newsfirstkannada.com

ರಷ್ಯಾದಲ್ಲಿ ರಕ್ತಬಿಜಾಸುರರು.. ಸಾವಿನ ಸಂಖ್ಯೆ 90ಕ್ಕೂ ಹೆಚ್ಚು; ISIS-K ದಾಳಿಗೆ ಕಾರಣವೇನು?

Share :

Published March 23, 2024 at 2:37pm

Update March 23, 2024 at 2:47pm

    ಕ್ರೋಕಸ್ ಸಿಟಿ ಹಾಲ್​ನಲ್ಲಿ ನಾಲ್ವರು ಭಯೋತ್ಪಾದಕರ ಡೆಡ್ಲಿ ಅಟ್ಯಾಕ್

    ದಾಳಿ ಬಳಿಕ ಚೇಸ್ ಮಾಡಿದ ಪೊಲೀಸರಿಂದ 11 ಶಂಕಿತರ ಬಂಧನ

    ಒಂದು ತಿಂಗಳ ಹಿಂದೆಯೇ ಅಮೆರಿಕಾಕ್ಕೆ ಈ ಭಯಾನಕ ದಾಳಿಯ ಸುಳಿವು

ಮಾಸ್ಕೋ: ರಷ್ಯಾದ ಕ್ರೋಕಸ್ ಸಿಟಿ ಹಾಲ್​ನಲ್ಲಿ ರಕ್ತದ ಕೋಡಿ ಹರಿದಿದ್ದು, ಸಾವಿನ ಸಂಖ್ಯೆ 60, 80 ಅಲ್ಲ 93ಕ್ಕೆ ಏರಿಕೆಯಾಗಿದೆ. ಮನಸೋ ಇಚ್ಛೆ ಗುಂಡಿನ ದಾಳಿ ಮಾಡಿದ ಭಯೋತ್ಪಾದಕರು ರಾಕ್ ಮ್ಯೂಸಿಕ್‌ ಕೇಳಲು ಭಾಗಿಯಾಗಿದ್ದವರ ಮಾರಣಹೋಮ ನಡೆಸಿದ್ದಾರೆ. ಮಾಸ್ಕೋದಲ್ಲಿ ನಡೆದಿರುವ ಈ ರಕ್ತದೋಕುಳಿಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ.

ಮಾಸ್ಕೋದ ಸಿಟಿ ಹಾಲ್‌ಗೆ ನುಗ್ಗಿದ ಬಂದೂಕುದಾರಿಗಳು ಅಕ್ಷರಶಃ ರಕ್ತಬಿಜಾಸುರರಂತೆ ನರಮೇಧ ನಡೆಸಿದ್ದಾರೆ. ಈ ದಾಳಿಯಲ್ಲಿ ನಾಲ್ವರು ಉಗ್ರರು ಡೆಡ್ಲಿ ಅಟ್ಯಾಕ್ ಮಾಡಿದ್ದು, ಆ ಬಳಿಕ ಚೇಸ್ ಮಾಡಿರುವ ಪೊಲೀಸರು 11 ಮಂದಿ ಶಂಕಿತರನ್ನು ಬಂಧಿಸಿದ್ದಾರೆ. ಇಸ್ಲಾಂ ರಾಷ್ಟ್ರ ಖೋರಾಸನ್ ಉಗ್ರ ಸಂಘಟನೆ ಈ ದಾಳಿಯ ಸಂಪೂರ್ಣ ಹೊಣೆ ಹೊತ್ತುಕೊಂಡಿದೆ.

ISIS-K ಭಯಾನಕ ದಾಳಿಗೆ ಕಾರಣವೇನು?
ಮಾಸ್ಕೋದ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಖೋರಾಸನ್ ಇಸ್ಲಾಂ ಸಂಘಟನೆ ಉಗ್ರವಾದಿಗಳು ದಾಳಿ ಮಾಡಿದ್ದಾರೆ. ಪ್ರಮುಖವಾಗಿ ಸಿರಿಯಾದಲ್ಲಿ ರಷ್ಯಾದ ಮಿಲಿಟರಿ ಪಡೆಯ ಹಸ್ತಕ್ಷೇಪ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮೇಲೆ ದ್ವೇಷವೇ ಈ ಭಯೋತ್ಪಾದಕ ದಾಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಮಾಸ್ಕೋ ಮೇಲಿನ ದಾಳಿ ಹೊಣೆ ಹೊತ್ತ ISIS ಭಯೋತ್ಪಾದಕ ಸಂಘಟನೆ.. ನರಮೇಧ ಮಾಡಿದ್ದು ನಾವೇ ಎಂದ ಉಗ್ರರು

2014ರಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಸಿರಿಯಾ ಅಧ್ಯಕ್ಷ ಬಷಾರ್ ಅಸ್ಸದ್ ಅವರನ್ನ ಬೆಂಬಲಿಸಿದ್ದರು. ಬಷಾರ್ ಅಸ್ಸದ್ ಅವರ ಪರವಾಗಿ ಸಿರಿಯಾದಲ್ಲಿ ರಷ್ಯಾ ಮಿಲಿಟರಿ ಪಡೆ ಕಾರ್ಯನಿರ್ವಹಿಸಿತ್ತು. ಇದು ಮುಸ್ಲಿಂ ಪ್ರತ್ಯೇಕತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಸೇಡು ತೀರಿಸಿಕೊಳ್ಳಲು ಹವಣಿಸುತ್ತಿತ್ತು ಎನ್ನಲಾಗಿದೆ.

ತಿಂಗಳ ಹಿಂದೆ ಅಮೆರಿಕಾ ಎಚ್ಚರಿಕೆ
ಮಾಸ್ಕೋದಲ್ಲಿ ನಡೆದಿರುವ ಈ ಭಯಾನಕ ದಾಳಿಯ ಸುಳಿವು ಒಂದು ತಿಂಗಳ ಹಿಂದೆಯೇ ಅಮೆರಿಕಾಕ್ಕೆ ಸಿಕ್ಕಿತ್ತು. ರಷ್ಯಾದಲ್ಲಿ ಅತಿ ಹೆಚ್ಚು ಜನರು ಸೇರಿರುವ ಸ್ಥಳದ ಮೇಲೆ ಉಗ್ರರು ದಾಳಿ ಮಾಡಲು ಸಂಚು ಮಾಡಿದ್ದಾರೆ ಎಂದು ವೈಟ್‌ಹೌಸ್‌ ಹೇಳಿತ್ತು. ಈ ಎಚ್ಚರಿಕೆಯನ್ನ ರಷ್ಯಾ ನಿರ್ಲಕ್ಷಿಸಿದ್ದು ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಉಗ್ರರ ಡೆಡ್ಲಿ ಅಟ್ಯಾಕ್‌ಗಳು!
ಮಾಸ್ಕೋದಲ್ಲಿ ನಡೆದ ಭಯೋತ್ಪಾದಕ ದಾಳಿ ಅಮೆರಿಕಾ ಹಾಗೂ ಭಾರತದಲ್ಲಿ ನಡೆದ ಕರಾಳ ದಿನವನ್ನು ನೆನಪು ಮಾಡಿದೆ. 2001 ಸೆಪ್ಟೆಂಬರ್ 11ರಂದು ಅಮೆರಿಕಾದ ಮೇಲೆ ಇಸ್ಲಾಂ ಉಗ್ರ ಸಂಘಟನೆಯ ಆತ್ಮಾಹುತಿ ದಾಳಿಕೋರರು ದಾಳಿ ಮಾಡಿದ್ದರು. ಈ ದಾಳಿಯಲ್ಲಿ 2977 ಮಂದಿ ಸಾವನ್ನಪ್ಪಿದ್ದರು.

2008 ನವೆಂಬರ್ 26ರಂದು ಭಾರತದ ಮುಂಬೈನಲ್ಲಿ ಲಷ್ಕರ್ ಇ-ತೊಯ್ಬಾ ಉಗ್ರರು ಭಯಾನಕ ದಾಳಿ ಮಾಡಿದ್ದರು. ಶಸ್ತ್ರಸಜ್ಜಿತ 10 ಉಗ್ರರಿಂದ 175 ಮಂದಿ ಸಾವನ್ನಪ್ಪಿದ್ದು, 300 ಜನ ಗಾಯಗೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಷ್ಯಾದಲ್ಲಿ ರಕ್ತಬಿಜಾಸುರರು.. ಸಾವಿನ ಸಂಖ್ಯೆ 90ಕ್ಕೂ ಹೆಚ್ಚು; ISIS-K ದಾಳಿಗೆ ಕಾರಣವೇನು?

https://newsfirstlive.com/wp-content/uploads/2024/03/Mascow-Attack.jpg

Load More