newsfirstkannada.com

ಅಯ್ಯೋ.. ನಮ್ಮಿಬ್ಬರದ್ದು ದಿಢೀರ್‌ ಮದುವೆ ಅಲ್ಲ; ಕರಿಮಣಿ ಮಾಲೀಕನ ಗುಟ್ಟು ಬಿಚ್ಚಿಟ್ಟ ದೀಪಿಕಾ ದಾಸ್!

Share :

Published March 10, 2024 at 4:58pm

    ಬಹುಕಾಲದ ಗೆಳೆಯ ದೀಪಕ್‌ ಎಂಬುವವರ ಜೊತೆ ಮದುವೆಯಾದ ನಾಗಿಣಿ

    ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡಿದ್ದ ನಟಿ ದೀಪಿಕಾ ದಾಸ್‌

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು ದೀಪಿಕಾ ದಾಸ್​ ಫೋಟೋಸ್​

ಕಳೆದ ಮಾರ್ಚ್‌ 1ರಂದು ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 7 ಸ್ಪರ್ಧಿಯಾಗಿದ್ದ ದೀಪಿಕಾ ದಾಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತನ್ನ ಬಹುಕಾಲದ ಗೆಳೆಯ ದೀಪಕ್‌ ಜೊತೆ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡಿದ್ದರು. ತಮ್ಮ ಇನ್ ​ಸ್ಟಾಗ್ರಾಮ್​ ಖಾತೆಯಲ್ಲಿ ಮದುವೆ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು. ಈ ಫೋಟೋ ನೋಡಿದ ದೀಪಿಕಾ ದಾಸ್ ಮದುವೆ ಅವರ ಅಭಿಮಾನಿಗಳಿಗೆ ಸರ್‌ಪ್ರೈಸ್ ಆಗಿತ್ತು.

ಇದನ್ನು ಓದಿ: VIDEO: ಬಿಗ್‌ಬಾಸ್ ಬೆಡಗಿ ದೀಪಿಕಾ ದಾಸ್ ಅದ್ಧೂರಿ ಆರತಕ್ಷತೆ, ಬೀಗರೂಟ.. ಯಾರೆಲ್ಲಾ ಬಂದಿದ್ರು?

ಇದೀಗ ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡ ನಟಿ ದೀಪಿಕಾ ದಾಸ್‌ ಬೆಂಗಳೂರಿನಲ್ಲಿ ಆರತಕ್ಷತೆ ಮತ್ತು ಬೀಗರೂಟ ಏರ್ಪಡಿಸಿದ್ದರು. ದೀಪಿಕಾ ದಾಸ್ ಮದುವೆ ಸಂಭ್ರಮದಲ್ಲಿ ಅವರ ಕುಟುಂಬಸ್ಥರು ಹಾಗೂ ಗೆಳೆಯರು ಭಾಗಿಯಾಗಿದ್ದಾರೆ. ದೀಪಿಕಾ ದಾಸ್‌ ಮದುವೆ ಔತಣಕೂಟಕ್ಕೆ ಸಿನಿಮಾ ಇಂಡಸ್ಟ್ರಿಯ ಗೆಳೆಯರನ್ನು ಆಹ್ವಾನ ನೀಡಲಾಗಿದೆ. ಇಂದು ಆರತಕ್ಷತೆ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆದಿದೆ.

ಇನ್ನೂ, ಈ ಸರ್‌ಪ್ರೈಸ್ ಮದುವೆ ಬಗ್ಗೆ ನಟಿ ದೀಪಿಕಾ ದಾಸ್​ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ನಮ್ಮದು ದಿಢೀರ್ ಮದುವೆ ಅಲ್ಲ. ಸಾಕಷ್ಟು ಪ್ಲಾನ್ ಮಾಡಿಕೊಂಡೇ ಮದುವೆಯಾಗಿದ್ದೇವೆ. ಗೋವಾದಲ್ಲೇ ಮದುವೆಯಾಗುವ ಆಗೋ ಕನಸು ಇತ್ತು. ಹೀಗಾಗಿ ನನ್ನ ಆಸೆಯಂತೆ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡೆವು. ಎಲ್ಲೂ ಕೂಡ ಗುಟ್ಟಾಗಿ ನಾವು ಮದುವೆಯಾಗಿಲ್ಲ. ನನಗೆ ದೀಪಕ್​ ಅವರು 4 ವರ್ಷದಿಂದ ಪರಿಚಯ ಇದೆ. ಬಳಿಕ 1 ವರ್ಷ ಡೇಟ್​ ಮಾಡಿದ್ದೇವು. ನಂತರ ನಾವು ಮದುವೆಗೆ ಸಿದ್ಧತೆ ನಡೆಸಿದ್ದೇವು. ಹೀಗಾಗಿ ನನ್ನ ಆಸೆಯಂತೆ ಗೋವಾದಲ್ಲಿ  ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡಿದ್ದೇವೆ. ಈಗ ನಮ್ಮ ಮದುವೆಯ ಆರತಕ್ಷತೆ ಮತ್ತು ಬೀಗರೂಟ ಏರ್ಪಡಿಸಿದ್ದೇವೆ. ಆಪ್ತರು, ಹಿತೈಷಿಗಳು, ಫ್ಯಾನ್ಸ್ ಹಾಗೂ ಇಂಡಸ್ಟ್ರಿ ದಶಕದಿಂದ ನನ್ನನ್ನು ಹರಸಿ, ಹಾರೈಸಿದ್ದೀರಿ ನಿಮ್ಮ ಪ್ರೀತಿ,‌ ಆಶೀರ್ವಾದ ಸದಾ ಇರಲಿ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ.. ನಮ್ಮಿಬ್ಬರದ್ದು ದಿಢೀರ್‌ ಮದುವೆ ಅಲ್ಲ; ಕರಿಮಣಿ ಮಾಲೀಕನ ಗುಟ್ಟು ಬಿಚ್ಚಿಟ್ಟ ದೀಪಿಕಾ ದಾಸ್!

https://newsfirstlive.com/wp-content/uploads/2024/03/deepika-das-5-1.jpg

Load More