newsfirstkannada.com

×

ಭೀಕರ ಮಳೆಗೆ ಮೂವರು UPSC ಅಭ್ಯರ್ಥಿಗಳು ಸಾವು.. ಪೋಷಕರ ಕಣ್ಣೀರು!

Share :

Published July 28, 2024 at 7:40pm

Update July 28, 2024 at 7:41pm

    ದೆಹಲಿ ದುರಂತದಲ್ಲಿ ಮೃತಪಟ್ಟ ಮೂವರು ವಿದ್ಯಾರ್ಥಿಗಳ ಪೋಷಕರ ಆಕ್ರೋಶ

    ಇದೇ ಸ್ಥಿತಿ ಮುಂದುವರಿದರೆ ನಾವು ಮಕ್ಕಳನ್ನು ಓದಲು ಕಳಿಸೋದು ಹೇಗೆ..?

    ವ್ಯವಸ್ಥೆ, ಸರ್ಕಾರದ ವಿರುದ್ಧ ಹರಿಹಾಯ್ದ ಮೃತ ವಿದ್ಯಾರ್ಥಿಗಳ ಪೋಷಕರು

ನವದೆಹಲಿ: ಇಂತಹ ಪರಿಸ್ಥಿತಿಯೇ ಮುಂದುವರೆದರೆ ಯಾವ ಪೋಷಕರು ಮಕ್ಕಳನ್ನು ಓದಲು ಆಚೆ ಕಳುಹಿಸುತ್ತಾರೆ. ಇದು ರಾಷ್ಟ್ರ ರಾಜಧಾನಿಯಾ..? ಇದರ ಸ್ಥಿತಿಯೇ ಹೀಗಾದ್ರೆ ದೇಶದ ಉಳಿದ ನಗರಗಳ ಸ್ಥಿತಿ ಹೇಗೆ. ಇವೆಲ್ಲ ಮಾತುಗಳು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಜೀವ ಕಳೆದುಕೊಂಡ ಯುಪಿಎಸ್ಸಿ ಅಭ್ಯರ್ಥಿಗಳ ಪೋಷಕರದ್ದು. ಮಾಧ್ಯಮಗಳ ಎದುರು ಒಡಲ ಉರಿಯನ್ನು ಆಚೆ ಹಾಕಿರುವ ಮೃತರ ಪೋಷಕರು, ರಾಷ್ಟ್ರ ರಾಜಧಾನಿಯಲ್ಲಿರುವ ವ್ಯವಸ್ಥೆಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಇದನ್ನೂ ಓದಿ: IAS ಕೋಚಿಂಗ್​ ಸೆಂಟರ್​​ಗೆ ನೀರು ನುಗ್ಗಿ ಅನಾಹುತ; ಪ್ರಾಣ ಕಳೆದುಕೊಂಡ ಮೂರು ವಿದ್ಯಾರ್ಥಿಗಳು.. ಆಗಿದ್ದೇನು?

ದೆಹಲಿಯ ರಾಜೇಂದ್ರ ನಗರದಲ್ಲಿರುವ ಐಎಎಸ್ ಕೋಚಿಂಗ್​ ಸೆಂಟರ್​ವೊಂದಕ್ಕೆ ನೀರು ನುಗ್ಗಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ಭೀಕರ ಘಟನೆಯೊಂದು ಇಂದು ನಡೆದು ಹೋಗಿದೆ. ಕಟ್ಟಡದ ಬೇಸ್​ಮೆಂಟ್​ನಲ್ಲಿ ವಿದ್ಯಾರ್ಥಿಗಳಿಗೆ ಓದಲು ಅಂತ ಲೈಬ್ರರಿಯ ವ್ಯವಸ್ಥೆ ಮಾಡಲಾಗಿತ್ತು. ದೆಹಲಿಯ ಭೀಕರ ಮಳೆ ಬಿದ್ದ ಕಾರಣ ನುಗ್ಗಿ ಬಂದ ನೀರು ಕಟ್ಟಡದ ಇಡೀ ಕೆಳಮಹಡಿಯನ್ನೇ ತೆಗೆದುಕೊಂಡುಬಿಟ್ಟಿತ್ತು. ನಡೆದ ಈ ಆನಾಹುತದಲ್ಲಿ ಮೂವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಈ ಭೀಕರ ದುರಂತದಿಂದಾಗಿ ವಿದ್ಯಾರ್ಥಿಗಳೆಲ್ಲಾ ಪ್ರತಿಭಟನೆಗೆ ಇಳಿದಿದ್ದರು. ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈಗ ದೆಹಲಿಗೆ ಆಗಮಿಸಿರುವ ಮೃತರ ಕುಟುಂಬಸ್ಥರು ಕೂಡ ಅದೇ ಆಕ್ರೋಶವನ್ನು ಆಚೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಚರಂಡಿ ಪ್ರವಾಹಕ್ಕೆ ಕೊಚ್ಚಿಹೋದ IAS ಕನಸು.. ಶ್ರೇಯಾ ಯಾದವ್ ಕುಟುಂಬದ ಭರವಸೆ ಛಿದ್ರ, ಛಿದ್ರ..

ದುರಂತದಲ್ಲಿ ಸಾವನ್ನಪ್ಪಿರುವ ಶ್ರೇಯಾ ಅವರ ಸಹೋದರ ಅಭಿಷೇಕ್ ಯಾದವ್ ದೆಹಲಿಯ ಮೂಲಭೂತ ವ್ಯವಸ್ಥೆಗಳ ಕುರಿತು, ಕೋಚಿಂಗ್ ಸೆಂಟರ್​ನ ಬೇಜವಾಬ್ದಾರಿ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡಳಿತ ಮಂಡಳಿ, ಸರ್ಕಾರ ಇದೇ ರೀತಿ ತಮ್ಮ ಬೇಜವಾಬ್ದಾರಿಯನ್ನು ಮುಂದುವರಿಸಿದರೆ, ಯಾರು ತಾನೆ ತಮ್ಮ ಮಕ್ಕಳನ್ನು ಓದಲು ಹೊರ ಊರುಗಳಿಗೆ ಕಳುಹಿಸಲು ಮುಂದಾಗುತ್ತಾರೆ ಎಂದು ಪ್ರಶ್ನಿಸಿಸದ್ದಾರೆ. ಶ್ರೇಯಾ ಮನೆಯಲ್ಲಂತು ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಮಳೆಗೆ ಮೂವರು UPSC ಅಭ್ಯರ್ಥಿಗಳು ಸಾವು.. ಪೋಷಕರ ಕಣ್ಣೀರು!

https://newsfirstlive.com/wp-content/uploads/2024/07/connect-with-deads-1-1.jpg

Load More