newsfirstkannada.com

ಪೇಪರ್​ ಗೋಡೌನ್​​ನಲ್ಲಿ ಭೀಕರ ಅಗ್ನಿ ಅವಘಡ.. ಓರ್ವ ಕಾರ್ಮಿಕ ಸಾವು

Share :

Published May 16, 2024 at 6:10am

    ಮನೆಯವ್ರು ಕರೆಯೋಕೆ ಬಂದಾಗ ಬರುತ್ತೇನೆಂದು ಹೇಳಿ ಕಳಿಸಿದ್ದನು

    ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ

    ಕಬೋರ್ಡ್​ ಹಿಂದೆ ವ್ಯಕ್ತಿ ಸುಟ್ಟು ಕರಕಲಾಗಿ ಬಿದ್ದಿರುವುದು ಪತ್ತೆಯಾಗಿದೆ

ನವದೆಹಲಿ: ಅಕ್ರಮವಾಗಿ ನಡೆಸುತಿದ್ದ 2 ಅಂತಸ್ತಿನ ಪೇಪರ್​ ಗೋಡೌನ್‌ಗೆ ಬೆಂಕಿ ಬಿದ್ದು ವ್ಯಕ್ತಿಯೊಬ್ಬರು ಸಜೀವ ದಹನ ಆಗಿರೋ ಘಟನೆ ಪೂರ್ವ ದೆಹಲಿಯ ಶಕರ್‌ಪುರ್ ಏರಿಯಾದಲ್ಲಿ ನಡೆದಿದೆ.

ಗೋಡೌನ್​​ನಲ್ಲಿ ಕೆಲಸ ಮಾಡ್ತಿದ್ದ ಸತೇಂದ್ರ ಪಾಸ್ವಾನ್ (45) ಬೆಂಕಿಯಿಂದ ಸುಟ್ಟು ಮೃತಪಟ್ಟಿರುವ ವ್ಯಕ್ತಿ. ಇವರು ಪೇಪರ್​ ಗೋಡೌನ್​ನಲ್ಲಿ ಕೆಲಸ ಮಾಡಿ ಅಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಬೆಂಕಿ ಬೀಳುವ ಮೊದಲು ಮನೆಯವರು ಕರೆಯಲು ಬಂದಿದ್ದಾಗ ಬರುತ್ತೇನೆ ಎಂದು ಹೇಳಿ ಕಳಿಸಿದ್ದಾರೆ. ಹೀಗಾಗಿ ಬೆಂಕಿ ಬಿದ್ದಾಗ ವ್ಯಕ್ತಿಗೆ ಹೊರಗೆ ಹೋಗಲು ಆಗಿಲ್ಲ. ಇದರಿಂದ ಅಗ್ನಿಯಲ್ಲಿ ಸುಟ್ಟು ಗುರುತು ಸಿಗದಂತೆ ವ್ಯಕ್ತಿ ಕರಕಲು ಆಗಿದ್ದನು. ಗೋಡೌನ್​ಗೆ ಬೆಂಕಿ ಬಿದ್ದ ಮಾಹಿತಿ ತಿಳಿದ ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಾಯ್ ​ಫ್ರೆಂಡ್​​ಗೆ ದುಬಾರಿ ಗಿಫ್ಟ್​ ಕೊಡಿಸಲು ಮನೆ ಮಾಲಕಿಯನ್ನೇ ಕೊಂದ ಸುಂದರಿ.. ಸಿಕ್ಕಿಬಿದ್ದಿದ್ದೇ ರೋಚಕ!

ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಒಳ ಹೋಗಿ ಪರಿಶೀಲನೆ ನಡೆಸಿದಾಗ ಕಬೋರ್ಡ್​ ಹಿಂದೆ ವ್ಯಕ್ತಿ ಸುಟ್ಟು ಕರಕಲು ಆಗಿದ್ದು ಕಂಡು ಬಂದಿದೆ. ಈ ಹಿಂದೆಯು ಗೋಡೌನ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಇನ್ನು ಪೇಪರ್ ಗೋಡೌನ್ ಅನ್ನು ಅಕ್ರಮವಾಗಿ ನಡೆಸುತ್ತಿದ್ದ ಮಾಲೀಕ ಸೋನು ಕುಮಾರ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಸಂಬಂಧ ಶಕರ್‌ಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೇಪರ್​ ಗೋಡೌನ್​​ನಲ್ಲಿ ಭೀಕರ ಅಗ್ನಿ ಅವಘಡ.. ಓರ್ವ ಕಾರ್ಮಿಕ ಸಾವು

https://newsfirstlive.com/wp-content/uploads/2024/05/DELHI_FIRE.jpg

Load More