newsfirstkannada.com

ಧೋನಿ ಭರ್ಜರಿ ಬ್ಯಾಟಿಂಗ್​​ ಮಾಡಿದ್ರೂ ಹೀನಾಯ ಸೋಲು; ಪಂತ್​ ಪಡೆಗೆ ಮೊದಲ ಗೆಲುವು

Share :

Published March 31, 2024 at 11:32pm

Update March 31, 2024 at 11:33pm

    2024ರ ಐಪಿಎಲ್​ನಲ್ಲಿ ಮೊದಲ ಗೆಲುವು ಸಾಧಿಸಿದ ಡೆಲ್ಲಿ

    ಚೆನ್ನೈ ಸೂಪರ್​​ ಕಿಂಗ್ಸ್​ ವಿರುದ್ಧ ಡೆಲ್ಲಿಗೆ ಭರ್ಜರಿ ಗೆಲುವು!

    ಸಿಎಸ್​ಕೆ ಮಾಜಿ ಕ್ಯಾಪ್ಟನ್​​ ಧೋನಿ ಭರ್ಜರಿ ಬ್ಯಾಟಿಂಗ್​​

ಇಂದು ಡಾ. ವೈಎಸ್​​ ರಾಜಶೇಖರ್​​ ರೆಡ್ಡಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿದೆ.

ಬ್ಯಾಕ್​ ಟು ಬ್ಯಾಕ್​​ 2 ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್​​ ಚೆನ್ನೈ ವಿರುದ್ಧ ಮೊದಲ ಪಂದ್ಯ ಗೆದ್ದಿದೆ. 171 ರನ್​ಗೆ ಚೆನ್ನೈ ತಂಡವನ್ನು ರಿಷಬ್​ ಪಂತ್​ ನಾಯಕತ್ವದ ಡೆಲ್ಲಿ ಟೀಮ್​ ಕಟ್ಟಿ ಹಾಕಿದೆ.

ಡೆಲ್ಲಿ ನೀಡಿದ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಚೆನ್ನೈ ತಂಡದ ಪರ ರಹಾನೆ 45, ಮಿಚೆಲ್​​ 34, ಶಿವಂ ದುಬೆ 18, ಜಡೇಜಾ 21, ಧೋನಿ 37 ರನ್​ ಗಳಿಸಿದ್ರೂ ಸೋತರು.

ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿದ ಡೆಲ್ಲಿ ನಿಗದಿತ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್​ ಕಲೆ ಹಾಕಿತ್ತು. ಪೃಥ್ವಿ ಶಾ 27 ಬಾಲ್​ನಲ್ಲಿ 2 ಸಿಕ್ಸರ್​​, 4 ಫೋರ್​ ಸಮೇತ 43 ರನ್​ ಸಿಡಿಸಿದ್ರು. ವಾರ್ನರ್​​ 3 ಸಿಕ್ಸರ್​​, 5 ಫೋರ್​​ ಸಮೇತ 52 ರನ್​ ಚಚ್ಚಿದ್ರು.

ಒಂದೂವರೆ ವರ್ಷದ ಹಿಂದೆ ಸಂಭವಿಸಿದ ಭೀಕರ ಕಾರು ಅಪಘಾತದ ಬಳಿಕ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯಾವಳಿ ಆಡುತ್ತಿರೋ ರಿಷಬ್ ಪಂತ್ ಮೊದಲ ಬಾರಿಗೆ ಭರ್ಜರಿ ಕಮ್​ಬ್ಯಾಕ್​ ಮಾಡಿದ್ರು. ತನ್ನ ಅದ್ಭುತ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿದ್ರು. ಇವರ ಸ್ಟ್ರೈಕ್​ ರೇಟ್​ ಬರೋಬ್ಬರಿ 160 ಇತ್ತು.

ಇನ್ನು, ತಾನು ಆಡಿದ ಕೇವಲ 32 ಎಸೆತಗಳಲ್ಲಿ ಪಂತ್​ ಬರೋಬ್ಬರಿ 51 ರನ್​ಗಳು ಸಿಡಿಸಿದ್ರು. ಇದರಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸೇರಿವೆ. ವಿಶೇಷ ಎಂದರೆ ಪಂತ್​ ಮೊದಲ 23 ಬಾಲ್​​ಗಳಲ್ಲಿ 23 ರನ್‌ ಕಲೆ ಹಾಕಿದ್ದರು. ಇದಾದ ಬಳಿಕ ಅದ್ಭುತ ಬ್ಯಾಟಿಂಗ್ ಮಾಡಿ ಮುಂದಿನ 9 ಎಸೆತಗಳಲ್ಲಿ 28 ರನ್ ಸಿಡಿಸಿದ್ರು. ಹಾಗೆಯೇ ಮಾರ್ಷ್​​ 18, ಅಕ್ಷರ್​​ 7 ರನ್​ ಗಳಿಸಿದ್ದರು.

ಇದನ್ನೂ ಓದಿ: ಸಖತ್​ ಟ್ರೆಂಡ್​ ಆಗ್ತಿದೆ ‘click here’ ಹ್ಯಾಷ್‌ ಟ್ಯಾಗ್.. ನೆಟ್ಟಿಗರು ಓದಲೇಬೇಕಾದ ಸ್ಟೋರಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧೋನಿ ಭರ್ಜರಿ ಬ್ಯಾಟಿಂಗ್​​ ಮಾಡಿದ್ರೂ ಹೀನಾಯ ಸೋಲು; ಪಂತ್​ ಪಡೆಗೆ ಮೊದಲ ಗೆಲುವು

https://newsfirstlive.com/wp-content/uploads/2024/03/MS-Dhoni-5.jpg

Load More