/newsfirstlive-kannada/media/post_attachments/wp-content/uploads/2024/05/RCB-37.jpg)
ನಿನ್ನೆ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 2024ರ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಜಯ ಗಳಿಸಿದೆ. ಟಾಸ್ ಗೆದ್ದ ಗೆದ್ದ ಲಕ್ನೋ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.
ಮೊದಲು ಬ್ಯಾಟ್​ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 208 ರನ್‌ಗಳಿಸಿತು. ಈ ಗುರಿ ಬೆನ್ನತ್ತಲಾಗದೇ ಎಲ್‌ಎಸ್‌ಜಿ ಸೋಲೊಪ್ಪಿಕೊಂಡಿದ್ದು, 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 189 ರನ್‌ಗಳಿಸಿತು. ಇನ್ನು ಎಲ್​ಎಸ್​ಜಿ ಸೋಲಿನೊಂದಿಗೆ ಆರ್​ಸಿಬಿ ಫ್ಲೇಆಪ್​ ಹಾದಿ ಮತ್ತಷ್ಟು ಸುಲಭವಾಗಿದೆ. ಆರ್​ಸಿಬಿ ಪ್ಲೇ ಆಫ್​ಗೆ ಹೋಗಬೇಕು ಅಂದರೆ ನಿನ್ನೆಯ ಪಂದ್ಯದಲ್ಲಿ ಎಲ್​ಎಸ್​​ಜಿ ಸೋಲಬೇಕಿತ್ತು. ಆರ್​ಸಿಬಿ ಅಭಿಮಾನಿಗಳು ಅಂದುಕೊಂಡಂತೆಯೇ ನಡೆಯುತ್ತಿದ್ದು, ಲಕ್ ಬದಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ:ಹೊಸ ಕೋಚ್ ಹುಡುಕಾಟದಲ್ಲಿ ಬಿಸಿಸಿಐ.. ಭಾರೀ ಷರತ್ತು ವಿಧಿಸಿದ ಶ್ರೀಮಂತ ಕ್ರಿಕೆಟ್ ಮಂಡಳಿ\
/newsfirstlive-kannada/media/post_attachments/wp-content/uploads/2024/05/PANT-KL-RAHUL.jpg)
ಇಂದು ಗುವಾಹಟಿಯ ಬರ್ಸಾಪರಾ ಸ್ಟೇಡಿಯಮ್​ನಲ್ಲಿ ಐಪಿಎಲ್​ 2024ರ 65ನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಸದ್ಯ ಪಾಯಿಂಟ್​ ಪಟ್ಟಿಯಲ್ಲಿ ರಾಜಸ್ಥಾನ್​ ತಂಡ 2 ನೇ ಸ್ಥಾನದಲ್ಲಿದೆ. ಇತ್ತ ಪಂಜಾಬ್ ಕಿಂಗ್ಸ್ ತಂಡ ಕೊನೆಯ ಸ್ಥಾನದಲ್ಲಿದ್ದು, ಈ ಪಂದ್ಯ ಎರಡೂ ತಂಡಗಳಿಗೂ ಮಹತ್ವದ್ದಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us