newsfirstkannada.com

BREAKING: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಲಂಚದಲ್ಲಿ ಭಾಗಿ ಎಂದ ಹೈಕೋರ್ಟ್‌; ಮಹತ್ವದ ಆದೇಶ

Share :

Published April 9, 2024 at 4:48pm

Update April 9, 2024 at 5:42pm

    ಅರವಿಂದ್‌ ಕೇಜ್ರಿವಾಲ್ ಲಂಚ ತೆಗೆದುಕೊಳ್ಳುವುದಲ್ಲಿ ಭಾಗಿಯಾಗಿದ್ದಾರೆ

    ಬೇರೆಯವರ ಜೊತೆ ಸೇರಿ ಷಡ್ಯಂತ್ರ ನಡೆಸಿರುವುದಕ್ಕೆ ಸಾಕ್ಷ್ಯಗಳು ಇವೆ

    ಸಿಎಂ ಆದವರಿಗೆ ಯಾವುದೇ ವಿಶೇಷ ಹಕ್ಕು, ಸೌಲಭ್ಯಗಳು ಇರುವುದಿಲ್ಲ

ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ಲೈಸೆನ್ಸ್‌ಗೆ ಅನುಮತಿಗಾಗಿ ನಡೆದಿದೆ ಎನ್ನಲಾದ 100 ಕೋಟಿ ಹಗರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅರವಿಂದ್ ಕೇಜ್ರಿವಾಲ್ ಅವರ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್ ಲಂಚ ತೆಗೆದುಕೊಳ್ಳುವುದಲ್ಲಿ ಭಾಗಿಯಾಗಿದ್ದಾರೆ. ಬೇರೆಯವರ ಜೊತೆ ಸೇರಿ ಷಡ್ಯಂತ್ರ ನಡೆಸಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಅರ್ಜಿ ಬಗ್ಗೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ಕೇಜ್ರಿವಾಲ್ ಬಂಧಿಸಲು ಬೇಕಾಗುವಷ್ಟು ಸಾಕ್ಷ್ಯಗಳು ಇ.ಡಿ ಬಳಿ ಇವೆ. ಕೇಜ್ರಿವಾಲ್ ಅವರು ತನಿಖೆಗೆ ಸಮನ್ಸ್ ಕೊಟ್ಟಾಗ ಹಾಜರಾಗಿಲ್ಲ. ಕೇಜ್ರಿವಾಲ್‌ರಿಂದ ಆದ ವಿಳಂಬ ಬೇರೆ ಆರೋಪಿಗಳ ಮೇಲೂ ಪರಿಣಾಮ ಬೀರುತ್ತೆ.

ಇದನ್ನೂ ಓದಿ: ತಿಹಾರ್ ಜೈಲು ಪಾಲಾದ ಕೇಜ್ರಿವಾಲ್.. ದೆಹಲಿ ಸಿಎಂ ಆನ್ಸರ್ ಕೇಳಿ, ಕೇಳಿ ED ಅಧಿಕಾರಿಗಳು ಸುಸ್ತು!

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾನೂನನ್ನು ಪಾಲಿಸಿದ್ದಾರೆ. ಸಿಎಂಗೆ ಯಾವುದೇ ವಿಶೇಷ ಹಕ್ಕು, ಸೌಲಭ್ಯಗಳು ಇಲ್ಲ. ಜಡ್ಜ್‌ಗಳು ಕಾನೂನಿಗೆ ಬದ್ದರಾಗಿರುತ್ತಾರೆಯೇ ಹೊರತು ರಾಜಕೀಯದಿಂದಲ್ಲ. ಕೇಜ್ರಿವಾಲ್ ಅಪರಾಧದ ಹಣವನ್ನ ಬಳಸಿದ್ದಾರೆ. ಅರವಿಂದ್‌ ಕೇಜ್ರಿವಾಲ್ ವೈಯಕ್ತಿಕವಾಗಿ, ಆಪ್ ಸಂಚಾಲಕರಾಗಿ ಲಂಚ ತೆಗೆದುಕೊಳ್ಳುವುದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ದೆಹಲಿ ಅಬಕಾರಿ ಹಗರಣದಲ್ಲಿ ಬೇರೆಯವರ ಜೊತೆ ಸೇರಿ ಷಡ್ಯಂತ್ರ ನಡೆಸಿರುವುದನ್ನು ಸಾಕ್ಷ್ಯಗಳು ತೋರಿಸುತ್ತಿವೆ. ಆಪ್ ಪಕ್ಷದ ಸಂಚಾಲಕರಾಗಿ ಕಿಕ್ ಬ್ಯಾಕ್ ಪಡೆದಿದ್ದಾರೆ. ಜಾಮೀನು ನೀಡಿಕೆ ನ್ಯಾಯಾಂಗದ ವಿವೇಚನೆಗೆ ಬಿಟ್ಟಿದ್ದು. ಅಪ್ರೂವರ್‌ಗೆ ಕ್ಷಮೆ ನೀಡುವುದನ್ನು ಕೋರ್ಟ್ ನಿರ್ಧರಿಸುತ್ತೆ. ಅಪ್ರೂವರ್ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಂಡಿದೆ, ಇ.ಡಿ. ಅಲ್ಲ. ಅಪ್ರೂವರ್ ಅನ್ನು ಅನುಮಾನಿಸುವುದು, ಜಡ್ಜ್ ಅನ್ನು ಅನುಮಾನಿಸಿದಂತೆ. ಚುನಾವಣಾ ಬಾಂಡ್ ಯಾರು ಖರೀದಿಸಿದ್ದಾರೆ ಎಂಬುದು ಕೋರ್ಟ್‌ಗೆ ಸಂಬಂಧಿಸಿದ್ದಲ್ಲ ಎಂದು ಹೈಕೋರ್ಟ್ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಲಂಚದಲ್ಲಿ ಭಾಗಿ ಎಂದ ಹೈಕೋರ್ಟ್‌; ಮಹತ್ವದ ಆದೇಶ

https://newsfirstlive.com/wp-content/uploads/2024/03/Aravind-Kejriwal.jpg

Load More