newsfirstkannada.com

ಕೆಂಪು ಕೋಟೆಗೆ ಮೋದಿ ಆಗಮಿಸಿದ್ದ ಕಾರು ಅಂತಿಂಥದ್ದಲ್ಲ.. ಕುಗ್ಗಲ್ಲ, ಬಗ್ಗಲ್ಲ, ಜಗ್ಗೋದೆ ಇಲ್ಲ.. ಬೆಲೆ ಎಷ್ಟು?

Share :

Published August 15, 2024 at 12:44pm

Update August 15, 2024 at 12:45pm

    ಇಂದು ದೇಶದಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

    ರೇಂಜ್​ ರೋವರ್​​​ ಸೆಂಟಿನೆಲ್​ ಕಾರಿನಲ್ಲಿ ಬಂದ ಪ್ರಧಾನಿ ಮೋದಿ

    ಯಾವುದೇ ಸ್ಫೋಟಗಳನ್ನು ಎದುರಿಸುವ ಸಾಮರ್ಥ್ಯ ಈ ಕಾರಿಗಿದೆ

78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಂದು ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದರು. ಧ್ವಜಾರೋಹಣದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನಿ ಮೋದಿ ಕೆಂಪು ಕೋಟೆಗೆ ಕಪ್ಪು ಬಣ್ಣದ ರೇಂಜ್​ ರೋವರ್​ ಕಾರಿನಲ್ಲಿ ಬಂದರು. ಮೋದಿ ಆಗಮಿಸಿದ ರೇಂಜ್​ ರೋವರ್​​​ ಸೆಂಟಿನೆಲ್​ ಕಾರಿಗೆ ಬೆಂಗಾವಲಾಗಿ ಫಾರ್ಚುನರ್ ಕಾರು ಆಗಮಿಸಿತು. ಆದರೆ ಫಾರ್ಚುನರ್​ಗಿಂದ ಮೋದಿ ಬಳಸುವ ರೇಂಜ್​ ರೋವರ್​ ಕಾರಿ ಶಕ್ತಿಶಾಲಿಯಾಗಿದ್ದು, ಹಲವು ವಿಶೇಷತೆಯನ್ನು ಹೊಂದಿದೆ. ಯಾವುದೇ ಸ್ಫೋಟಗಳನ್ನು ಎದುರಿಸುವ ತಾಖತ್ತನ್ನು ಕಾರು ಹೊಂದಿದೆ. ಅಂದಹಾಗೆಯೇ ಮೋದಿ ಬಳಸುವ ಕಾರಿನ ಕೆಲವು ಕುತೂಹಲಕಾರಿ ಅಂಶಗಳು ಇಲ್ಲಿವೆ.

ಇದನ್ನೂ ಓದಿ: ಬರೀ 4 ನಿಮಿಷದಲ್ಲಿ ಚಾರ್ಜ್​​ ಫುಲ್​.. 320w ಚಾರ್ಜಿಂಗ್​ ವೈಶಿಷ್ಟ್ಯ ಪರಿಚಯಿಸುತ್ತಿದೆ ರಿಯಲ್​ಮಿ! ಎಷ್ಟು ಸುರಕ್ಷಿತ?

ಮೋದಿ ಬಳಸುವ ಕಾರು ಹೇಗಿದೆ?

ಮೋದಿ ಬಳಸುವ ಕಾರು ವಿಶ್ವದ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಒಂದು. ಈ ಕಾರಿನ ಮೇಲೆ ಯಾವುದೇ ಸ್ಫೋಟ ನಡೆದರು ಪರಿಣಾಮ ಬೀರುವುದಿಲ್ಲ. ಎಕೆ47 ದಾಳಿಯನ್ನು ಮತ್ತು ಐಇಡಿ ಸ್ಫೋಟವನ್ನು ಈ ಕಾರು ತಡೆಯುವ ಸಾಮರ್ಥ್ಯ ಹೊಂದಿದೆ.

​ಕಾರಿನಲ್ಲಿದೆ ವಿಶೇಷ ಟೈರ್​

ಕಾರಿನ ಟೈರ್​ ಕೂಡ ದಾಳಿಯನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಒಂದು ವೇಳೆ ಹಾನಿಯಾದರು 100 ಕಿ.ಮೀಗಿಂತ ಹೆಚ್ಚು ದೂರವನ್ನು ಕ್ರಮಿಸುತ್ತದೆ. ಕಚ್ಚಾರಸ್ತೆಯಲ್ಲೂ ಓಡಾಡುವ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ: ವಾರೆವ್ಹಾ! 5 ಡೋರ್​​ನ ಥಾರ್​​ ರೋಕ್ಸ್​ ಪರಿಚಯಿಸಿದ ಮಹೀಂದ್ರಾ.. ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದ್ಯಾ?

ಯಾವುದೇ ಹಾನಿಯಾಗಲ್ಲ

ರೇಂಜ್​ ರೋವರ್​​​ ಸೆಂಟಿನೆಲ್ ಅನಿಲ ಅಥವಾ ರಾಸಾಯನಿಕ ದಾಳಿಯನ್ನು ತಡೆಯುತ್ತದೆ. ಇನ್ನು ಕಾರಿನಲ್ಲಿ ಕುಳಿತ ವ್ಯಕ್ತಿಗೆ ಯಾವುದೇ ಹಾನಿಯಾಗುವುದಿಲ್ಲ. ಅಂತಹ ವೈಶಿಷ್ಟ್ಯವನ್ನು ಮೋದಿ ಬಳಸುವ ಕಾರು ಹೊಂದಿದೆ.

ಶಕ್ತಿಶಾಲಿ ಎಂಜಿನ್

ರೇಂಜ್​ ರೋವರ್​​​ ಸೆಂಟಿನೆಲ್ ಕಾರು ಅತ್ಯಂತ ಶಕ್ತಿಶಾಲಿ ಎಂಜಿನ್​ ಹೊಂದಿದೆ. 5.0 ಲೀಟರ್​, ಸೂಪರ್​ ಚಾರ್ಜ್ಡ್ ಎಂಜಿನ್​​ ಅನ್ನು ರೇಂಜ್​ ರೋವರ್​​​ ಸೆಂಟಿನೆಲ್​ನಲ್ಲಿ ಬಳಸಲಾಗಿದೆ. ಇನ್ನು ಈ ಕಾರು ಗರಿಷ್ಠ 375 ಬಿಹೆಚ್​ಪಿ ಪವರ್​ ಮತ್ತು 508 ಎನ್​ಎಮ್​ ಗರಿಷ್ಠ ಟಾರ್ಕ್​​ ಉತ್ಪಾದಿಸುತ್ತದೆ.​​

ಬೆಲೆ ಎಷ್ಟಿದೆ?

ಮೋದಿ ಬಳಸುವ ರೇಂಜ್​ ರೋವರ್​​​ ಸೆಂಟಿನೆಲ್ ಕಾರನ್ನು ಕೊಂಚ ವಿಭಿನ್ನವಾಗಿ ವಿನ್ಯಾಸ ಮಾಡಲಾಗಿದೆ. ಅಂದಹಾಗೆಯೇ ಈ ಕಾರಿನ ಬೆಲೆ 10 ರಿಂದ 15 ಕೋಟಿ ರೂಪಾಯಿ ಇರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಂಪು ಕೋಟೆಗೆ ಮೋದಿ ಆಗಮಿಸಿದ್ದ ಕಾರು ಅಂತಿಂಥದ್ದಲ್ಲ.. ಕುಗ್ಗಲ್ಲ, ಬಗ್ಗಲ್ಲ, ಜಗ್ಗೋದೆ ಇಲ್ಲ.. ಬೆಲೆ ಎಷ್ಟು?

https://newsfirstlive.com/wp-content/uploads/2024/08/Range-Rover-Car-Modi.jpg

Load More