newsfirstkannada.com

ವಿರಾಟ್ ಕೊಹ್ಲಿ, ಗೌತಮ್ ಗಂಭೀರ್‌ ಜಗಳಕ್ಕೆ ಹೊಸ ಟ್ವಿಸ್ಟ್‌ ಕೊಟ್ಟ ದೆಹಲಿ ಪೊಲೀಸ್‌; ಏನದು?

Share :

Published March 30, 2024 at 8:13pm

  ಆರ್‌ಸಿಬಿ, ಕೆಕೆಆರ್‌ ಐಪಿಎಲ್‌ ಪಂದ್ಯದ ನಡುವೆ ಅಪರೂಪದ ಘಟನೆ

  ವಿರಾಟ್​ ಕೊಹ್ಲಿ, ಗೌತಮ್​ ಗಂಭೀರ್​​ ಒಟ್ಟಿಗೆ ಕಾಣಿಸಿಕೊಂಡ ಫೋಟೋ ವೈರಲ್

  ಜಗಳ ನಡೆದರೆ 112ಗೆ ಕರೆ ಮಾಡಿ ಎಂದು ಪೋಸ್ಟ್ ಮಾಡಿದ ದೆಹಲಿ ಪೊಲೀಸ್‌

ನವದೆಹಲಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆ ಆರ್‌ಸಿಬಿ, ಕೆಕೆಆರ್‌ ಮಧ್ಯೆ ಐಪಿಎಲ್‌ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಮೆಂಟರ್​​​ ಗೌತಮ್​ ಗಂಭೀರ್​​ ಒಟ್ಟಿಗೆ ಕಾಣಿಸಿಕೊಂಡ ದೃಶ್ಯ ಸಖತ್ ವೈರಲ್‌ ಆಗಿದೆ.

ವಿರಾಟ್‌ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಆತ್ಮೀಯತೆಯನ್ನ ನೋಡಿದ ಎಲ್ಲರೂ ಇಬ್ಬರು ಮುನಿಸು ಮರೆತು ಒಂದಾಗಿದ್ದಾರೆ. ಒಬ್ಬರನ್ನು ಒಬ್ಬರು ಮಾತಾಡಿಸಿ ಹಗ್​ ಮಾಡಿದ್ದಾರೆ. ಕೊಹ್ಲಿ, ಗಂಭೀರ್ ಜೊತೆ, ಜೊತೆಯಲ್ಲಿರುವ ಫೋಟೋ, ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: VIDEO: ದ್ವೇಷ ಮರೆತು ಒಂದಾದ ಕೊಹ್ಲಿ, ಗಂಭೀರ್​.. ಮೊದಲು ಮಾತಾಡಿದ್ದು ಯಾರು?

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಗೌತಮ್‌ ಗಂಭೀರ್ ಖುಷಿ, ಖುಷಿಯಾಗಿ ಮಾತನಾಡಿದ ಫೋಟೋ ದೆಹಲಿ ಪೊಲೀಸರ ಕಣ್ಣಿಗೆ ಬಿದ್ದಿದೆ. ಈ ಪೋಟೋವನ್ನು ಬಳಸಿಕೊಂಡಿರುವ ದೆಹಲಿ ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕ್ಯಾಂಪೇನ್‌ಗೆ ಬಳಸಿಕೊಂಡಿದ್ದಾರೆ.

ಕೊಹ್ಲಿ, ಗಂಭೀರ್ ಫೋಟೋ ಪೋಸ್ಟ್ ಮಾಡಿರುವ ದೆಹಲಿ ಪೊಲೀಸರು ವಿರಾಟ್ ಹಾಗೂ ಗಂಭೀರ್ ಮಧ್ಯೆ ಈಗ ಜಗಳವಿಲ್ಲ. ಬೇರೆ ಎಲ್ಲಿ ಆದರೂ ಜಗಳ ನಡೆದರೆ 112ಗೆ ಕರೆ ಮಾಡಿ. ದೆಹಲಿ ಪೊಲೀಸರು ನಿಮ್ಮ ಸೇವೆಗೆ ಸದಾ ಸಿದ್ಧರಿದ್ದಾರೆ. ನಿಮ್ಮ ಸಮಸ್ಯೆಗಳನ್ನು ನಾವು ಬಗೆಹರಿಸುತ್ತೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಪೊಲೀಸರ ದೂರವಾಣಿ ಸಂಖ್ಯೆ 112ಗೆ ಜಾಗೃತಿ ಮೂಡಿಸಲು ದೆಹಲಿ ಪೊಲೀಸರು ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಒಂದಾದ ಫೋಟೋವನ್ನು ಬಳಸಿಕೊಂಡಿದ್ದಾರೆ. ಕ್ರಿಕೆಟ್ ಆಟಗಾರರ ಮೂಲಕ ಜನರಿಗೆ ಜಾಗೃತಿಯ ಸಂದೇಶ ಸಾರಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿರಾಟ್ ಕೊಹ್ಲಿ, ಗೌತಮ್ ಗಂಭೀರ್‌ ಜಗಳಕ್ಕೆ ಹೊಸ ಟ್ವಿಸ್ಟ್‌ ಕೊಟ್ಟ ದೆಹಲಿ ಪೊಲೀಸ್‌; ಏನದು?

https://newsfirstlive.com/wp-content/uploads/2024/03/Virat-Kohli-Gambhir.jpg

Load More