newsfirstkannada.com

ಕೊಳವೆ ಬಾವಿಯಲ್ಲಿ ಬಿದ್ದಿದ್ದ ಸಾತ್ವಿಕ್‌ ಸುರಕ್ಷಿತ.. ಬಾಲಕ ಬದುಕುಳಿಯುವ ಪ್ರಾರ್ಥನೆಗೆ ಫಲ

Share :

Published April 4, 2024 at 1:56pm

  ಕೊನೆಗೂ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್ ರಕ್ಷಣೆ

  ಲಚ್ಯಾನ ಗ್ರಾಮದ ತೋಟದಲ್ಲಿ ನಿನ್ನೆ ಸಂಜೆಯಿಂದ ನಿರಂತರ ರಕ್ಷಣಾ ಕಾರ್ಯ

  ಕೊಳವೆ ಬಾವಿಯಲ್ಲಿ ಬಿದ್ದ ಸಾತ್ವಿಕ ಸಾವನ್ನೇ ಗೆದ್ದು ಬಂದ ಮೇಲೆ ಸಂಭ್ರಮ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಬಾಲಕ ಸಾತ್ವಿಕ್ ರಕ್ಷಣಾ ಕಾರ್ಯಕ್ಕೆ ಕೊನೆಗೂ ಯಶಸ್ಸು ಸಿಕ್ಕಿದೆ. ಕೊಳವೆ ಬಾವಿಯಲ್ಲಿ ಸಾತ್ವಿಕ್ ಅಳುವಿನ ಧ್ವನಿ ಕೇಳಿ ಬಂದ ಬಳಿಕ ಬಾಲಕನ ತಲೆಯ ದೃಶ್ಯವನ್ನು ಸೆರೆ ಹಿಡಿಯಲಾಗಿತ್ತು. ಇದೀಗ ಕೊಳವೆ ಬಾವಿಯಿಂದ ಮಗುವನ್ನ ಜೀವಂತವಾಗಿ ಹೊರಗಡೆ ತರಲಾಗಿದೆ.

ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ನಿನ್ನೆ ಸಂಜೆಯಿಂದ ನಿರಂತರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿತ್ತು. ನಿರಂತರ 12 ಗಂಟೆಯ ಡ್ರಿಲ್ಲಿಂಗ್ ಕಾರ್ಯದ ಬಳಿಕ ಕೊಳವೆ ಬಾವಿಯಲ್ಲಿ ಮಗು ಅಳುವ ಶಬ್ಧ ಕೇಳಿತ್ತು. ಇದೀಗ ಬಾಲಕನ ತಲೆ ಕಾಣುವ ಮೂಲಕ ಸಾತ್ವಿಕ್ ಆರೋಗ್ಯವಾಗಿದ್ದಾನೆ ಅನ್ನೋದು ಖಚಿತವಾಗಿದೆ. ರಕ್ಷಣಾ ಕಾರ್ಯದಲ್ಲಿ ನಿರತರವಾಗಿರುವ ಸಿಬ್ಬಂದಿಗಳು ನಮ್ಮ ಪರಿಶ್ರಮಕ್ಕೆ ಜಯ ಸಿಗುತ್ತಿದ್ದಂತೆ ಸಂಭ್ರಮ ಆಚರಿಸಿದ್ದಾರೆ.

ಇದನ್ನೂ ಓದಿ: BIG BREAKING: ಸಾವು ಗೆದ್ದು ಬಂದ ಸಾತ್ವಿಕ್; ಸತತ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿ..!

ಲಚ್ಯಾನ ಗ್ರಾಮದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯ ಇದೀಗ ಮುಕ್ತಾಯಗೊಂಡಿದೆ. ಕೊಳವೆ ಬಾವಿಯಲ್ಲಿ ಬಿದ್ದ ಸಾತ್ವಿಕ ಸುರಕ್ಷಿತವಾಗಿ ಮೇಲೆ ಬಂದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದ ಮನೆಗೂ ಕೊಳವೆ ಬಾವಿಗೂ ಅಂದಾಜು 80ಮೀಟರ್ ದೂರವಿದೆ. ಜೀವಂತವಾಗಿ ಮಗುವನ್ನು ಹೊರ ತೆಗೆಯಲು ಸಾಕಷ್ಟು ಶ್ರಮವಹಿಸಲಾಗುತ್ತಿದೆ. ಈ ಘಟನೆಗೆ ಆಘಾತ ವ್ಯಕ್ತಪಡಿಸಿರುವ ಕೋಟ್ಯಾಂತರ ಜನರು ಸಾತ್ವಿಕ್ ಸುರಕ್ಷಿತವಾಗಿ ಬರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಈ ಪ್ರಾರ್ಥನೆಯ ಫಲವಾಗಿ ರಕ್ಷಣಾ ಕಾರ್ಯದಲ್ಲಿ ಅತಿ ದೊಡ್ಡ ಯಶಸ್ಸು ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಳವೆ ಬಾವಿಯಲ್ಲಿ ಬಿದ್ದಿದ್ದ ಸಾತ್ವಿಕ್‌ ಸುರಕ್ಷಿತ.. ಬಾಲಕ ಬದುಕುಳಿಯುವ ಪ್ರಾರ್ಥನೆಗೆ ಫಲ

https://newsfirstlive.com/wp-content/uploads/2024/04/VIJ_BOY.jpg

Load More