newsfirstkannada.com

×

ಮಳೆಗಾಲದಲ್ಲಿ ಜನರನ್ನು ಬೆಂಬಿಡದೆ ಕಾಡ್ತಿದೆ ಡೇಂಜರಸ್​ ರೋಗ; ಬೆಂಗಳೂರಿಗರು ಓದಲೇಬೇಕಾದ ಸ್ಟೋರಿ!

Share :

Published September 7, 2023 at 5:11pm

Update September 7, 2023 at 5:12pm

    ಸಿಲಿಕಾನ್​ ಸಿಟಿ ಮಂದಿ ಓದಲೇಬೇಕಾದ ಸ್ಟೋರಿ ಇದು

    ಕಳೆದ 9 ತಿಂಗಳಲ್ಲಿ ಬೆಂಗಳೂರಿನಲ್ಲಿ ಹೆಚ್ಚಾಯ್ತು ಡೆಂಗ್ಯೂ

    ಡೆಂಗ್ಯೂ ತಡೆಗೆ ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ನಮ್ಮ ಕ್ಲಿನಿಕ್ ಅನ್ನು 12 ಗಂಟೆಗಳ ಕಾಲ ತೆರೆಯಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​​ ಮಾತಾಡಿದ್ದಾರೆ.

ನಗರದಲ್ಲಿ ಡೆಂಗ್ಯೂಗೆ 7 ಮಂದಿ ಸಾವನ್ನಪ್ಪಿದ್ದಾರೆ. ಮರಣ ಹೊಂದಿದ ಮೂವರ ಲ್ಯಾಬ್​ ರಿಪೋರ್ಟ್​​ ಬರಬೇಕಿದೆ. ಮಳೆಗಾಲದಲ್ಲಿ ಡೆಂಗ್ಯೂ ಕೇಸುಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಟೆಸ್ಟಿಂಗ್​​ ಹೆಚ್ಚು ಮಾಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ನಮ್ಮ ಕ್ಲಿನಿಕ್​​, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಲೆಕ್ಟ್​ ಮಾಡುವ ಸ್ಯಾಂಪಲ್​​ ಟೆಸ್ಟ್​​ ಮಾಡಲು ಸೂಚನೆ ಕೊಟ್ಟಿದ್ದೇನೆ. ಇದಕ್ಕೆ ಹೆಚ್ಚುವರಿ ಹಣ ಬೇಕಿದೆ. ಹೆಚ್ಚುವರಿ ಹಣ ಬೇಕು ಎಂದಾದರೆ ಇಲಾಖೆಯಿಂದ ನೀಡುತ್ತೇವೆ ಎಂದರು.

ಇನ್ನು, ಡೆಂಗ್ಯೂ ಮಾನಿಟರಿಂಗ್​​ ಆ್ಯಪ್​​ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯಿಂದ ರೆಡಿ ಆಗಲಿದೆ. ಬೆಂಗಳೂರಿಗೆ ಮಾತ್ರ ಈ ಆ್ಯಪ್​​ ರೆಡಿ ಮಾಡಿದ್ದೇವೆ. ನಾಳೆಯೇ ಈ ಆ್ಯಪ್​ ಲಾಂಚ್​ ಆಗಲಿದೆ. ಡೆಂಗ್ಯೂ ತಡೆಗೆ ಇದು ಸಹಾಯ ಮಾಡಲಿದೆ ಎಂದು ಹೇಳಿದರು.

ಡೆಂಗ್ಯೂ ಹೆಚ್ಚಳ

ಕಳೆದ ಜನವರಿಯಿಂದ ಸೆಪ್ಟೆಂಬರ್​​ 7ನೇ ತಾರೀಕಿನವರೆಗೂ 4926 ಡೆಂಗ್ಯೂ ಕೇಸ್​ ಪತ್ತೆ ಆಗಿವೆ. ಬೊಮ್ಮನಹಳ್ಳಿ 272, ದಾಸರಹಳ್ಳಿ 73, ಬೆಂಗಳೂರು ಪೂರ್ವ ವಲಯ 1218, ಮಹದೇವಪುರ 875, ಆರ್​​.ಆರ್​​ ನಗರ 457, ಬೆಂಗಳೂರು ದಕ್ಷಿಣ 1003, ಬೆಂಗಳೂರು ಪಶ್ಚಿಮ 635, ಯಲಹಂಕ 393 ಕೇಸ್​ಗಳು ವರದಿಯಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆಗಾಲದಲ್ಲಿ ಜನರನ್ನು ಬೆಂಬಿಡದೆ ಕಾಡ್ತಿದೆ ಡೇಂಜರಸ್​ ರೋಗ; ಬೆಂಗಳೂರಿಗರು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/09/dengue_cases.jpg

Load More