newsfirstkannada.com

ರೋಚಕ ಪಂದ್ಯದಲ್ಲಿ ಹೈದರಾಬಾದ್​​​ಗೆ ಭರ್ಜರಿ ಗೆಲುವು; ಡೆಲ್ಲಿ ಸೋಲಿಗೆ ಪಂತ್ ಆ​ ನಿರ್ಧಾರವೇ ಕಾರಣವೇ?

Share :

Published April 20, 2024 at 11:12pm

    ಇಂದು ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಹೈವೋಲ್ಟೇಜ್​ ಮ್ಯಾಚ್​​

    ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ​​ ಹೈದರಾಬಾದ್​​ ಬೃಹತ್​​ ಟಾರ್ಗೆಟ್​​​

    ಚೇಸ್​ ಮಾಡಲಾಗದೆ ಹೈದರಾಬಾದ್ ವಿರುದ್ಧ ಸೋತ ಡೆಲ್ಲಿ ಕ್ಯಾಪಿಟಲ್ಸ್​​!

ಇಂದು ಅರುಣ್​ ಜೇಟ್ಲಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋತಿದೆ.

ಇನ್ನು, ಹೈದರಾಬಾದ್​ ನೀಡಿದ 267 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​ ಪರ ಅಬ್ಬರದ ಬ್ಯಾಟಿಂಗ್​ ಮಾಡಿದ ಜೇಕ್ ಫ್ರೇಸರ್-ಮೆಗರ್ಕ್ ಕೇವಲ 18 ಬಾಲ್​ನಲ್ಲಿ 65 ರನ್​ ಸಿಡಿಸಿದ್ರು. ಅದರಲ್ಲೂ ಒಂದೇ ಓವರ್​ನಲ್ಲಿ 3 ಸಿಕ್ಸರ್​​, 3 ಫೋರ್​ ಸಿಡಿಸಿ 30 ರನ್​ ಬಾರಿಸಿದ್ರು.

ಹೈದರಾಬಾದ್​ ಬೌಲರ್​ಗಳ ಬೆಂಡೆತ್ತಿದ ಜೇಕ್ ಫ್ರೇಸರ್-ಮೆಗರ್ಕ್ ಬರೋಬ್ಬರಿ 7 ಸಿಕ್ಸರ್​​, 5 ಫೋರ್​ ಸಿಡಿಸಿದ್ರು. ಇವರ ಸ್ಟ್ರೈಕ್​ ರೇಟ್​ 360ಕ್ಕೂ ಹೆಚ್ಚು ಇತ್ತು. ಇವರ ಬಳಿಕ ಬಂದ ಅಭಿಷೇಕ್​ ಕೇವಲ 22 ಬಾಲ್​ನಲ್ಲಿ 44 ರನ್​ ಸಿಡಿಸಿದ್ರು. ಪಂತ್​​ ಏಕಾಂಗಿ ಹೋರಾಟ ಮಾಡಲು ಯತ್ನಿಸಿದರಾದ್ರೂ ಅಗ್ರೆಸ್ಸಿವ್​ ಆಗಿ ಬ್ಯಾಟಿಂಗ್​ ಮಾಡಲು ಆಗಲಿಲ್ಲ. ಹಾಗಾಗಿ ಕೇವಲ 44 ರನ್​ ಸಿಡಿಸಿದ್ರೂ ಸೋಲಬೇಕಾಯ್ತು. ಡೆಲ್ಲಿ 19.1 ಓವರ್​ಗಳಲ್ಲಿ 199 ರನ್​ಗಳಿಗೆ ಆಲೌಟ್​ ಆಗಿದೆ​.

ಮೊದಲು ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಪ್ಟನ್​​ ರಿಷಬ್​ ಪಂತ್​​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ರು. ಹಾಗಾಗಿ ಸನ್​ರೈಸರ್ಸ್​ ಹೈದರಾಬಾದ್​ ಟೀಮ್​ ಮೊದಲು ಬ್ಯಾಟಿಂಗ್​ ಮಾಡಿತ್ತು.

ಹೈದರಾಬಾದ್​ ಪರ ಓಪನರ್​ ಆಗಿ ಬಂದ ಅಭಿಷೇಕ್​ ಶರ್ಮಾ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 12 ಬಾಲ್​ನಲ್ಲಿ 6 ಭರ್ಜರಿ ಸಿಕ್ಸರ್​​​, 2 ಫೋರ್​ ಸಮೇತ 46 ರನ್​ ಚಚ್ಚಿದ್ರು. ಈ ಮೂಲಕ ಆರಂಭದಲ್ಲೇ ಸನ್​ರೈಸರ್ಸ್​ ಹೈದರಾಬಾದ್​ ಬೃಹತ್​​ ಮೊತ್ತ ಕಲೆ ಹಾಕಲು ಸಹಾಯ ಮಾಡಿದ್ರು.

ಇನ್ನೊಂದೆಡೆ ಟ್ರಾವಿಸ್​​​​ ಹೆಡ್​​​ ಕೂಡ ಅಬ್ಬರಿಸಿದ್ರು. ಕೇವಲ 32 ಬಾಲ್​ನಲ್ಲಿ 6 ಭರ್ಜರಿ ಸಿಕ್ಸರ್​​​, 11 ಫೋರ್​ ಸಮೇತ 89 ರನ್​ ಚಚ್ಚಿದ್ರು. ಈ ಮೂಲಕ ಹೈದರಾಬಾದ್​ ಪರ ದಾಖಲೆ ಬರೆದ್ರು.

ಇವರಿಗೆ ಸಾಥ್​ ಕೊಟ್ಟ ಆರ್​​ಸಿಬಿ ಮಾಜಿ ಪ್ಲೇಯರ್​ ಶಾಬಾಜ್​ 5 ಸಿಕ್ಸರ್​​, 2 ಫೋರ್​​ನೊಂದಿಗೆ 59 ರನ್​​ ಬಾರಿಸಿದ್ರು. ಕ್ಲಾಸೇನ್​​ 13, ನಿತೀಶ್​ ರೆಡ್ಡಿ 37, ಅಬ್ದುಲ್​ ಸಮದ್​​ 13 ರನ್​ ಗಳಿಸಿದ್ದು, ಇವರ ಸಹಾಯದಿಂದ ಹೈದರಾಬಾದ್​ 20 ಓವರ್​ನಲ್ಲಿ 266 ರನ್​ ಪೇರಿಸಿತ್ತು.

ಇದನ್ನೂ ಓದಿ: RCB ಮಾಜಿ ಪ್ಲೇಯರ್​ ಶಾಬಾಜ್​​​, ಹೆಡ್​ ಭರ್ಜರಿ ಬ್ಯಾಟಿಂಗ್​​; ಡೆಲ್ಲಿಗೆ SRH​​ 267 ರನ್​ ಬಿಗ್​ ಟಾರ್ಗೆಟ್​​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಚಕ ಪಂದ್ಯದಲ್ಲಿ ಹೈದರಾಬಾದ್​​​ಗೆ ಭರ್ಜರಿ ಗೆಲುವು; ಡೆಲ್ಲಿ ಸೋಲಿಗೆ ಪಂತ್ ಆ​ ನಿರ್ಧಾರವೇ ಕಾರಣವೇ?

https://newsfirstlive.com/wp-content/uploads/2024/04/Pant_Batting.jpg

Load More