newsfirstkannada.com

ಹೀಗಾದರೆ.. ಆರ್​ಸಿಬಿ, ಸಿಎಸ್​ಕೆ ಎರಡೂ ತಂಡಗಳು ಪ್ಲೇ ಆಫ್​ಗೆ ಹೋಗುತ್ತವೆ..! ಅಚ್ಚರಿ ಪಡಬೇಕಾಗಿಲ್ಲ..!​

Share :

Published May 14, 2024 at 1:18pm

    ಐಪಿಎಲ್​ ಪ್ಲೇ ಆಫ್​ ರೇಸ್ ತೀವ್ರ ಕುತೂಹಲ ಮೂಡಿಸಿದೆ

    ಆರ್​ಸಿಬಿ, ಸಿಎಸ್​ಕೆ ಎರಡೂ ತಂಡಕ್ಕೂ ಇದೆ ದೊಡ್ಡ ಚಾನ್ಸ್​

    ಮೇ 26 ರಂದು ಐಪಿಎಲ್ ಹಬ್ಬಕ್ಕೆ ತೆರೆ ಬೀಳಲಿದೆ

ಐಪಿಎಲ್​​ ಪ್ಲೇ-ಆಫ್ ಹೋರಾಟ ಸಿಕ್ಕಾಪಟ್ಟೆ ಟಫ್ ಆಗಿದೆ. ಪ್ಲೇ-ಆಫ್​ನ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಯಾವ ತಂಡಗಳು ಬರುತ್ತವೇ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ ಇಷ್ಟೇ ಎಲ್ಲಾ ತಂಡಗಳ ಜಿದ್ದಾಜಿದ್ದಿನ ಹೋರಾಟ.

ಸದ್ಯ ಚರ್ಚೆ ಆಗ್ತಿರೋದು ಪ್ಲೇ-ಆಫ್​ನ ನಾಲ್ಕನೇ ಸ್ಥಾನದ ಬಗ್ಗೆ. ಅದು ಆರ್​ಸಿಬಿ ವರ್ಸಸ್ ಸಿಎಸ್​​ಕೆ ನಡುವಿನ ಪಂದ್ಯ. ಆದರೆ ಮೂರನೇ ಸ್ಥಾನಕ್ಕೆ ಹೋಗಲಿದೆ ಎನ್ನಲಾಗುತ್ತಿರುವ ಸನ್​ ರೈಸರ್ಸ್ ಹೈದರಾಬಾದ್​ ತಂಡದ ಪ್ಲೇ-ಆಫ್ ಹಾದಿ ಕೂಡ ಸುಗಮವಾಗಿಲ್ಲ. ಅದೃಷ್ಟ ಕೈಕೊಟ್ಟರೆ ಹೈದರಾಬಾದ್ ಪ್ಲೇ-ಆಫ್ ಪ್ರವೇಶ ಮಾಡದೇ ಟೂರ್ನಿಯಿಂದಲೇ ಹೊರ ಬೀಳಬಹುದು.

ಪ್ಲೇ-ಆಫ್ ಹಾದಿ ರೋಚಕ

ಯಾಕೆಂದರೆ.. ಈಗಾಗಲೇ 12 ಪಂದ್ಯಗಳನ್ನು ಆಡಿರುವ ಹೈದರಾಬಾದ್​ 7 ರಲ್ಲಿ ಗೆದ್ದು, +0.406 ನೆಟ್​ ರನ್​ರೇಟ್​​ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಹೈದರಾಬಾದ್​ಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಮೇ 16 ರಂದು ಗುಜರಾತ್ ಟೈಟನ್ಸ್ ಹಾಗೂ ಮೇ 19 ರಂದು ಪಂಜಾಬ್ ವಿರುದ್ಧ ಸೆಣಸಾಟ ನಡೆಸಲಿದೆ. ಒಂದು ವೇಳೆ ಈ ಎರಡೂ ಪಂದ್ಯಗಳಲ್ಲಿ ಸನ್ ರೈಸರ್ಸ್​ ಹೈದರಾಬಾದ್ ಸೋತರೆ ಪ್ಲೇ-ಆಫ್ ಪ್ರವೇಶ ಮಾಡೋದು ಕಷ್ಟವಾಗಬಹುದು.

ಇದನ್ನೂ ಓದಿ:CSK, RCB ಅಭಿಮಾನಿಗಳಿಗೆ ಇದು ಕೆಟ್ಟ ಸುದ್ದಿ.. ಏನದು..?

ಅದು ಹೇಗೆ ಎಂದರೆ ಶನಿವಾರ ನಡೆಯುವ ಸಿಎಸ್​ಕೆ ಮತ್ತು ಆರ್​ಸಿಬಿ ನಡುವಿನ ಪಂದ್ಯದಲ್ಲಿ ಬೆಂಗಳೂರು ಗೆದ್ದರೆ, ಹೈದರಾಬಾದ್ ಮನೆಗೆ ಹೋಗಲಿದೆ. ಆರ್​ಸಿಬಿ ಸಿಎಸ್​ಕೆ ವಿರುದ್ಧ ಭಾರೀ ಅಂತರದಿಂದ ಗೆದ್ದರೆ, ಸಹಜವಾಗಿಯೇ ನೆಟ್​ ರನ್​ ರೇಟ್ ಹೆಚ್ಚಾಗಲಿದೆ. ಈಗಾಗಲೇ + 0.387 ನೆಟ್​ ರನ್​ ರೇಟ್ ಹೊಂದಿದೆ. ಇತ್ತ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಸಿಎಸ್​ಕೆ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ. ಆದರೂ ಸಿಎಸ್​ಕೆ ಪ್ಲೇ-ಆಫ್ರ ಪ್ರವೇಶ ಮಾಡಲಿದೆ. ಭಾರೀ ಅಂತರದಲ್ಲಿ ಗೆಲ್ಲದಿದ್ದರೆ ಆರ್​ಸಿಬಿ ನಾಲ್ಕನೇ ಸ್ಥಾನ ಪಡೆದು ಪ್ಲೇ ಆಫ್ ಪ್ರವೇಶ ಮಾಡಲಿದೆ. ಇನ್ನು ಎಲ್​ಎಸ್​ಜಿ ಕೂಡ ಪ್ಲೇ-ಆಫ್ ಕನಸು ಕಾಣುತ್ತಿದೆ. ಎಲ್​ಎಸ್​ಜಿ ಮುಂದೆ ಎರಡು ಪಂದ್ಯಗಳು ಬಾಕಿ ಇವೆ. ಈ ಎರಡೂ ಪಂದ್ಯಗಳಲ್ಲೂ ಲಕ್ನೋ ಸೋತರೆ ಆರ್​ಸಿಬಿ ಮತ್ತು ಸಿಎಸ್​ಕೆ ಪ್ಲೇ-ಆಫ್ ಪ್ರವೇಶಕ್ಕೆ ಅವಕಾಶ ಇದೆ. ​

ಇದನ್ನೂ ಓದಿ:ಪ್ಲೇ ಆಫ್​ಗೆ ಹೋಗಲು ಸುವರ್ಣ ಅವಕಾಶ.. CSK ವಿರುದ್ಧ ಆರ್​ಸಿಬಿ ಎಷ್ಟು ರನ್​ಗಳಿಂದ ಗೆಲ್ಲಬೇಕು?

ಇದನ್ನೂ ಓದಿ:ಮೇ 18.. ಆರ್​​ಸಿಬಿ ಟಾರ್ಗೆಟ್​ ಕೂಡ 18..! ಆ 18ರಲ್ಲಿ ಅಡಗಿದೆ ಆರ್​​ಸಿಬಿ ಭವಿಷ್ಯ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಹೀಗಾದರೆ.. ಆರ್​ಸಿಬಿ, ಸಿಎಸ್​ಕೆ ಎರಡೂ ತಂಡಗಳು ಪ್ಲೇ ಆಫ್​ಗೆ ಹೋಗುತ್ತವೆ..! ಅಚ್ಚರಿ ಪಡಬೇಕಾಗಿಲ್ಲ..!​

https://newsfirstlive.com/wp-content/uploads/2024/05/RCB-CSK-1.jpg

Load More