newsfirstkannada.com

50, 100, 150 ಮಾಸ್ಕೋದಲ್ಲಿ ಏರುತ್ತಲಿದೆ ಸಾವಿನ ಸಂಖ್ಯೆ; 11 ನರರಾಕ್ಷಸರು ಅರೆಸ್ಟ್

Share :

Published March 23, 2024 at 5:56pm

Update March 23, 2024 at 5:59pm

  ಉಗ್ರರ ಭಯಾನಕ ದಾಳಿಗೆ ಮಾಸ್ಕೋದಲ್ಲಿ 150ಕ್ಕೂ ಹೆಚ್ಚು ಸಾವು

  ಭಯೋತ್ಪಾದಕರ ದಾಳಿ ಹಿಂದೆ ಉಕ್ರೇನ್ ಕೈವಾಡ ಇದೆ ಎಂದ ರಷ್ಯಾ

  ಸಿಟಿ ಹಾಲ್‌ಗೆ ನುಗ್ಗಿದ 11 ಭಯೋತ್ಪಾದಕರಲ್ಲಿ 4 ಬಂದೂಕುಧಾರರು

ಮಾಸ್ಕೋ: ರಾಕ್ ಮ್ಯೂಸಿಕ್ ಕೇಳುವಾಗ ರಷ್ಯಾದ ಕ್ರೋಕಸ್ ಸಿಟಿ ಹಾಲ್​ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಉಗ್ರರ ನರಮೇಧಕ್ಕೆ ಪ್ರಾಣ ಬಿಟ್ಟವರ ಸಂಖ್ಯೆ ಏರುತ್ತಲೇ ಇದೆ. ರಷ್ಯಾ ಮಾಧ್ಯಮಗಳ ವರದಿ ಪ್ರಕಾರ ನರರಾಕ್ಷಸರ ದಾಳಿಯಲ್ಲಿ ಇದುವರೆಗೂ 150ಕ್ಕೂ ಹೆಚ್ಚು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಷ್ಯಾಗೆ ಉಕ್ರೇನ್ ಕೈವಾಡದ ಶಂಕೆ!

ಕಳೆದ ಶನಿವಾರ ರಾತ್ರಿ ಸಿಟಿ ಹಾಲ್‌ಗೆ ನುಗ್ಗಿದ 11 ಭಯೋತ್ಪಾದಕರಲ್ಲಿ 4 ಬಂದೂಕುಧಾರರು ಭಯಾನಕ ದಾಳಿ ಮಾಡಿದ್ದರು. ಉಗ್ರರು ದಾಳಿ ಮಾಡಿದ ಕೆಲವೇ ನಿಮಿಷದಲ್ಲಿ ಮಾಸ್ಕೋ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಮಾರಣಹೋಮ ನಡೆದು ಹೋಯಿತು. ಈ ಭಯೋತ್ಪಾದಕ ದಾಳಿಯನ್ನ ಇಸ್ಲಾಮಿಕ್ ಸ್ಟೇಟ್ ಖೋರಾಸನ್ (ISIS-K) ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿದೆ. ಆದರೆ ರಷ್ಯಾ ಭದ್ರತಾ ಪಡೆ ಈ ದಾಳಿಯ ಹಿಂದೆ ಉಕ್ರೇನ್ ಕೈವಾಡ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದೆ. ಕಳೆದ 2 ವರ್ಷದಿಂದ ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಯುದ್ಧ ನಡೆಯುತ್ತಿದೆ. ಹೀಗಾಗಿ ನೆರೆಯ ರಾಷ್ಟ್ರ ಉಕ್ರೇನ್‌, ರಷ್ಯಾದ ಮೇಲೆ ಭಯಾತ್ಪಾದಕ ದಾಳಿ ಮಾಡಿರಬಹುದು ಎನ್ನಲಾಗಿದೆ.

ಮಾಸ್ಕೋದ ದಾಳಿ ಭಯೋತ್ಪಾದಕರ ಡೆಡ್ಲಿ ಗ್ಯಾಂಗ್ ಉಕ್ರೇನ್‌ಗೆ ಹೋಗಲು ಪ್ಲ್ಯಾನ್ ಮಾಡಿದ್ದರು ಎಂದು ರಷ್ಯಾ ಹೇಳಿದೆ. ಅಮೆರಿಕಾ ಈ ದಾಳಿಗೂ ಉಕ್ರೇನ್‌ಗೂ ಲಿಂಕ್ ಬಗ್ಗೆ ಸೂಚನೆ ಇಲ್ಲ. ಈ ದಾಳಿಯನ್ನು ಉಕ್ರೇನ್‌ಗೆ ಹೊಣೆ ಮಾಡೋದು ಬೇಡ ಎಂದಿದೆ.

ಇದನ್ನೂ ಓದಿ: ರಷ್ಯಾದಲ್ಲಿ ರಕ್ತಬಿಜಾಸುರರು.. ಸಾವಿನ ಸಂಖ್ಯೆ 90ಕ್ಕೂ ಹೆಚ್ಚು; ISIS-K ದಾಳಿಗೆ ಕಾರಣವೇನು?

ರಷ್ಯಾದ ಟೆಲಿಗ್ರಾಂ ಚಾನೆಲ್‌ಗಳಲ್ಲಿ ಮಾಸ್ಕೋ ದಾಳಿಗೆ ಮಧ್ಯ ಏಷ್ಯಾದ ತಜಕಿಸ್ತಾನದಿಂದ ಭಯೋತ್ಪಾದಕರು ಬಂದಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಆದರೆ ತಜಕಿಸ್ತಾನ್ ವಿದೇಶಾಂಗ ಇಲಾಖೆ ಸಚಿವರು ಈ ಅನುಮಾನವನ್ನು ತಳ್ಳಿ ಹಾಕಿದ್ದಾರೆ. ನಮ್ಮ ದೇಶದ ಯಾವೊಬ್ಬ ಪ್ರಜೆಯು ಮಾಸ್ಕೋ ದಾಳಿಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಸತತ 5ನೇ ಬಾರಿಯೂ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದರು. ನಿರಂತರ 25 ವರ್ಷದಿಂದ ಪುಟಿನ್ ಅಧಿಕಾರ ನಡೆಸುತ್ತಿರುವುದಕ್ಕೆ ಇಸ್ಲಾಂ ರಾಷ್ಟ್ರದ ಪ್ರತ್ಯೇಕತಾವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಾಸ್ಕೋ ಮೇಲಿನ ದಾಳಿಗೂ ಪುಟಿನ್ ಅವರ ಮೇಲಿರುವ ಉಗ್ರವಾದಿಗಳ ದ್ವೇಷವೇ ಕಾರಣ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

50, 100, 150 ಮಾಸ್ಕೋದಲ್ಲಿ ಏರುತ್ತಲಿದೆ ಸಾವಿನ ಸಂಖ್ಯೆ; 11 ನರರಾಕ್ಷಸರು ಅರೆಸ್ಟ್

https://newsfirstlive.com/wp-content/uploads/2024/03/RUSSIA-3.jpg

Load More