newsfirstkannada.com

ಲಕ್ಷಾಂತರ ರೂ. ಹಣ, ಬೈಕ್​​​ ಗೆದ್ದುಕೊಟ್ಟ ಟಗರನ್ನೇ ಬಲಿಕೊಟ್ಟ ಮಾಲೀಕ; ಭಾರೀ ಆಕ್ರೋಶ

Share :

Published May 4, 2024 at 4:15pm

Update May 4, 2024 at 4:16pm

    ಹಾವೇರಿ ಜಿಲ್ಲೆ ಕಳ್ಳಿಹಾಳ ಗ್ರಾಮದ ಶಬರಿ ಎನ್ನುವ ಟಗರು ಇನ್ನೂ ನೆನೆಪು ಮಾತ್ರ

    ಕಳೆದ 9 ವರ್ಷಗಳಿಂದ ರಾಜ್ಯಾದ್ಯಂತ ಟಗರಿನ ಕಾಳಗದಲ್ಲಿ​ ಫೇಮಸ್​ ಆಗಿದ್ದ ಶಬರಿ

    ಮಾಲೀಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಭಾರೀ ಆಕ್ರೋಶ

ಬಾಗಲಕೋಟೆ: ಲಕ್ಷಾಂತರ ಬಹುಮಾನ ಗೆದ್ದುಕೊಟ್ಟ ಟಗರನ್ನೇ ಮಾಲೀಕ ಬಲಿಕೊಟ್ಟ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಹಾವೇರಿ ಜಿಲ್ಲೆ ಕಳ್ಳಿಹಾಳ ಗ್ರಾಮದ ಶಬರಿ ಎನ್ನುವ ಟಗರನ್ನು ಮಾಲೀಕ ನಿನ್ನೆ ಕೊಲ್ಹಾಪುರ ಮಹಾಲಕ್ಷ್ಮೀಗೆ ಬಲಿ ಕೊಟ್ಟಿದ್ದಾನೆ. ಟಗರು ಶಬರಿಯೂ ಲಕ್ಷಾಂತರ ರೂಪಾಯಿ ನಗದು, ಬೈಕ್​ಗಳು ಸೇರಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಕಳೆದ 9 ವರ್ಷಗಳಿಂದ ರಾಜ್ಯಾದ್ಯಂತ ಟಗರಿನ ಕಾಳಗದಲ್ಲಿ ತನ್ನದೇ ಆದ ಹವಾ ಕ್ರಿಯೇಟ್​ ಮಾಡಿತ್ತು.

ಇದನ್ನೂ ಓದಿ: ಬಾಯಲ್ಲಿ ನೀರೂರಿಸೋ ನಿಂಬೆ.. ಆರೋಗ್ಯಕ್ಕೆ ಹೇಗೆಲ್ಲ ಉಪಯೋಗ ಆಗುತ್ತೆ ಲೆಮೆನ್ ಜ್ಯೂಸ್​?

ಆದರೆ ಅಖಾಡದಲ್ಲಿ ವೈರಿಗಳಿಗೆ ಸಿಂಹಸ್ವಪ್ನನಾಗಿದ್ದ ಟಗರು ಶಬರಿಯನ್ನು ಬಲಿಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ಸಾವಿರಾರು ಅಭಿಮಾನಿಗಳು ಮಾಲೀಕರ ನಡೆಗೆ ಭಾರೀ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅದರಲ್ಲೂ ಬಾಗಲಕೋಟೆಯ ಮಳಿಯಪ್ಪ ಹೊನ್ನಳ್ಳಿ ಎಂಬುವವರು ದಯವಿಟ್ಟು ಇಂತಹ ಕೆಲಸ ಯಾರೂ ಮಾಡಬೇಡಿ. ದೇವರ ಹೆಸರಿನಲ್ಲಿ ಶಬರಿ ಬಲಿ ಕೊಟ್ಟಿದ್ದು ಸರಿ ಅಲ್ಲ. ಮುಂದೆ ಯಾರೂ ಈ ರೀತಿಯ ಕೆಲಸ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಕ್ಷಾಂತರ ರೂ. ಹಣ, ಬೈಕ್​​​ ಗೆದ್ದುಕೊಟ್ಟ ಟಗರನ್ನೇ ಬಲಿಕೊಟ್ಟ ಮಾಲೀಕ; ಭಾರೀ ಆಕ್ರೋಶ

https://newsfirstlive.com/wp-content/uploads/2024/05/bagalakote.jpg

Load More