Advertisment

ಭೀಕರ ಬಸ್ ಅಪಘಾತ.. ಸಾವಿನ ಸಂಖ್ಯೆ 28ಕ್ಕೂ ಹೆಚ್ಚು; 23 ಮಂದಿಗೆ ಗಂಭೀರ ಗಾಯ; ಪ್ರಧಾನಿ ತೀವ್ರ ಕಂಬನಿ

author-image
admin
Updated On
ಭೀಕರ ಬಸ್ ಅಪಘಾತ.. ಸಾವಿನ ಸಂಖ್ಯೆ 28ಕ್ಕೂ ಹೆಚ್ಚು; 23 ಮಂದಿಗೆ ಗಂಭೀರ ಗಾಯ; ಪ್ರಧಾನಿ ತೀವ್ರ ಕಂಬನಿ
Advertisment
  • 50ಕ್ಕೂ ಹೆಚ್ಚು ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್ ಭೀಕರ ಅಪಘಾತ
  • ಅರ್ಬೈನ್ ಸ್ಮರಣಾರ್ಥ ತೆರಳುತ್ತಿದ್ದ ಯಾತ್ರಾರ್ಥಿಗಳ ದುರಂತ ಅಂತ್ಯ
  • ಮಧ್ಯರಾತ್ರಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಖಾಸಗಿ ಬಸ್‌

ಪಾಕಿಸ್ತಾನದ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್ ಭೀಕರ ಅಪಘಾತಕ್ಕೆ ತುತ್ತಾಗಿದ್ದು, 28 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬಸ್‌ನಲ್ಲಿ 23 ಪ್ರಯಾಣಿಕರಿಗೂ ಗಂಭೀರ ಗಾಯಗಳಾಗಿದೆ.

Advertisment

ಬಸ್‌ನಲ್ಲಿ ಪಾಕಿಸ್ತಾನದ ಯಾತ್ರಾರ್ಥಿಗಳು ಇರಾನ್‌ಗೆ ತೆರಳುವಾಗ ಈ ದುರಂತ ಸಂಭವಿಸಿದೆ. ಆಗಸ್ಟ್ 20ರ ರಾತ್ರಿ ಇರಾನ್‌ ದೇಶದ ಯಾಜ್ದ್ ಪ್ರದೇಶದಲ್ಲಿ ಬಸ್ ಭೀಕರ ಅಪಘಾತಕ್ಕೀಡಾಗಿದೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಸ್ಥಳೀಯ ಅಧಿಕಾರಿಗಳು ತುರ್ತು ಸೇವೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: ಎಗ್​​ ಪಫ್​ಗಾಗಿ ₹3.60 ಕೋಟಿ ಹಣ ಖರ್ಚು ಮಾಡಿದ್ರಾ? ಮಾಜಿ ಸಿಎಂ ಜಗನ್ ವೆಚ್ಚಕ್ಕೆ ಆಂಧ್ರ ಜನ ಶಾಕ್!

ಈ ಯಾತ್ರಾರ್ಥಿಗಳು ಪಾಕಿಸ್ತಾನದಿಂದ 7ನೇ ಶತಮಾನದ ಶಿಯಾ ಸಂತನ ಮರಣದ 40ನೇ ದಿನವನ್ನು ಗುರುತಿಸುವ ಅರ್ಬೈನ್ ಸ್ಮರಣಾರ್ಥ ಇರಾನ್‌ಗೆ ತೆರಳುತ್ತಿದ್ದರು. ಕರ್ಬಲಾ ಮಾರ್ಗವಾಗಿ ಅರ್ಬೈನ್‌ಗೆ ಹೋಗುತ್ತಿದ್ದಾಗ ಬಸ್​ ನೆಲಕ್ಕುರುಳಿದೆ.

Advertisment

ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕಾರಿಗಳು ಭೀಕರ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ. ಟೆಹ್ರಾನ್‌ನಿಂದ ಸುಮಾರು 700 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ.

ಪಾಕ್ ಪ್ರಧಾನಿ ಕಂಬನಿ
ಪಾಕಿಸ್ತಾನದ ಕೆಲವು ವರದಿಗಳ ಪ್ರಕಾರ 35 ಪಾಕಿಸ್ತಾನಿ ಪ್ರಜೆಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ ಸರ್ಕಾರದ ಅಧಿಕೃತ ಮಾಹಿತಿಯಲ್ಲಿ ಚೆಕ್‌ಪೋಸ್ಟ್‌ನಲ್ಲಿ ಬ್ರೇಕ್ ಫೇಲ್‌ ಆದ ಬಸ್‌ ಪಲ್ಟಿ ಹೊಡೆದಿದ್ದು, ಇದುವರೆಗೂ 28 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟನೆ ನೀಡಲಾಗಿದೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಅಪಘಾತಕ್ಕೆ ತೀವ್ರ ಕಂಬನಿ ಮಿಡಿದಿದ್ದಾರೆ. ಯಾತ್ರಾರ್ಥಿಗಳ ಸಾವಿಗೆ ಸಂತಾಪ ಸೂಚಿಸಿರುವ ಶೆಹಬಾಜ್ ಷರೀಫ್ ಅವರು ಗಾಯಗೊಂಡವರ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ.

Advertisment

ಇದನ್ನೂ ಓದಿ: ಅಬ್ಬಬ್ಬಾ.. ಯೂಟ್ಯೂಬ್​ನಿಂದ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡ್ತಾರೆ ಈ ಟ್ರಕ್ ಡ್ರೈವರ್; ಯಾರಿವರು?

ಇರಾನ್ ಸಂತಾಪ
ಭೀಕರ ರಸ್ತೆ ಅಪಘಾತಕ್ಕೆ ಇರಾನ್ ಸರ್ಕಾರ ತೀವ್ರ ಕಂಬನಿ ಮಿಡಿದಿದೆ. ಪಾಕಿಸ್ತಾನಕ್ಕೆ ಕೂಡಲೇ ಮಾಹಿತಿ ನೀಡಲಾಗಿದೆ. ಅದರಲ್ಲೂ ಪಾಕಿಸ್ತಾನದಲ್ಲಿ ಸಂಬಂಧಿಕರನ್ನು ಕಳೆದುಕೊಂಡ ಕುಟುಂಬಗಳಿಗೆ ನೋವನ್ನು ಸ್ವೀಕರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಗಾಯಾಳುಗಳನ್ನು ರಕ್ಷಿಸುವ ಹಾಗೂ ಸೂಕ್ತ ಚಿಕಿತ್ಸೆ ನೀಡುವ ಕಾರ್ಯ ಭರದಿಂದ ಸಾಗಿದೆ. ಮೃತದೇಹಗಳನ್ನು ಪಾಕಿಸ್ತಾನ ದೇಶಕ್ಕೆ ರವಾನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment