newsfirstkannada.com

ಭಾರತದ ಮೊದಲ eSIM ಇದು! ಇನ್ಮುಂದೆ ರೋಮಿಂಗ್ ಸಮಸ್ಯೆಗೆ​ ಹೇಳಿ ಟಾಟಾ ಗುಡ್​ ಬೈ

Share :

Published August 15, 2024 at 2:56pm

Update August 15, 2024 at 3:01pm

    150 ದೇಶದ ಟೆಲಿಕಾಂ ಕಂಪನಿಯ ಜೊತೆಗೆ ಪಾಲುದಾರಿಕೆ

    ಇ-ಸಿಮ್​ ಡಿಜಿಟಲ್​​ ಆವೃತ್ತಿಯಾಗಿದ್ದು, ಎಂಬೆಡ್​ ಸಿಮ್​ ಆಗಿದೆ

    2028ಕ್ಕೆ eSim​ ಬಳಕೆದಾರರ ಸಂಖ್ಯೆ 268 ಮಿಲಿಯನ್​ ತಲುಪುವ ನಿರೀಕ್ಷೆಯಿದೆ

ಭಾರತಕ್ಕೆ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ದೇಶವು ಸಾಕಷ್ಟು ಏರಿಳಿತದ ಜೊತೆಗೆ ಪ್ರಗತಿಯನ್ನು ಸಾಧಿಸುತ್ತಾ ಬಂದಿದೆ. ಇದೀಗ ನೆಟ್​ವರ್ಕ್​ನಲ್ಲಿ ಕ್ರಾಂತಿಯನ್ನು ಉಂಟುಮಾಡಲು ಭಾರತದ ಮೊದಲ ಇ-ಸಿಮ್​​ ಸೇವೆಯನ್ನು ಪ್ರಾರಂಭಿಸಿದೆ. ಮಾತ್ರವಲ್ಲದೆ ಅಂತರಾಷ್ಟ್ರೀಯ ಸಂಪರ್ಕ ಸಾಧಿಸಲು ಹೊಸ ಅಧ್ಯಾಯಕ್ಕೆ ಮುನ್ನುಡಿ ಇಟ್ಟಿದೆ.

ದೆಹಲಿ ಮೂಲದ ಮ್ಯಾಟ್ರಿಕ್ಸ್​​ ಸೆಲ್ಯುಲರ್​ ಕಂಪನಿ ಭಾರತದ ಮೊದಲ ಇ-ಸಿಮ್​​ ಸೇವೆಯನ್ನು ಪ್ರಾರಂಭಿಸಿದೆ. 150 ದೇಶದ ಟೆಲಿಕಾಂ ಕಂಪನಿಯ ಜೊತೆಗೆ ಪಾಲುದಾರಿಕೆ ಹೊಂದಲು ಮುಂದಾಗಿದೆ. ಅಂದಹಾಗೆಯೇ ಇ-ಸಿಮ್​ ಡಿಜಿಟಲ್​​ ಆವೃತ್ತಿಯಾಗಿದ್ದು, ಎಂಬೆಡ್​ ಸಿಮ್​ ಆಗಿದೆ. ನೇರವಾಗಿ ಸಾಧನಗಳಲ್ಲಿ ಎಂಬೆಡ್​ ಮಾಡಲಾಗಿದೆ.

ಇದನ್ನೂ ಓದಿ: ಶಿವ ಶಿವ! ಆಗಸ್ಟ್​ 17ಕ್ಕೆ ಕಾದಿದೆಯಾ ಗಂಡಾಂತರ.. ನಾಸಾ ಕೊಟ್ಟಿದೆ ಎಚ್ಚರಿಕೆ ಸಂದೇಶ

ಮ್ಯಾಟ್ರಿಕ್ಸ್​​ ಸೆಲ್ಯುಲರ್​ ಕಂಪನಿ ಪರಿಚಯಿಸಿದ ಭಾರತದ ಮೊದಲ ಇ-ಸಿಮ್​​ ಸಾಫ್ಟ್​​ವೇರ್​ ಆಧಾರಿತ ಸಿಸ್ಟಮ್​​ ಆಗಿದ್ದು, ಸೆಲ್ಯುಲರ್​ ಮಾಹಿತಿಯನ್ನು ಒದಗಿಸುತ್ತದೆ.

ಇದನ್ನೂ ಓದಿ: ಕೆಂಪು ಕೋಟೆಗೆ ಮೋದಿ ಆಗಮಿಸಿದ್ದ ಕಾರು ಅಂತಿಂಥದ್ದಲ್ಲ.. ಕುಗ್ಗಲ್ಲ, ಬಗ್ಗಲ್ಲ, ಜಗ್ಗೋದೆ ಇಲ್ಲ.. ಬೆಲೆ ಎಷ್ಟು?

ಜಾಗತಿಕ ಮಾರುಕಟ್ಟೆಯಲ್ಲಿ ಇ-ಸಿಮ್​ ತನ್ನದೇ ಆದ ಬೆಳವಣಿಗೆ ಹೊಂದುತ್ತಿದೆ. 2028ರ ವೇಳೆಗೆ ಇ-ಸಿಮ್​ ಬಳಕೆದಾರರ ಸಂಖ್ಯೆ 268 ಮಿಲಿಯನ್​ ತಲುಪುವ ನಿರೀಕ್ಷೆಯಿದೆ. ಅಂತರಾಷ್ಟ್ರೀಯ ರೋಮಿಂಗ್​​ ವೆಚ್ಚದಿಂದಾಗಿ ಬೆಳವಣಿಗೆ ಕ್ಷಿಪ್ರಗತಿಯಲ್ಲಿ ಸಾಗಲಿದೆ ಎನ್ನಲಾಗುತ್ತಿದೆ. ರೋಮಿಂಗ್​ ಸೇವೆಗಳಿಗೆ ಹೋಲಿಸಿದಾಗ ಇ-ಸಿಮ್​ ಮೂಲಕ ಗಮನಾರ್ಹವಾಗಿ ಉಳಿಸಬಹುದಾಗಿದೆ. ಅಂದರೆ ಪ್ರತಿ ಜಿಬಿ ಡೇಟಾಗೆ 35 ಪ್ರತಿಶತದಷ್ಟು ವೆಚ್ಚವಾಗಲಿದೆ. ಇದರ ಮೂಲಕ ರೋಮಿಂಗ್​ ಶುಲ್ಕವನ್ನು ಕಡಿಮೆ ಮಾಡಲಿದೆ.

ಇದನ್ನೂ ಓದಿ: ಬರೀ 4 ನಿಮಿಷದಲ್ಲಿ ಚಾರ್ಜ್​​ ಫುಲ್​.. 320w ಚಾರ್ಜಿಂಗ್​ ವೈಶಿಷ್ಟ್ಯ ಪರಿಚಯಿಸುತ್ತಿದೆ ರಿಯಲ್​ಮಿ! ಎಷ್ಟು ಸುರಕ್ಷಿತ?

ಮತ್ತೊಂದೆಡೆ ಡೇಟಾ ಬೇಡಿಕೆ ಹೆಚ್ಚಾಗುತ್ತಿದೆ. 2028ರ ವೇಳೆಗೆ 1.5 ಶತಕೋಟಿ ಪೆಟಾಬೈಟ್​​ಗಳಷ್ಟು ಡೇಟಾ ಬಳಕೆಯಾಗುವ ನಿರೀಕ್ಷೆಯಿದೆ. ಸಿನಿಮಾ ಸ್ಟ್ರೀಮಿಂಗ್​, ಸಾಮಾಜಿಕ ಜಾಲತಾಣ , ಮೊಬೈಲ್​ ಗೇಮಿಂಗ್​ ಹೆಚ್ಚುತ್ತಿರುವ ಕಾರಣ ಡೇಟಾ ಬಳಕೆಗೆ ಹೆಚ್ಚು ಉತ್ತೇಜನ ಸಿಗಲಿದೆ.

ಇನ್ನು ಭಾರತದಲ್ಲಿ ಇ-ಸಿಮ್​ ಮಾರುಕಟ್ಟೆ ದೊಡ್ಡಗತಿಯಲ್ಲಿ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. 2032ರ ಅಂತ್ಯಕ್ಕೆ $21.24 ಶತಕೋಟಿ ಮೌಲ್ಯವನ್ನು ಮೀರಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತದ ಮೊದಲ eSIM ಇದು! ಇನ್ಮುಂದೆ ರೋಮಿಂಗ್ ಸಮಸ್ಯೆಗೆ​ ಹೇಳಿ ಟಾಟಾ ಗುಡ್​ ಬೈ

https://newsfirstlive.com/wp-content/uploads/2024/08/Network.jpg

Load More