Advertisment

ಕೇವಲ 1 ರೂಪಾಯಿ ಟ್ಯಾಕ್ಸ್​ ಕಟ್ಟಲು ಬರೋಬ್ಬರಿ 50 ಸಾವಿರ ಫೀಸು.. ಏನಿದು ಸ್ಟೋರಿ?

author-image
Bheemappa
Updated On
ಕೇವಲ 1 ರೂಪಾಯಿ ಟ್ಯಾಕ್ಸ್​ ಕಟ್ಟಲು ಬರೋಬ್ಬರಿ 50 ಸಾವಿರ ಫೀಸು.. ಏನಿದು ಸ್ಟೋರಿ?
Advertisment
  • ಎಲ್ಲರು ಭಾರತದ ಟ್ಯಾಕ್ಸ್​ ಪದ್ಧತಿ ಗಣನೆಗೆ ತೆಗೆದುಕೊಳ್ಳಬೇಕಾ?
  • ಕೇವಲ 1 ರೂಪಾಯಿಗೆ ನೋಟಿಸ್ ನೀಡಿತ್ತಾ ಕಂದಾಯ ಇಲಾಖೆ
  • ಚಾರ್ಟರ್ಡ್ ಅಕೌಂಟೆಂಟ್​ಗೆ ಇಷ್ಟೊಂದು ಮೊತ್ತದ ಹಣ ಕಟ್ಟಬೇಕಾ?

ನವದೆಹಲಿ: ಕೇವಲ ಒಂದೇ 1 ರೂಪಾಯಿಯ ಟ್ಯಾಕ್ಸ್ ಕಟ್ಟಲು ಉದ್ಯಮಿಯೊಬ್ಬರು ಬರೋಬ್ಬರಿ 50 ಸಾವಿರ ರೂಪಾಯಿಗಳನ್ನು ಚಾರ್ಟರ್ಡ್ ಅಕೌಂಟೆಂಟ್​ಗೆ ಫೀಸ್​ ರೂಪದಲ್ಲಿ ನೀಡಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು ಭಾರತದ ತೆರಿಗೆ ಪದ್ಧತಿ ಕುರಿತು ಕೆಲ ಪ್ರಶ್ನೆಗಳು ಕೇಳಿ ಬಂದಿವೆ.

Advertisment

ಇದನ್ನೂ ಓದಿ: ಅಕ್ಕನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ತಮ್ಮ; ಅಸಲಿಗೆ ಆಗಿದ್ದೇನು?

ದೆಹಲಿ ಮೂಲದ ಉದ್ಯಮಿ ಅಪೂರ್ವ್ ಜೈನ್ ಎನ್ನುವರು ತಮ್ಮ ಎಕ್ಸ್​ ಅಕೌಂಟ್​ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. 1 ರೂಪಾಯಿ ತೆರಿಗೆ ಕಟ್ಟಬೇಕಾದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ನನಗೆ ನೋಟಿಸ್ ನೀಡಿದ್ದರು. ಈ 1 ರೂಪಾಯಿ ಟ್ಯಾಕ್ಸ್​ ಇತ್ಯರ್ಥ ಪಡಿಸಿ ಸರ್ಕಾರಕ್ಕೆ ಸಂದಾಯ ಮಾಡಲು ಚಾರ್ಟರ್ಡ್ ಅಕೌಂಟೆಂಟ್​ಗೆ 50,000 ರೂಪಾಯಿಗಳನ್ನು ನೀಡಿದ್ದೇನೆ. ಇಲ್ಲಿ ಜೋಕು ಮಾಡುತ್ತಿಲ್ಲ. ಎಲ್ಲರು ಈ ಟ್ಯಾಕ್ಸ್​ ಪದ್ಧತಿಯನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಎಕ್ಸ್​​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ಹೊಸ ಸೀರಿಯಲ್; ಕನ್ನಡ ಕಿರುತೆರೆಗೆ ನಟಿ ನಿತ್ಯಾರಾಮ್ ರೀ ಎಂಟ್ರಿ.. ಹೀರೋ? 

Advertisment

publive-image

ಇದು ಭಾರತದಲ್ಲಿನ ತೆರಿಗೆ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ. ಸಣ್ಣ ಸಮಸ್ಯೆಗಳಿಗೂ ದೊಡ್ಡ ಮೊತ್ತದ ಹಣ ಶುಲ್ಕದ ರೂಪದಲ್ಲಿ ನೀಡಬೇಕಿದೆ. ಸದ್ಯ ಉದ್ಯಮಿ ಅಪೂರ್ವ್ ಜೈನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ತೆರಿಗೆ ಇಲಾಖೆಯ ಅಸಮರ್ಥತೆ, ಅಪನಂಬಿಕೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರೆ ಇತರರು ಚಾರ್ಟರ್ಡ್ ಅಕೌಂಟೆಂಟ್​ ಫೀಸ್​ ಕುರಿತು ಪ್ರಶ್ನೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment