newsfirstkannada.com

ಬೆಂಗಳೂರಿಗೆ ಪಂತ್​​, ರಾಹುಲ್​ ಬಿಗ್​ ಶಾಕ್​​.. ಈ ತಂಡದ ಕೈಯಲ್ಲಿ ಆರ್​​ಸಿಬಿ ಪ್ಲೇ ಆಫ್​ ಭವಿಷ್ಯ

Share :

Published May 14, 2024 at 7:58pm

    ಇಂದು ಲಕ್ನೋ, ಡೆಲ್ಲಿ ಕ್ಯಾಪಿಟಲ್ಸ್​ ಟೀಮ್​​​ ಮಧ್ಯೆ ಹೈವೋಲ್ಟೇಜ್​ ಪಂದ್ಯ

    ಪ್ಲೇ ಆಫ್​ಗೆ ಹೋಗಲು ಎರಡು ತಂಡಗಳಿಗೂ ಇಂದಿನ ಪಂದ್ಯ ಬಹಳ ಮುಖ್ಯ

    ಡೆಲ್ಲಿ ಕ್ಯಾಪಿಟಲ್ಸ್​​​ ಗೆದ್ದರೆ ಆರ್​​ಸಿಬಿ ಟೀಮ್​​ಗೆ ಪ್ಲೇ ಆಫ್​​ ಹಾದಿ ಬಹಳ ಸುಲಭ!

ಇಂದು ಅರುಣ್​ ಜೇಟ್ಲಿ ಕ್ರಿಕೆಟ್​​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​​ ಲೀಗ್​ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್​​ ಜೈಂಟ್ಸ್​​, ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಮುಖಾಮುಖಿ ಆಗಿವೆ.

ಟಾಸ್​ ಗೆದ್ದ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಕ್ಯಾಪ್ಟನ್​​​ ಕೆ.ಎಲ್​ ರಾಹುಲ್​ ಫೀಲ್ಡಿಂಗ್​​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಡೆಲ್ಲಿ ಕ್ಯಾಪಿಟಲ್ಸ್​ ಟೀಮ್​​​ ಫಸ್ಟ್​ ಬ್ಯಾಟಿಂಗ್​ ಮಾಡಲಿದೆ. ಪ್ಲೇ ಆಫ್​ಗೆ ಹೋಗಲು ಎರಡು ತಂಡಗಳಿಗೂ ಈ ಮ್ಯಾಚ್​​ ಗೆಲ್ಲೋದು ಅನಿವಾರ್ಯತೆ ಆಗಿದೆ.

ಇನ್ನು, ಪ್ಲೇ ಆಫ್​ಗಾಗಿ ಡೆಲ್ಲಿ ಕ್ಯಾಪಿಟಲ್ಸ್​​ ಲಕ್ನೋ ವಿರುದ್ಧ ಭಾರೀ ರನ್​ಗಳಿಂದ ಗೆಲ್ಲಲೇಬೇಕಿದೆ. ಇನ್ನೊಂದೆಡೆ ಲಕ್ನೋ ಈ ಮ್ಯಾಚ್​ ಗೆದ್ದರೆ ಸಾಕು ಪ್ಲೇ ಆಫ್​ ರೇಸ್​ನಲ್ಲಿ ಉಳಿಯಲಿದೆ. ಡೆಲ್ಲಿ ಕ್ಯಾಪಿಟಲ್ಸ್​​ ಮತ್ತು ಲಕ್ನೋ ಟೀಮ್​ ತಲಾ 12 ಅಂಕದೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಕ್ರಮವಾಗಿ 6 ಮತ್ತು 7ನೇ ಸ್ಥಾನದಲ್ಲಿವೆ. ಆರ್​​ಸಿಬಿ ಪ್ಲೇ ಆಫ್​ ಭವಿಷ್ಯ ಪಂತ್​ ಪಡೆ ಕೈಯಲ್ಲಿದೆ.

ಉಭಯ ತಂಡಗಳ ಪ್ಲೇಯಿಂಗ್​ ಎಲೆವೆನ್​​ ಹೀಗಿದೆ..!

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಅಭಿಷೇಕ್ ಪೊರೆಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಶಾಯ್ ಹೋಪ್, ರಿಷಭ್ ಪಂತ್ (C/WK), ಟ್ರಿಸ್ಟಾನ್ ಸ್ಟಬ್ಸ್, ಅಕ್ಸರ್ ಪಟೇಲ್, ಗುಲ್ಬದಿನ್ ನೈಬ್, ರಸಿಖ್ ದಾರ್, ಮುಖೇಶ್ ಕುಮಾರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್.

ಲಕ್ನೋ ಸೂಪರ್ ಜೇಂಟ್ಸ್ ತಂಡ: ಕೆಎಲ್ ರಾಹುಲ್ (ಸಿ), ಕ್ವಿಂಟನ್ ಡಿ ಕಾಕ್ (ಡಬ್ಲ್ಯುಕೆ), ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ಅರ್ಷದ್ ಖಾನ್, ಯುಧ್ವೀರ್ ಸಿಂಗ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಮೊಹ್ಸಿನ್ ಖಾನ್.

ಇದನ್ನೂ ಓದಿ: VIDEO: ವಿಲ್​​ ಜಾಕ್ಸ್​, ಟೋಪ್ಲೆಯನ್ನು ತಬ್ಬಿ ಗಳಗಳನೇ ಕಣ್ಣೀರಿಟ್ಟ ಆರ್​​ಸಿಬಿ ತಂಡದ ಆಟಗಾರರು!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬೆಂಗಳೂರಿಗೆ ಪಂತ್​​, ರಾಹುಲ್​ ಬಿಗ್​ ಶಾಕ್​​.. ಈ ತಂಡದ ಕೈಯಲ್ಲಿ ಆರ್​​ಸಿಬಿ ಪ್ಲೇ ಆಫ್​ ಭವಿಷ್ಯ

https://newsfirstlive.com/wp-content/uploads/2024/05/RCB-vs-DC.jpg

Load More