/newsfirstlive-kannada/media/post_attachments/wp-content/uploads/2024/07/DEEPIKA_DAS-1.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಗೆದಿದ್ದ ನಟಿ ದೀಪಿಕಾ ದಾಸ್ ಇತ್ತೀಚೆಗಷ್ಟೇ ಮದುವೆಯಾಗಿದ್ರು. ಮದುವೆ ಆಗಿದ್ದೇ ಆಗಿದ್ದು ಇವರು ದೇಶ, ವಿದೇಶಗಳನ್ನ ಸುತ್ತಾಡುತ್ತಿದ್ದಾರೆ. ಸದಾ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ದೀಪಿಕಾ ದಾಸ್ ಅವರು ಇದೀಗ ಮತ್ತೊಂದು ದೇಶಕ್ಕೆ ಟ್ರಿಪ್ ಹೋಗಿದ್ದಾರೆ.
ಸದ್ಯ ಈ ಸಂಬಂಧ ತಮ್ಮ ಇನ್​​ಸ್ಟಾ ಅಕೌಂಟ್​ನಲ್ಲಿ ಪೋಸ್ಟ್ ಶೇರ್ ಮಾಡಿರುವ ದೀಪಿಕಾ ದಾಸ್ ಅವರು, ಅಜರ್​ಬೈಜಾನ್​ನ ರಾಜಧಾನಿ ಬಾಕುವಿನ ಟ್ರಿಪ್​ನಲ್ಲಿದ್ದಾರೆ. ಇವರು ಇನ್​​ಸ್ಟಾದಲ್ಲಿ ಯಾವುದಾದರೂ ಪೋಸ್ಟ್ ಶೇರ್ ಮಾಡಿದರು ಎಂದರೆ, ಟ್ರಿಪ್​ಗೆ ವಿದೇಶಕ್ಕೆ ಹೋಗಿದ್ದಾರೆ ಅಂತಾನೆ ಅರ್ಥ. ಇವರನ್ನು ಫಾಲೋ ಮಾಡೋ ಜನರು ಕೂಡ ಕಡಿಮೆ ಏನು ಇಲ್ಲ. ಬರೋಬ್ಬರಿ 15 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.
View this post on Instagram
ನಟಿ ದೀಪಿಕಾ ದಾಸ್​ ಅಜರ್​ಬೈಜಾನ್​ನ ರಾಜಧಾನಿ ಬಾಕುವಿನ ಪ್ರದೇಶವೊಂದರಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ದೀಪಿಕಾ ದಾಸ್​ ಸಖತ್​ ಕ್ಯೂಟ್​ ಆಗಿ ಕಾಣಿಸಿದ್ದಾರೆ. ಆ ಲೊಕೇಷನ್​​ಗೆ ಕಾರಿನಲ್ಲಿ ಹೋಗಿರಬಹುದೆಂದು ಫೋಟೋ ನೋಡಿದರೆ ಹೇಳಬಹುದು. ಸದ್ಯ ನಟಿ ಶೇರ್ ಮಾಡಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿವೆ. ಸದ್ಯ ಇವರು ಪೋಸ್ಟ್ ಮಾಡಿರುವ ಪೋಟೋಗಳಿಗೆ ಕಮೆಂಟ್​​ಗಳು ಬರುತ್ತಿದ್ದು ವೆಂಕಟೇಶ್ ಎನ್ನುವರು ‘ಏನ್ ಮೇಡಂ ನೀವು ಒಂದೊಂದು ಇನ್​​ಸ್ಟಾ ಪೋಸ್ಟ್​​​ಗೂ ಒಂದೊಂದು ದೇಶದಲ್ಲಿ ಇರ್ತೀರ..!! ಲಕ್ಕಿ ನೀವು’ ಎಂದು ಹೇಳಿದ್ದಾರೆ. ಬ್ಯೂಟಿಫುಲ್, ಸೂಪರ್, ಏಂಜಲ್​ ಎಂದು ನೆಟ್ಟಿಗರು ಕಾಮೆಂಟ್ಸ್​ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ