀನಿವಾಸ್ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಶಿವ ಎಂಬಾತ ವೈಯಕ್ತಿಕ ದ್ವೇಷದಿಂದ ಕೃತ್ಯ ಎಸಗಿದ್ದಾನೆ ಅಂತ ತಿಳಿದುಬಂದಿದೆ. ಇನ್ನೂ ಹಲ್ಲೆಗೊಳಗಾದ ಶ್ರೀನಿವಾಸ್​ನನ್ನ ತಕ್ಷಣವೇ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:ಹವಾಮಾನ ಇಲಾಖೆಯಿಂದ RCB ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್​.. ಆತಂಕ ಶುರು

ವಿಡಿಯೋದಲ್ಲಿ ಏನಿದೆ..?
ಸಿಸಿಟಿವಿ ವಿಡಿಯೋ ಪ್ರಕಾರ, ಮಾಲೀಕ ಎನ್ನಲಾಗಿರುವ ಶ್ರೀನಿವಾಸ್ ಹೋಟೆಲ್​ನಲ್ಲಿ ಕೂತಿರುತ್ತಾರೆ. ಈ ವೇಳೆಗೆ ಉದ್ದವಾದ ರಾಡ್ ಹಿಡಿದು ವ್ಯಕ್ತಿಯೊಬ್ಬ ಹೋಟೆಲ್​ ಒಳಗೆ ನುಗ್ಗುತ್ತಾನೆ. ಏಕಾಏಕಿ ಬಂದ ಆತ, ಶ್ರೀನಿವಾಸ್​ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನು ಗಮನಿಸಿದ ಮತ್ತೋರ್ವ ಸಿಬ್ಬಂದಿ, ಆತನಿಂದ ತಪ್ಪಿಸುವ ಪ್ರಯತ್ನ ಮಾಡಿದ್ದಾನೆ. ಓಡಿ ಹೋಗಿ ಹಲ್ಲೆ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡಿದ್ದಾನೆ. ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ವೇಳೆ ಮತ್ತೋರ್ವ ವ್ಯಕ್ತಿ ತನ್ನ ಪ್ರಾಣವನ್ನೂ ಲೆಕ್ಕಿಸದೇ ಕಾಪಾಡಲು ಪ್ರಯತ್ನಿಸಿರೋದು ಮೆಚ್ಚುಗೆಗೆ ಕಾರಣವಾಗಿದೆ. ಪೊಲೀಸರು ಶ್ರೀನಿವಾಸ್ ಕುಟುಂಬದವರು ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisment

ಇದನ್ನೂ ಓದಿ:ಮೊದಲ ಮಳೆ ಮಾಡಿದ ಅನಾಹುತ.. ನೆಲ ಕಚ್ಚಿದ ಟೊಮ್ಯಾಟೋ ಬೆಳೆ.. ರಾಜ್ಯದಲ್ಲಿ ಎಲ್ಲಿ ಏನಾಯ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment